Wednesday, January 22, 2025

ಕುಡಿದ ಮತ್ತಲ್ಲಿ ಪೆಟ್ರೋಲ್​​ ಸುರಿದುಕೊಂಡು ತಾನೇ ಬೆಂಕಿ ಹಚ್ಚಿಕೊಂಡ ಭೂಪ

ತುಮಕೂರು: ಕುಡಿದ ಮತ್ತಲ್ಲಿ ಹೆಂಡತಿಯನ್ನು ಎದರಿಸಲು ಹೋಗಿ ಪೆಟ್ರೋಲ್ ಸುರಿದುಕೊಂಡ ಬೆಂಕಿ ಹಂಚಿಕೊಂಡ ಆಸ್ಪತ್ರೆ ಸೇರಿದ ಘಟನೆ ಕೊರಟಗೆರೆ ತಾಲೂಕಿನ ತಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹೌದು, ಕ್ಷುಲ್ಲಕ ಕಾರಣಕ್ಕೆ ಗಂಡ -ಹೆಂಡತಿ ಜಗಳದ ಸಂದರ್ಭದಲ್ಲಿ ಪಾನಮತ್ತ ಗಂಡ ಹೆಂಡತಿಯನ್ನು ಎದುರಿಸಲು ತನ್ನ ದ್ವಿಚಕ್ರವಾಹನದ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಈ ದುರ್ಘಟನೆ ಜರಗಿದ್ದು, ಕೃಷ್ಣಪ್ಪನ ಮಗ ವಿನೋದ್ (35 ವರ್ಷ) ಬೆಂಕಿ ಹಚ್ಚಿಕೊಂಡ ದುರ್ದೈವಿಯಾಗಿದ್ದಾನೆ.ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿನೋದ ಮೂಲತಃ ಆಂಧ್ರದ ಹಿಂದೂಪುರದ ಹೌಸಿಂಗ್ ಬೋರ್ಡ್ ಗ್ರಾಮದವನಾಗಿದ್ದು ತಂಗನಹಳ್ಳಿ ಆಶಾ ಎಂಬುವವರನ್ನು ಪಕ್ಕದ ಮನೆಯ ಸಂಬಂಧಿಕರಿಂದ ಪರಿಚಯವಾಗಿಸಿ ಕೊಂಡು ಇಬ್ಬರ ನಡುವೆ ಪ್ರೇಮಾಂಕುಶವಾಗಿ ಮದುವೆಯಾಗಿದ್ದ ಹೆಂಡತಿ ಮನೆಯಲ್ಲಿ ವಾಸವಿದ್ದ ಎನ್ನಲಾಗಿದ್ದು, ಮದುವೆಯಾದ ಒಂದೆರಡು ವರ್ಷ ಬಿಟ್ರೆ ಕಳೆದ 8-10 ವರ್ಷಗಳಿಂದಲೂ ಇಲ್ಲಿವರೆಗೂ ಯಥೇಚ್ಛವಾಗಿ ಪಾನಮತ್ತನಾಗಿ ಪ್ರತಿದಿನ ಮನೆಯಲ್ಲಿ ಜಗಳವಾಡುತ್ತಿದ್ದ ಎನ್ನಲಾಗಿದೆ.

ಕ್ಷುಲ್ಲಕ ಕಾರಣಗಳಿಂದ ಅನಾವಶ್ಯಕವಾಗಿ ಪ್ರತಿದಿನ ವಿನೋದ ಜಗಳವಾಡುತ್ತಿದ್ದ ಎನ್ನಲಾಗಿದ್ದು, ಈತ ಗಾರೆ ಕೆಲಸ ಮಾಡಿಕೊಂಡಿದ್ದು ಬರುವ ಹಣಪೂರ ಕುಡಿಯೋಕೆ ಬಳಸಿಕೊಂಡು ಹೆಂಡತಿಯೊಂದಿಗೆ ಯಾವಾಗಲೂ ಜಗಳವಾಡುತ್ತಿದ್ದ ಎನ್ನಲಾಗಿದೆ.

