Saturday, November 23, 2024

ಶ್ವೇತ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಸ್ಯಾಹಾರಿ ಔತಣ

ಬೆಂಗಳೂರು: ಅಮೇರಿಕಾ ಸ್ಟೇಟ್ ವಿಸಿಟ್ ಗಾಗಿ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಗೌರವಾರ್ಥ ನಿನ್ನೆ ವಾಷಿಂಗ್ಟನ್ ನ ಶ್ವೇತ ಭವನದಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು.

ಅಮೇರಿಕಾದ ಪ್ರಥಮ ಮಹಿಳೆ ಜಿಲ್ ಬೈಡೆನ್ ಔತಣಕೂಟದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದರು.  ನರೇಂದ್ರ ಮೋದಿಯವರು ಸಂಪೂರ್ಣ ಸಸ್ಯಾಹಾರಿಯಾಗಿರುವುದರಿಂದ, ಅವರಿಗೋಸ್ಕರ ಔತಣಕೂಟದಲ್ಲಿ ಸಸ್ಯಾಹಾರಿ ಆಹಾರ ಪದಾರ್ಥಗಳನ್ನೇ ಸಿದ್ದಪಡಿಸಲಾಗಿತ್ತು. ಭಾರತೀಯ ಖಾದ್ಯ ತಯಾರಿಕೆಯಲ್ಲಿ ನಿಪುಣರಾಗಿರುವ ಶ್ವೇತಭವನದ ಪ್ರಧಾನ ಶೆಫ್ ನೀನಾ ಕರ್ಟೀಸ್,ಮೋದಿಯವರಿಗಾಗಿ ವಿಶೇಷ ಸಸ್ಯಾಹಾರಿ ಖಾಧ್ಯಗಳನ್ನು ಸಿದ್ದಪಡಿಸಿದ್ದರು.

ಇದನ್ನೂ ಓದಿ: 2 ಬಲ್ಬ್ ಇರುವ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ : ಕಂಗಲಾದ ಅಜ್ಜಿ

ನಿಂಬೆ ಹಣ್ಣಿನ ರಸ ಹಾಕಿ ತಯಾರಿಸಿದ ಸಾಸ್, ಕ್ರಿಸ್ಪ್ಡ್ ಮಿಲೆಟ್ ಕೇಕ್ಸ್, ಬೇಸಿಗೆ ಸ್ಕ್ವ್ಯಾಷ್‌ಗಳು, ಸಿರಿಧಾನ್ಯಗಳು ಮತ್ತು ಗ್ರಿಲ್ಡ್ ಕಾರ್ನ್ ಕರ್ನಲ್ ಸಲಾಡ್, ಕಲ್ಲಂಗಡಿ ಹಣ್ಣು, ಟ್ಯಾಂಗಿ ಆವಕಾಡೊ ಸಾಸ್, ಅಣಬೆಗಳು, ಸಿಹಿ ತಿಂಡಿಯಾಗಿ ಗುಲಾಬಿ ಮತ್ತು ಏಲಕ್ಕಿ-ಇನ್ಫ್ಯೂಸ್ಡ್ ಸ್ಟ್ರಾಬೆರಿ ಶಾರ್ಟ್‌ಕೇಕ್. ಇದೇ ವೇಳೆ, ಔತಣಕೂಟಕ್ಕೆ ಅಮೇರಿಕಾದ 400ಕ್ಕೂ ಹೆಚ್ಚು ಗಣ್ಯರನ್ನು ಆಹ್ವಾನಿಸಲಾಗಿತ್ತು. ಅವರಿಗಾಗಿ ಪ್ರತ್ಯೇಕವಾಗಿ ಮಾಂಸಾಹಾರ ಮತ್ತು ಮೀನಿನ ಬಗೆ ಬಗೆಯ ಖಾದ್ಯಗಳನ್ನೂ ಸಹ ತಯಾರಿಸಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಶ್ವೇತಭವನಕ್ಕೆ ಆಗಮಿಸುತ್ತಿದ್ದಂತೆಯೇ  ಪ್ರಸಿಡೆಂಟ್ ಬ್ಯಾಂಡ್ ತಂಡದವರು ಭಾರತೀಯ ಸಂಗೀತವನ್ನು ನುಡಿಸಿ ಸ್ವಾಗತಕೋರಿದ್ದು ವಿಶೇಷವಾಗಿತ್ತು. ಅಧ್ಯಕ್ಷ ಜೋ ಬೈಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡೆನ್ ಶ್ವೇತಭವನದ ದ್ವಾರದ ಬಳಿಯೇ ಉಪಸ್ಥಿತರಿದ್ದು, ನರೇಂದ್ರ ಮೋದಿಯವರನ್ನು ಸ್ವಾಗತಿಸಿದರು. ಅಲ್ಲದೆ, ಔತಣಕೂಟದಲ್ಲು ಜಿಲ್ ಬೈಡೆನ್  ಸ್ವತಃ ನರೇಂದ್ರ ಮೋದಿಯವರಿಗೆ ಉಪಚರಿಸಿ, ಅವರಿಗಾಗಿಯೇ ತಯಾರಿಸಲಾಗಿದ್ದ ವಿಶೇಷ ಖಾದ್ಯಗಳನ್ನು ಪರಿಚಯಿಸಿದರು. ಸಸ್ಯಾಹಾರಿ ಖಾದ್ಯಗಳನ್ನು ಸವಿದ ನರೇಂದ್ರ ಮೋದಿ, ಅದನ್ನು ತಯಾರಿಸಿದ ಶೆಫ್ ನೀನಾ ಕರ್ಟೀಸ್  ತಂಡದವರನ್ನು ಅಭಿನಂದಿಸಿ, ಪ್ರಶಂಸಿಸಿದರು.

 

 

 

RELATED ARTICLES

Related Articles

TRENDING ARTICLES