ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಎದುರಿಗೆ ನಿಂತು ಮಾತನಾಡುವ ಧೈರ್ಯ ಇದ್ದಿದ್ದು ಯಡಿಯೂರಪ್ಪ ಅವರಿಗೆ ಮಾತ್ರ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 25 ಮಂದಿ ಸಂಸದರುಗಳಿಗೆ ಧೈರ್ಯವೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಂಪಿಗಳು ಮೋದಿ ಎದುರಿಗೆ ನಿಂತು ಮಾತನಾಡಲ್ಲ. ಆ ಧೈರ್ಯ ಯಡಿಯೂರಪ್ಪಗೆ ಮಾತ್ರ ಇತ್ತು. ಈಗ ದೆಹಲಿಗೆ ಹೋಗುವ ಎಂಪಿಗಳು ಸುಮ್ಮನೆ ಹೋಗ್ತಾರೆ. ತಿರುಪತಿಗೆ ಹೋಗಿ ವೆಂಕಟರಮಣಸ್ವಾಮಿಗೆ ನಮಸ್ಕಾರ ಹಾಕುವ ರೀತಿ ಇವರು ದೆಹಲಿಗೆ ಹೋಗಿ ಮೋದಿಗೆ ನಮಸ್ಕಾರ ಹಾಕಿ ಬರ್ತಾರೆ ಅಷ್ಟೇ ಎಂದು ಛೇಡಿಸಿದ್ದಾರೆ.
ಇದನ್ನೂ ಓದಿ : ಸಿದ್ದರಾಮಯ್ಯಗೆ ಪುಕ್ಕಲತನ, ಉದಾರ ಮನಸ್ಸು ಇಲ್ಲ : ಪ್ರತಾಪ್ ಸಿಂಹ
ಅವರೆಲ್ಲರೂ ಜೀ ಹುಜೂರ್ ಗಳೇ!
ನಮ್ಮ ರಾಜ್ಯದಿಂದ 4 ಲಕ್ಷ 70 ಕೋಟಿ ಜಿಎಸ್ ಟಿ ಹೋಗ್ತಿದೆ. ನಮಗೆ ಜಿಎಸ್ ಟಿ ಪರಿಹಾರ ಸಿಗೋದು 35 ಸಾವಿರ ಕೋಟಿ ರೂ. ಮಾತ್ರ. ನಮ್ಮ ತೆರಿಗೆ ಹಣದಲ್ಲಿ ಅವರು ಅಕ್ಕಿ ಕೊಡೋದು. ಬಿಜೆಪಿಯಲ್ಲಿ ಇರೋರು ಎಲ್ಲ ಜೀ ಹುಜೂರ್ ಗಳೇ, ಯಡಿಯೂರಪ್ಪ ಮಾತ್ರ ಧೈರ್ಯವಾಗಿ ಕೇಳ್ತಿದ್ರು. ಉಳಿದವರು ಯಾರು ಮೋದಿ ಮುಂದೆ ಕೇಳ್ತಾರೆ ಎಂದು ಕುಟುಕಿದ್ದಾರೆ.
ನಮ್ಮ ಮನೆ ಬಗ್ಗೆ ಚಿಂತೆ ಯಾಕೆ?
ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಯ ಕದನದ ಬಗ್ಗೆ ಆರ್ . ಅಶೋಕ್ ಲೇವಡಿ ವಿಚಾರ ಕುರಿತು ಮಾತನಾಡಿ, ಸಿಎಂ ವಿಷಯ ಅದು ನಮ್ಮ ಮನೆಗೆ ಸಂಬಂಧಿಸಿದ ವಿಚಾರ. ನಮ್ಮ ಮನೆಯ ಬಗ್ಗೆ ಬಿಜೆಪಿಯವರಿಗೆ ಯಾಕೆ ಇಷ್ಟು ಚಿಂತೆ? ಸಿದ್ದರಾಮಯ್ಯ ಎಷ್ಟು ವರ್ಷ ಸಿಎಂ, ಏನು ಎಂತೆಲ್ಲ ಹೈಕಮಾಂಡ್ ನಲ್ಲಿ ಚರ್ಚೆ ಆಗಿದೆ. ಅದು ನಮಗೂ ಗೊತ್ತಿಲ್ಲ. ಗೊತ್ತಿಲ್ಲದರ ಬಗ್ಗೆ ನಾವು ಮಾತಾಡಬಾರದು. ಮಹದೇವಪ್ಪ ಆಗಿರಬಹುದು, ಎಂ.ಬಿ ಪಾಟೀಲ್ ಆಗಿರಬಹುದು ಅವ್ರು ಮಾತಾಡಬಾರದು ಎಂದು ಹೇಳಿದ್ದಾರೆ.