ಆಂಬುಲೆನ್ಸ್ ಗೆ ಪರದಾಟ

ವಿನೋದ ಬೆಂಕಿ ಹಚ್ಚಿಕೊಂಡು ಚೀರಾಡುತ್ತಿರುವಾಗ ಹೆಂಡತಿ ಹಾಗೂ ಸಾರ್ವಜನಿಕರು ವಿನೋದನನ್ನ ಬೆಂಕಿಯಿಂದ ರಕ್ಷಿಸಲು ಮಣ್ಣು ಹಾಗೂ ಮರಳು ಸುರಿದು ಜೊತೆಗೆ ಬಟ್ಟೆ ಸುತ್ತಿ ಬೆಂಕಿ ನಂದಿಸಿದ್ದಾರೆ ಎನ್ನಲಾಗಿದ್ದು, ನಂತರ ಆಂಬುಲೆನ್ಸ್ ಗೆ ಕರೆ ಮಾಡಿದ್ರೆ ಕೋಳಾಲ, ತೋವಿನಕೆರೆ ಹಾಗೂ ಕೇಂದ್ರ ಭಾಗ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿಯೂ 108 ಆಂಬುಲೆನ್ಸ್ ಸಿಗದೇ ಸಾರ್ವಜನಿಕರು ಪರಿತಪಿಸಿ ನಂತರ ಖಾಸಗಿ ಆಂಬುಲೆನ್ಸ್ ಗೆ ಮೊರೆ ಹೋಗಿದ್ದರು ಎಂದು ಸಾರ್ವಜನಿಕರು 108 ಆಂಬುಲೆನ್ಸ್ ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಪತ್ಬಾಂಧವನ್ನಾದ ಫ್ರೆಂಡ್ಸ್ ಗ್ರೂಪ್ ಆಂಬುಲೆನ್ಸ್

ಫ್ರೆಂಡ್ಸ್ ಗ್ರೂಪ್ ನ ಆಂಬುಲೆನ್ಸ್ ತತಕ್ಷಣ ಸ್ಪಂದಿಸಿದ್ದು, ಸಾರ್ವಜನಿಕರು 108ಗೆ 1 ಗಂಟೆಗೂ ಹೆಚ್ಚು ಕಾಲ ಪರದಾಡಿ ಅಂತಿಮವಾಗಿ ಯಾರೂ ಸಹಾಯದಿಂದ ಫ್ರೆಂಡ್ಸ್ ಗ್ರೂಪ್ ಆಂಬುಲೆನ್ಸ್ ನ ನಂಬರ್ ಪಡೆದು ಕರೆ ಮಾಡಿದ ತಕ್ಷಣ ಕೆಲವೇ ನಿಮಿಷಗಳಲ್ಲಿ ಆಂಬುಲೆನ್ಸ್ ಸಹಿತ ಸ್ಥಳಕ್ಕೆ ಧಾವಿಸಿ ಸ್ಪಂದಿಸಲಾಗಿ ಇವರ ಆಸಕ್ತಿ ಹಾಗೂ ಕಾರ್ಯಪ್ರೌವೃತ್ತಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ಥಳೀಯವಾಗಿ ಎಣ್ಣೆ ನಿಲ್ಲಿಸಿ ಸಾರ್ವಜನಿಕರ ಮನವಿ

ಕೊರಟಗೆರೆ ತಾಲೂಕಿನಲ್ಲಿ ಬಹುತೇಕ ಎಲ್ಲಾ ಹಳ್ಳಿಗಳಲ್ಲಿಯೂ ಪ್ರತಿ ಅಂಗಡಿಗಳಲ್ಲಿ ಮಧ್ಯ ಸರಬರಾಜು ಗೊಳ್ಳುತ್ತಿದ್ದು, ಬಹಳಷ್ಟು ಅವಗಡಗಳಿಗೆ ಹಳ್ಳಿಗಳಲ್ಲಿ ಮಧ್ಯಪಾನವೇ ಹೆಚ್ಚು ಎನ್ನಲಾಗುತ್ತಿದ್ದು ತಂಗನಹಳ್ಳಿ ಈ ಘಟನೆಗೂ ಮದ್ಯಪಾನವೇ ಕಾರಣವಾಗಿದ್ದು, ಸ್ಥಳೀಯವಾಗಿ ಬಹಳ ಹತ್ತಿರದಲ್ಲಿ ಮಧ್ಯಪಾನ ದೊರಕುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಬಹಳಷ್ಟು ಯುವಕರು ಹಾಳಾಗಲು ಪ್ರಮುಖ ಕಾರಣವಾಗಿದೆ, ತಾಲೂಕಿನಲ್ಲಿ ಅಬಕಾರಿ ಇಲಾಖೆ ಗಾಢ ನಿದ್ರೆಯಲ್ಲಿದ್ದು, ಕಂಡರೂ ಕಾಣದಂತೆ ಜಾಣ ಕುರುಡುತನ ಮೆರೆಯುತ್ತಿರುವುದು ಇಷ್ಟೆಲ್ಲಾ ಅವಗಡಗಳಿಗೆ ಕಾರಣವಾಗುತ್ತಿದ್ದು, ಹಳ್ಳಳ್ಳಿಗಳಲ್ಲಿಯೂ ಮಧ್ಯಪಾನ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅಲ್ಲಿನ ಗ್ರಾಮಸ್ಥರು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಹೇಮಂತ್ ಕುಮಾರ್. ಜೆ.ಎಸ್ ಪವರ್ ಟಿವಿ ತುಮಕೂರು.

RELATED ARTICLES

Related Articles

TRENDING ARTICLES