Wednesday, January 22, 2025

ಸಪ್ತಗಿರಿಗೌಡರಲ್ಲಿ ಭವಿಷ್ಯದ ನಾಯಕನನ್ನು ಕಂಡ ಗಾಂಧಿನಗರ ಜನತೆ

ಬೆಂಗಳೂರು : ಗಾಂಧಿನಗರ ಈ‌ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೈವೋಲ್ಟೆಜ್ ಕ್ಷೇತ್ರವಾಗಿ ಮಾರ್ಪಟ್ಟಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಪ್ರಬಲ ಎದುರಾಳಿ ದಿನೇಶ್ ಗುಂಡೂರಾವ್ ಮತ್ತು ಬಿಜೆಪಿ ಯೂತ್ ಐಕಾನ್ ಸಪ್ತಗಿರಿಗೌಡ ನಡುವೆ ಮಹಾ ಕಾಳಗವೇ ನಡೆದಿತ್ತು. ಸಪ್ತಗಿರಿಗೌಡ ಅತ್ಯಂತ ಕಠಿಣ ಸ್ಪರ್ಧೆ ನೀಡಿದ್ದರು. ಕೆಲವೇ ಮತಗಳ ಅಂತಗಳಿಂದ ಸೋತರು. ಈ ಸೋಲು ಸಾಕಷ್ಟು ಜನರ ಅಚ್ಚರಿಗೆ ಕಾರಣವಾಗಿದೆ.

ಸಪ್ತಗಿರಿಗೌಡರು ಗಾಂಧಿನಗರ ಕ್ಷೇತ್ರದ ಯೂತ್ ಐಕಾನ್, ಬಿಜೆಪಿ ಹಿರಿಯ ನಾಯಕರಾಗಿರೋ ರಾಮಚಂದ್ರ ಗೌಡರ ಪುತ್ರ. ಸಾಕಷ್ಟು ವರ್ಷಗಳಿಂದ ಗಾಂಧಿನಗರ ಜನರಿಗೆ ಚಿರಪರಿಚಿತರು. ಯಾಕಂದ್ರೆ ಆರ್.ಎಸ್.ಎಸ್ ಸ್ವಯಂಸೇವಕರಾಗಿದ್ದ‌ ಇವರು ಬಿಜೆಪಿಗೆ ಸೇರಿ ಪಕ್ಷದಲ್ಲಿ ಹಲವು ಜವಾಬ್ದಾರಿಯನ್ನು‌ನಿಭಾಯಿಸಿದ್ದರು.

2013ರಲ್ಲಿ ಬೆಂಗಳೂರು ಮಹಾನಗರ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು 2004 ರಿಂದಲೂ ಲೋಕಸಭಾ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಯ ಪಕ್ಷ ಸಂಘಟನೆಯಲ್ಲಿ ತಮ್ಮ ಸಂಘಟನಾ ಚಾತುರ್ಯವನ್ನು ತೋರಿಸಿದ್ದಾರೆ‌. ಹಾಗೆಯೇ ಪರಿಷತ್ ಪದವೀಧರ ಕ್ಷೇತ್ರದ ಚುನಾವಣೆಗೆ ತಮ್ಮದೇ ಆದ‌ ಕೊಡುಗೆ ನೀಡಿದ್ದಾರೆ.

ಜನರ ಕಷ್ಟ ನಷ್ಟಕ್ಕೆ ಸ್ಪಂದಿಸುವ ನಾಯಕ

ಸಪ್ತಗಿರಿಗೌಡರು ಕೊರೋನಾ ಸಂದರ್ಭದಲ್ಲಿ ತಮ್ಮ ಅಪ್ರತಿಮ ಕೆಲಸಕ್ಕೆ ಜನರಿಗೆ ಮತ್ತಷ್ಟು ಹತ್ತಿರ ಆಗಿದ್ದಾರೆ‌‌.‌ ಕೋವಿಡ್ ಸಮಯದಲ್ಲಿ ಬೆಡ್ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ 700ಕ್ಕೂ ಹೆಚ್ಚು ರೋಗಿಗಳಿಗೆ ಔಷಧ ಕೊಡಿಸಿದ್ದಾರೆ. ಹಾಗೆಯೇ ಅದೆಷ್ಟೋ ಜನ ಕೆಲಸವಿಲ್ಲದೇ ಪರದಾಡುತ್ತಿರೋವಾಗ 1.78 ಪುಡ್ ಕಿಟ್ ವಿತರಿಸಿ ಜನರ ಹಸಿವನ್ನು ನೀಗಿಸಿದ್ದಾರೆ. ಹಾಗೆಯೇ, 14,500 ಕ್ಕೂ ಅಧಿಕ ಜನರಿಗೆ ಪುಡ್ ಕಿಟ್ ವಿತರಿಸಿ ಅವ್ರ ಕಷ್ಟಕ್ಕೆ ಮಿಡಿದಿದ್ದಾರೆ‌.‌

