Friday, April 4, 2025

ಅಕ್ಕಿ ನಿಮ್ದು-ಚೀಲ ನಮ್ದು, ಫೋಟೋ ಮಾತ್ರ ನಂದು ಅಂತ ಡಿಕೆಶಿ ರಚ್ಚೆ ಹಿಡಿದಿದ್ದಾರೆ : ಬಿಜೆಪಿ ಲೇವಡಿ

ಬೆಂಗಳೂರು : ಅಕ್ಕಿ ನಿಮ್ದು ಚೀಲ ನಮ್ದು. ಆದ್ರೆ ಫೋಟೋ ಮಾತ್ರ ನಂದು ಅಂತ ಡಿಕೆಶಿ ರಚ್ಚೆ ಹಿಡಿದಿದ್ದಾರೆ ಎಂದು ರಾಜ್ಯ ಬಿಜೆಪಿ ಲೇವಡಿ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, 2013-18ರ ಅವಧಿಯಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಮಾಡಿದ್ದೆಲ್ಲ ‘ಅಕ್ಕಿ ನಿಮ್ದು, ಚೀಲ ನಮ್ದು’ ಎಂಬ ನಾಟಕ ಎಂದು ಕಾಲೆಳೆದಿದೆ.

ಕೇಂದ್ರ ಸರ್ಕಾರದಿಂದ ಉಚಿತ ಅಕ್ಕಿ ಪಡೆದು ಅದನ್ನೇ ತಮ್ಮ ಭಾವಚಿತ್ರದ ಚೀಲಕ್ಕೆ ತುಂಬಿಸಿ ಸಿದ್ದರಾಮಯ್ಯ ವಿತರಿಸಿದ್ದರು. ಈಗಲೂ ಅದೇ ಸೂತ್ರ ಹಿಡಿದು ಸಿದ್ದರಾಮಯ್ಯರವರು ಕೇಂದ್ರ ಸರ್ಕಾರದ ಯೋಜನೆಯೇ ತಮ್ಮದು ಎಂಬ ಬಣ್ಣ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕುಟುಕಿದೆ.

ಇದನ್ನೂ ಓದಿ : ಒಬ್ಬ ಕಳ್ಳ, ಮತ್ತೊಬ್ಬ ಮಳ್ಳ.. ಇಂಥವರನ್ನು ಹಿಂದೆ ನೋಡಿರಲಿಲ್ಲ : ಕೆ.ಎಸ್ ಈಶ್ವರಪ್ಪ

ಕೇಂದ್ರದ ಬಳಿ ರಚ್ಚೆ ಹಿಡಿಯುತ್ತಿದೆ

ಈ ಬಾರಿಯ ವ್ಯತ್ಯಾಸವಿಷ್ಟೇ, ಅಕ್ಕಿ ನಿಮ್ದು ಚೀಲ ನಮ್ದು, ಆದ್ರೆ ಫೋಟೋ ಮಾತ್ರ ನಂದೂ ಬೇಕು ಅಂತ ಡಿ.ಕೆ ಸಾಹೇಬರು ಹಠ ಹಿಡಿದ ಹಾಗಿದೆ. ಎಲ್ಲ ಲೆಕ್ಕ ಹಾಕಿಯೇ ಗ್ಯಾರಂಟಿ ಘೋಷಿಸಿದ್ದೇವೆ ಎಂದು ಚುನಾವಣೆಗೂ ಮೊದಲು ಕಾಂಗ್ರೆಸ್‌ ಬೀಗುತ್ತಿತ್ತು. ಈಗ ಅಕ್ಕಿ ಸರಬರಾಜು ಮಾಡಿ ಎಂದು ಕೇಂದ್ರದ ಬಳಿ ರಚ್ಚೆ ಹಿಡಿಯುತ್ತಿದೆ ಎಂದು ಛೇಡಿಸಿದೆ.

ನಿಮಗೆ ಮನಸ್ಸಾದರೂ ಹೇಗೆ ಬಂತು?

ಹಾಗಾದರೆ ಎಷ್ಟು ಪ್ರಮಾಣದಲ್ಲಿ ಅಕ್ಕಿ ಬೇಕು, ಅದನ್ನು ಎಲ್ಲಿಂದ ಹೊಂದಿಸಬೇಕು, ಹೇಗೆ ವಿತರಿಸಬೇಕು ಎಂಬ ಪರಿಕಲ್ಪನೆಯೇ ಇಲ್ಲದೆ ಗ್ಯಾರಂಟಿ ಘೋಷಿಸಿದಿರೇ? ಈಗ ಮೈಗೆ ಎಣ್ಣೆ ಉಜ್ಜಿಕೊಂಡು, ಕೇಂದ್ರದ ಕಡೆ ಬೊಟ್ಟು ಮಾಡುತ್ತಾ ಜನತೆಗೆ ದ್ರೋಹ ಬಗೆಯುವುದಕ್ಕೆ ನಿಮಗೆ ಮನಸ್ಸಾದರೂ ಹೇಗೆ ಬಂತು? ಎಂದು ಕಾಂಗ್ರೆಸ್ ನಾಯಕರಿಗೆ ಪ್ರಶ್ನೆ ಮಾಡಿದೆ.

RELATED ARTICLES

Related Articles

TRENDING ARTICLES