ಚಿತ್ರದುರ್ಗ : ಒಂದು ಬಿರಿಯಾನಿ ನೀಡಿ ಮತಾಂತರ ಎಂಬ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿಕೆಗೆ ಮಾಜಿ ಸಚಿವ ಹೆಚ್. ಆಂಜನೇಯ ತಿರುಗೇಟು ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿರಿಯಾನಿಗಾಗಿ ಅಲ್ಲ, ಗೌರವಕ್ಕಾಗಿ ಮತಾಂತರ ಆಗ್ತಿದ್ದಾರೆ ಎಂಬುದು ನನ್ನ ಭಾವನೆ ಎಂದು ಹೇಳಿದ್ದಾರೆ.
ಇದೇ ಧರ್ಮದಲ್ಲಿದ್ದು ಅಕ್ಕಿಗಾಗಿ ಹೋರಾಟ ಮಾಡಿ ಎಂದು ಹೇಳುತ್ತೇವೆ. ನಾನು, ಜಿ.ಎಸ್ ಮಂಜುನಾಥ್, ಜೆ.ಜೆ ಹಟ್ಟಿ ತಿಪ್ಪೇಸ್ವಾಮಿ ನಾವೆಲ್ಲ ಮಾದಿಗರು. ನಾವೆಲ್ಲ ಹಿಂದೂ ಧರ್ಮದಲ್ಲೇ ಇದ್ದೇವೆ. ಜನರ ಹಸಿವಿನ ಬಗ್ಗೆ ಯೋಚನೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಮಠಾಧೀಶರು ಮರು ಮತಾಂತರಕ್ಕೆ ಮುಂದಾಗಬೇಕು : ಸಿ.ಟಿ ರವಿ
ಕ್ರೈಸ್ತ, ಮುಸ್ಲಿಂ ಧರ್ಮದಲ್ಲೂ ಇದ್ದಾರೆ
ರಾಜ್ಯ ಸರ್ಕಾರದಿಂದ ಮತಾಂತರ ನಿಷೇದ ಕಾಯ್ದೆ ರದ್ದು ವಿಚಾರ ಮಾತನಾಡಿ, ಯಾರು ಯಾವ ಧರ್ಮವನ್ನು ಬೇಕಿದ್ದರೂ ಆಯ್ಕೆ ಮಾಡಬಹುದು. ಯಾವ ಧರ್ಮದಲ್ಲಿದ್ದರೂ ಭಾರತದಲ್ಲೇ ಇರ್ತಾರೆ, ದೇಶ ಬಿಡಲ್ಲ. ನಮ್ಮ ಸಮಾಜದವರು ಹಿಂದೂ, ಕ್ರೈಸ್ತ, ಮುಸ್ಲಿಂ ಧರ್ಮದಲ್ಲೂ ಇದ್ದಾರೆ. ಮತಾಂತರ ನಿಷೇಧ ಕಾಯ್ದೆ ಹೊಟ್ಟೆ ತುಂಬಿಸಲ್ಲ ಎಂದು ಹೆಚ್.ಆಂಜನೇಯ ಹೇಳಿದ್ದಾರೆ.
ದುಡ್ಡು ಕೊಡ್ತೀವಿ, ಮುಚ್ಕೊಂಡು ಅಕ್ಕಿ ಕೊಡ್ಬೇಕು
ನಾವು ಪುಕ್ಕಟೆ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಕೇಳಿಲ್ಲ. ದುಡ್ಡು ಕೊಡುತ್ತೇವೆ, ಮುಚ್ಚಿಕೊಂಡು ಅಕ್ಕಿ ಕೊಡಬೇಕು. ಕೇಂದ್ರ ಬಿಜೆಪಿ ಸರ್ಕಾರ ಬಡವರ ಪರವಲ್ಲ, ಶ್ರೀಮಂತರ ಪರವಿದೆ. ಮೋದಿ ಅವರು ಕಾಳಸಂತೆಕೋರರು, ಬ್ಯಾಂಕ್ ಲೂಟಿಕೋರರಾದ ಅಂಬಾನಿ, ಅದಾನಿ ಪರವಿದ್ದಾರೆ. ಹತಾಶೆಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕೇಂದ್ರ ಅಕ್ಕಿ ನೀಡುತ್ತಿಲ್ಲ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.