Sunday, December 22, 2024

ಜಸ್ಟ್ ಮಿಸ್ : ಕೂದಲೆಳೆ ಅಂತರದಲ್ಲಿ ಮಹಿಳೆ ಬಚಾವ್

ಬೆಂಗಳೂರು : ಆ ಒಂದು ಕ್ಷಣ ನೋಡುಗರ ಎದೆ ಝಲ್ ಅನಿಸುತ್ತದೆ. ಜಸ್ಟ್ ಸೆಂಕೆಂಡ್ ನಲ್ಲಿ ಆ ಮಹಿಳೆ ಪವಾಡ ಸದೃಶ್ಯ ರೀತಿ ಸಾವಿನ ದವಡೆಯಿಂದ ಪಾರಾದಳು.

ಮಂಗಳೂರು ಜಿಲ್ಲೆ ಉಳ್ಳಾಲದ ತೌಡುಗೋಳಿ ಬಳಿಯ ನರಿಂಗಾನದಲ್ಲಿ ಈ ಮೈ ಜುಮ್ ಎನಿಸುವ ಘಟನೆ ನಡೆದಿದೆ.

ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬಳು ಅದೃಷ್ಟವಶಾತ್ ಭಾರೀ ಅಪಘಾತದಿಂದ ಬಚಾವ್ ಆಗಿದ್ದಾಳೆ. ಬಸ್ ಡ್ರೈವರ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ : ನನ್ನಿಂದ ಮಗಳಿಗೂ ಕ್ಯಾನ್ಸರ್ ಬಂತೆಂದು ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ

ಅಕ್ಷರಶಃ ಭಯಾನಕ ಘಟನೆ

ಉಳ್ಳಾಲದ ತೌಡುಗೋಳಿ ಬಳಿಯ ನರಿಂಗಾನದಲ್ಲಿ ಮಹಿಳೆ ಬಸ್ಸು ಬರುತ್ತಿರುವುದನ್ನು ಗಮನಿಸದೆ ರಸ್ತೆ ದಾಟುತ್ತಿದ್ದಳು. ಇನ್ನೇನು ಬಸ್ ಮಹಿಳೆಯ ಮೇಲೆ ಹರಿದೇ ಬಿಟ್ಟಿತು ಅನ್ನುವಷ್ಟರಲ್ಲಿ ಪವಾಡವೇ ನಡೆಯಿತು. ಮಹಿಳೆ ಬರುತ್ತಿರುವುದನ್ನು ಗಮನಿಸಿದ ಬಸ್ ಡ್ರೈವರ್ ತಕ್ಷಣ ಬಸ್ಸನ್ನು‌ ಎಡಕ್ಕೆ ತಿರುಗಿಸಿ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿದನು. ಆ ಮಹಿಳೆ ಕೂದಲೆಳೆ ಅಂತರದಲ್ಲಿ ಪಾರಾದಳು.

RELATED ARTICLES

Related Articles

TRENDING ARTICLES