ಮೈಸೂರು : ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಮೈಸೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ ಮಾಡಲಾಯಿತು. ಈ ವೇಳೆ ಮಾತಿನ ಭರದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಾಲಿಗೆ ಹರಿಬಿಟ್ಟಿದ್ದಾರೆ.
ಪ್ಯಾಂಟ್, ಶರ್ಟ್ ಬಿಚ್ಚಿ ಪ್ರತಿಭಟನೆ ಮಾಡ್ತೀನಿ ಅಂಥಾನೇ ಸ್ಕೌಂಡ್ರಲ್ ಅಶೋಕ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ ವಿಜಯಕುಮಾರ್ ಅವರು ಅಸಭ್ಯ ಪದ ಬಳಕೆ ಮಾಡಿದ್ದಾರೆ.
ಒಂದು ಗ್ರಾಂ ಅಕ್ಕಿ ಕಡಿಮೆಯಾದರೂ ಶರ್ಟ್, ಪ್ಯಾಂಟ್ ಬಿಚ್ಚಿ ಪ್ರೋಟೆಸ್ಟ್ ಮಾಡ್ತೀನಿ ಅಂತಾರೆ ಆರ್. ಅಶೋಕ್. ಅಶೋಕ್ ಮಾತು ನಿಂಧಿಸುವ ಭರದಲ್ಲಿ ಸ್ಕೌಂಡ್ರಲ್ ಎಂದಿದ್ದಾರೆ. ಸರ್ಕಾರ ಬರಲಿ ಅಂತ ಹಗಲು ರಾತ್ರಿ ಕೈಯಲ್ಲಿ ದುಡ್ಡು ಹಾಕಿ, ಒಡೆದಾಡಿ ಕಾಂಗ್ರೆಸ್ ಅಧಿಕಾರಕ್ಕೆ ತಂದಿದ್ದೀವಿ ಎಂದು ಕಿಡಿಕಾರಿದ್ದಾರೆ.
ಈ ಪ್ರತಿಭಟನೆಯನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಿ. ಸಚಿವರು ಮನೆಯಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರನ್ನ ನೀವು ನೋಡಿದ್ದೀರಾ. ಸಿಎಂಗೆ ಬಹಳ ಹಿಂಸೆಯಾಗುತ್ತಿದೆ. ಹೊರಗೆ ಹೋದ್ರೆ ಉತ್ತರ ಕೊಡಬೇಕು. ನಿತ್ಯ 23 ಗಂಟೆ ಮೀಟಿಂಗ್ ಮೇಲೆ ಮೀಟಿಂಗ್ ಮಾಡುವ ಪರಿಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಿಜೆಪಿಗೆ ಭರ್ಜರಿ ಜಯ : ಹುಬ್ಬಳ್ಳಿ-ಧಾರವಾಡ ಪಾಲಿಕೆ ಕೇಸರಿ ಪಾಲು
ಖಾಲಿ ಪ್ಲೇಟ್ ಹಿಡಿದು ಪ್ರತಿಭಟನೆ
ಅನ್ನಭಾಗ್ಯಕ್ಕೆ ಕೇಂದ್ರದಿಂದ ಅಡ್ಡಗಾಲು ಹಿನ್ನೆಲೆ ಮಂಡ್ಯದಲ್ಲಿ ಕೈ ನಾಯಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಜಮಾಯಿಸಿದ ಕೈ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಹಾಡಿನ ಮೂಲಕ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯವಾಡಿತು. ಖಾಲಿ ಪ್ಲೇಟ್ ಹಿಡಿದು ಮೊಸರನ್ನ ವಿತರಣೆ ಮಾಡುವ ಮೂಲಕ ಕೇಂದ್ರದ ಬಿಜೆಪಿ ವಿರುದ್ಧ ಕಿಡಿಕಾರಿದರು. ಕೂಡಲೇ ಪಡಿತರ ಅಕ್ಕಿ ನೀಡುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಶಾಸಕ ಗಣಿಗ ರವಿಕುಮಾರ್, ರಮೇಶ್ ಬಾಬು ಬಂಡಿಸಿದ್ದೇಗೌಡ ಸೇರಿ ಹಲವರು ಪಾಲ್ಗೊಂಡಿದ್ದರು.