ಬೆಂಗಳೂರು : ಶಾಲಾ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಮೊಟ್ಟೆ, ಬಾಳೆಹಣ್ಣು ಸಿಗಲ್ವೇನೋ. ಇನ್ನೂ ಸ್ವಲ ದಿನ ಹೋದ್ರೆ ಅದು ಇರಲ್ವೆನೋ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ವಾರದಲ್ಲಿ ಎರಡು ದಿನ ಬೇಯಿಸಿದ ಮೊಟ್ಟೆ ಅಥವಾ ಬಾಳೆಹಣ್ಣು/ಶೇಂಗಾ ಚಿಕ್ಕಿಯನ್ನು ಕಳೆದ ಸಾಲಿನಲ್ಲಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಇದನ್ನು ಒಂದು ದಿನಕ್ಕೆ ಕಡಿತಗೊಳಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಕೆಎಂಎಫ್ ಅಧ್ಯಕ್ಷರಾಗಿ ಭೀಮಾ ನಾಯ್ಕ್ ಅವಿರೋಧ ಆಯ್ಕೆ..!
ಮೊದ್ಲು ಈ ಬಗ್ಗೆ ಯೋಚನೆ ಮಾಡಿರಲಿಲ್ವಾ?
ಗ್ಯಾರಂಟಿ ಗೊಂದಲ ಸಂಬಂಧ ಮಾತನಾಡಿರುವ ಅವರು, ಕೊಡೋಕೆ ಸಾಧ್ಯವಾಗುತ್ತೊ, ಇಲ್ಲವೋ ಅನ್ನೋದು ಪ್ರಶ್ನೆ ಅಲ್ಲ, ಗ್ಯಾರಂಟಿ ಆಧಾರದಲ್ಲಿ ಘೋಷಣೆ ಮಾಡಿದ್ದಾರೆ. ಮೊದಲು ಈ ಬಗ್ಗೆ ಯೋಚನೆ ಮಾಡಿರಲಿಲ್ವಾ? ಎಂದು ಕಾಂಗ್ರೆಸ್ ಗೆ ಪ್ರಶ್ನೆ ಮಾಡಿದರು.
ನಾನು ಪಂಚರತ್ನ ಘೋಷಣೆ ಮಾಡಲು ರೂಪುರೇಷೆ ಸಿದ್ದಮಾಡಿದ್ದೆ. ಹಣ ಹೊಂದಿಸಿ 5 ವರ್ಷ ಹೇಗೆ ಕೊಡಬೇಕು ಅಂತ ನಾನು ರೂಪುರೇಷೆ ಮಾಡಿದ್ದೆ. ಆದರೆ, ಜನ ನನ್ನನ್ನು ನಂಬಿಲ್ಲ. ಸದ್ಯ ಪಾಪ ಕಾಂಗ್ರೆಸ್ ಅವರ 5 ಘೋಷಣೆ ನಂಬಿದರು. 2 ಸಾವಿರ ಹೇಗೆ ಕೊಡ್ತಾರೆ ನೋಡೋಣ ಎಂದು ಕುಮಾರಸ್ವಾಮಿ ಕುಟುಕಿದರು.