ಇದನ್ನೂ ಓದಿ : ಪ್ರಧಾನಿ ಮೋದಿ ಕಾಲಿಟ್ಟ ಕಡೆ ಜಯ ನಿಶ್ಚಿತ : ಸಪ್ತಗಿರಿಗೌಡ ವಿಶ್ವಾಸ

105 ಮತಗಳ ವಿರೋಚಿತ ಸೋಲು!

2018ರಲ್ಲಿ 10,070 ಮತಗಳ‌ ಅಂತರದಿಂದ ಸೋತಿದ್ದ ಸಪ್ತಗಿರಿಗೌಡರು ಈ ಬಾರಿ‌ ಇನ್ನು ಉತ್ತಮ ಸಂಘಟನೆ ನಡೆಸಿದ್ದರು. ಈ ಬಾರಿ ಗೆದ್ದೆ ಗೆಲ್ತಾರೆ ಅಂತ ಕ್ಷೇತ್ರದಲ್ಲಿ ‌ಸಾಕಷ್ಟು ಟಾಕ್ ಇತ್ತು.‌ ಕೊನೆಯವರೆಗೂ ಮುನ್ನಡೆ ಕಾಯ್ದುಕೊಂಡಿದ್ದರು. ಆದ್ರೆ‌ ಕೊನೆ ಕ್ಷಣದಲ್ಲಿ 105 ಮತಗಳಿಂದ ಸಪ್ತಗಿರಿಗೌಡರಿಗೆ ಸೋಲಾಗಿದೆ. ಆದ್ರೆ, ಕಾಂಗ್ರೆಸ್ ‌ಭದ್ರಕೋಟೆ ಅಂತೆ ಹಿಂದೆ ಕರೆಸಿಕೊಂಡಿದ್ದ ಗಾಂಧಿನಗರ ಕ್ಷೇತ್ರದಲ್ಲಿ ಬಿಜೆಪಿ ವಿರೋಚಿತ ಸ್ಪರ್ಧೆ ನೀಡಿದೆ. ಹೀಗಾಗಿ, ಮುಂದಿನ ಭಾರಿ ಸಪ್ತಗಿರಿಗೌಡರಿಗೆ ಉತ್ತಮ ಅವಕಾಶ ಸಿಗಲಿದೆ ಅಂತ ಕ್ಷೇತ್ರದಲ್ಲಿ ಚರ್ಚೆಯಾಗ್ತಿದೆ.

ಒಟ್ಟಿನಲ್ಲಿ ಸಪ್ತಗಿರಿಗೌಡರು ಗೆದ್ದೆ ಬಿಟ್ರೂ ಅಂತ ಹೇಳಲಾಗ್ತಿತ್ತು.‌ ಆದ್ರೆ, ಕೊನೆ ಕ್ಷಣದಲ್ಲಿ ಕಾಂಗ್ರೆಸ್ ‌’ಕೈ’ ಮೇಲಾಗಿದೆ. ಆದ್ರೆ, ಈ ಬಾರಿಯ  ಭರ್ಜರಿ ಪೈಪೋಟಿ ಸಪ್ತಗಿರಿ ಆತ್ಮವಿಶ್ವಾಸ ಹೆಚ್ಚಿಸಿದ್ದು ಭವಿಷ್ಯದ ನಾಯಕ ಎಂಬ ಚರ್ಚೆ ಹುಟ್ಟುಹಾಕಿದೆ.

RELATED ARTICLES

Related Articles

TRENDING ARTICLES