Monday, December 23, 2024

ಕಂತೆ ಕಂತೆ ಕಾಸು ಬರೋ ಖಾತೆ ಸಿಗಲಿಲ್ಲ ಅಂತ MBP ವಿಲವಿಲ ಒದ್ದಾಡ್ತಿದ್ದಾರೆ : ಪ್ರತಾಪ್ ಸಿಂಹ

ಮೈಸೂರು : ಕಂತೆ ಕಂತೆ ಕಾಸು ಬರುವ ಖಾತೆ ಸಿಗಲಿಲ್ಲ ಅಂತ ಎಂ.ಬಿ ಪಾಟೀಲ್ ವಿಲವಿಲ ಒದ್ದಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಎಂಬಿಪಿಗೆ ಟಕ್ಕರ್ ಕೊಟ್ಟಿದ್ದಾರೆ.

ಪ್ರತಾಪ್ ಸಿಂಹ ಚಿಲ್ಲರೆ ರಾಜಕಾರಣ ಬಿಡಲಿ ಎಂಬ ಎಂ‌.ಬಿ ಪಾಟೀಲ್ ಹೇಳಿಕೆಗೆ ಮೈಸೂರಿನಲ್ಲಿ ಪ್ರತಾಪ್ ಸಿಂಹ ತಿರುಗೇಟು ಕೊಟ್ಟಿದ್ದಾರೆ.

ಎಂ.ಬಿ ಪಾಟೀಲ್ ಅವರಿಗೆ ಈಗ ಸಿಕ್ಕಿರುವ ಖಾತೆಯಲ್ಲಿ ಬರೀ ಚಿಲ್ಲರೆ ಕಾಸು ಸಿಗುತ್ತದೆ. ಕೂತ ಕಡೆ ಕಂತೆ ಕಂತೆ ಕಾಸು ಬರುವ ಖಾತೆ ಸಿಗಲಿಲ್ಲ. ಎಂ.ಬಿ. ಪಾಟೀಲ್ ಗೆ ಬರೀ ಚಿಲ್ಲರೆ, ನೋಟು ಇದರ ಬಗ್ಗೆ ಮಾತ್ರ ಚಿಂತೆ. ಸಿಎಂ ಸಿದ್ದರಾಮಯ್ಯ ಅವರ ಓಲೈಕೆಯೇ ತಮ್ಮ ಖಾತೆ ಜವಾಬ್ದಾರಿ ಅಂತ ಎಂ.ಬಿ ಪಾಟೀಲ್ ಅಂದು ಕೊಂಡಿದ್ದಾರೆ. ಸಿದ್ದರಾಮಯ್ಯ ಬಂದೂಕಿಗೆ ಹೆಗಲು ಕೊಡೋದೆ ನಿಮ್ಮ ಕೆಲಸನಾ ಎಂ‌.ಬಿ. ಪಾಟೀಲ್? ಎಂದು ಕುಟುಕಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಬಗ್ಗೆ ಎಂ.ಬಿ. ಪಾಟೀಲ್ ವ್ಯಂಗ್ಯ ವಿಚಾರ ಕುರಿತು ಮಾತನಾಡಿ, ಸಂತೋಷ್ ಬಗ್ಗೆ ಪದೆ ಪದೇ ಯಾಕೆ ಮಾತಾಡ್ತಿರಿ? ಬ್ರಾಹ್ಮಣರನ್ನು ದಿನವೂ ಯಾಕೆ ಬೈಯ್ತೀರಿ? ಯಾಕೆ ನಿಮಗೆ ಬ್ರಾಹ್ಮಣರ ಮೇಲೆ ಇಷ್ಟು ದ್ವೇಷ. ಬಸವೇಶ್ವರರು ಮೂಲದಲ್ಲಿ ಬ್ರಾಹ್ಮಣರು ಅಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ : ಮಹದೇವಪ್ಪನಿಗೂ ಟೋಪಿ, ಕಾಕಪಾಟಿಲನಿಗೂ ಟೋಪಿ! : ಶಾಸಕ ಯತ್ನಾಳ್ ಲೇವಡಿ

ನೀವು ನಿಜವಾಗಲೂ ಲಿಂಗಾಯತರಾ?

ಬಿ.ಎಲ್ ಸಂತೋಷ್ ನಿಮಗೆ ಏನಾದರೂ ತಿವಿದಿದ್ದಾರಾ? ಎಂ.ಬಿ ಪಾಟೀಲ್ ಅವರೇ ನೀವು ನಿಜವಾಗಲೂ ಲಿಂಗಾಯತರಾ? ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಜೈಲಿಗೆ ಕಳಿಸಿದ್ದು ಕಾಂಗ್ರೆಸ್ ಕುತಂತ್ರ ಅಲ್ವಾ? ಕಾಂಗ್ರೆಸ್ ಲಿಂಗಾಯತರಿಗೆ ಅನ್ಯಾಯ ಮಾಡಿದ್ರು ನೀವು ಸುಮ್ಮನೆ ಇದ್ದೀರಿ. ದಿನೇಶ್ ಗುಂಡೂರಾವ್ ಯಡಿಯೂರಪ್ಪರನ್ನು ಹುಚ್ಚ ಅಂದಿದ್ದರು. ಆಗ ನಿಮ್ಮೊಳಗೆ ಲಿಂಗಾಯತ ಭಾವನೆ ಜಾಗೃತ ಆಗಲಿಲ್ಲವೇ? ಎಂದು ಛೇಡಿಸಿದ್ದಾರೆ.

ಸೂಪರಿ ತೆಗೆದುಕೊಂಡವ್ರು ನೀವೆ ತಾನೇ?

ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ಮಾಡಲು ಕಾಂಗ್ರೆಸ್ ನಿಂದ ಸೂಪರಿ ತೆಗೆದುಕೊಂಡವರು ನೀವೆ ತಾನೇ? ಸಿದ್ದರಾಮಯ್ಯರು ಲಿಂಗಾಯತ ಧರ್ಮ ಒಡೆಯಲು ಹೋದಾಗ ಅದರ ಸೂಪರಿ ಪಡೆದವರು ನೀವೆ ತಾನೇ? ಈಗ ಸಿದ್ದರಾಮಯ್ಯರೇ ಪೂರ್ಣವಧಿ ಸಿಎಂ ಎನ್ನುವ ಮೂಲಕ ಒಕ್ಕಲಿಗ ಧರ್ಮವನ್ನು ಒಡೆಯಲು ಹೊರಟಿದ್ದೀರಾ? ಎಂದು ಚಾಟಿ ಬೀಸಿದ್ದಾರೆ.

RELATED ARTICLES

Related Articles

TRENDING ARTICLES