Thursday, December 26, 2024

ಹುಬ್ಬಳ್ಳಿಗೆ ಬಂತು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು

ಬೆಂಗಳೂರು : ರಾಜ್ಯದಲ್ಲಿ ಎರಡನೇ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಇಂದಿನಿಂದ ಪ್ರಾಯೋಗಿಕ ಸಂಚಾರ ಆರಂಭಿಸಿದೆ.

ಬೆಂಗಳೂರಿನಿಂದ ಧಾರಾವಾಡಕ್ಕೆ ಈ ರೈಲು ಪ್ರಯಾಣ ಆರಂಭಿಸಿದೆ. ಪ್ರತಿದಿನ ಬೆಳಗ್ಗೆ 5.45ಕ್ಕೆ ಕೆಎಸ್ಆರ್ ಬೆಂಗಳೂರು ಸ್ಟೇಷನ್‌ನಿಂದ ರೈಲು ಹೊರಟು ಬೆಳಗ್ಗೆ 10 ಗಂಟೆಗೆ ದಾವಣಗೆರೆ ಮೂಲಕ ಮಧ್ಯಾಹ್ನ 12.10ಕ್ಕೆ ಹುಬ್ಬಳ್ಳಿ ಹಾಗೂ 12.40ಕ್ಕೆ ಧಾರಾವಾಡಕ್ಕೆ ತಲುಪಿದೆ.

ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಬೆಂಗಳೂರು ವಲಯದಲ್ಲಿ 110 ಕಿ.ಮೀ ವೇಗ ಹಾಗೂ ಧಾರಾವಾಡ ವಲಯದಲ್ಲಿ ಗಂಟೆಗೆ 70.54 ಕಿ.ಮೀ ಸಂಚರಿಸಲಿದೆ. ಧಾರವಾಡ, ಹುಬ್ಬಳ್ಳಿ ಹಾಗೂ ಬೆಂಗಳೂರು ನಡುವೆ ಸಂಚರಿಸಲಿರುವ ವಂದೇ ಭಾರತ್ ರೈಲಿನ ಪರೀಕ್ಷಾರ್ಥ ಓಡಾಟ ಇಂದು ನಡೆದಿದೆ. ಕೆಲವೇ ದಿನಗಳಲ್ಲಿ ವಂದೇ ಭಾರತ್ ರೈಲು ಸೇವೆ ಆರಂಭವಾಗಲಿದೆ.

ಇದನ್ನೂ ಓದಿ : ನನ್ನ ಹೆಂಡ್ತಿ, ಎರಡು ಸೀರೆ ತಗೊಂಡು ರಾತ್ರಿ ಹೋಗಿ ಬೆಳಗ್ಗೆ ಬರ್ತೀನಿ ಅಂದ್ಲು, ಇನ್ನೂ ಬಂದೇ ಇಲ್ಲ!

ಕೆಲವೇ ದಿನಗಳಲ್ಲಿ ಅಧಿಕೃತ ಸೇವೆ

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಧಾರವಾಡ ಹಾಗೂ ಬೆಂಗಳೂರು ಮಧ್ಯೆ ಬಹು ನಿರೀಕ್ಷಿತ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಅಧಿಕೃತ ಸೇವೆ ಆರಂಭವಾಗಲು ಇನ್ನು ಕೆಲವೇ ದಿನಗಳು ಉಳಿದಿದ್ದು, ಇಂದು ಅದರ ಟ್ರಯಲ್ ರನ್ ನಡೆಸಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯದ ಜನತೆ ಪರವಾಗಿ ಧನ್ಯವಾದ

ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್ ರೈಲಿಗೆ ಕೆಲವೇ ದಿನಗಳಲ್ಲಿ ಹಸಿರು ನಿಶಾನೆ ತೋರಿಸಲಿದ್ದಾರೆ. ರಾಜ್ಯದ ಎರಡನೇ ವಂದೇ ಭಾರತ್ ಎಕ್ಸ್ ಪ್ರೆಸ್ ಇದಾಗಲಿದೆ. ನಮ್ಮ ಪ್ರಸ್ತಾವನೆಗೆ ಸ್ಪಂದಿಸಿ ದೇಶದ ಹೆಮ್ಮೆಯ ವಂದೇ ಭಾರತ್ ರೈಲು‌ ಸೇವೆಯನ್ನು ನಮ್ಮ ಭಾಗಕ್ಕೆ ಒದಗಿಸಿಕೊಟ್ಟ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ರಾಜ್ಯದ ಜನತೆಯ ಪರವಾಗಿ ಧನ್ಯವಾದಗಳು ಎಂದಿದ್ದಾರೆ.

RELATED ARTICLES

Related Articles

TRENDING ARTICLES