ಬೆಂಗಳೂರು : ಥೈರಾಯ್ಡ್ ಸಮಸ್ಯೆಯನ್ನು ಹೋಗಲಾಡಿಸಲು ಮನೆಯಲ್ಲೇ ಕೆಲವು ಔಷಧಿಗಳನ್ನು ಮಾಡಿಕೊಳ್ಳಬಹುದು. ಯಾವುದೇ ಖರ್ಚಿಲ್ಲದೆ ಮನೆಯಲ್ಲೇ ಇರುವ ವಸ್ತುಗಳಿಂದ ಈ ಮನೆಮದ್ದು ತಯಾರಿಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.
- ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ತೆಗೆದುಕೊಂಡು ಅದನ್ನು ಜಜ್ಜಿ ಅದರ ರಸ ತೆಗೆದುಕೊಂಡು ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಈ ವಿಧಾನವನ್ನು 20 ದಿನ ನಿರಂತರವಾಗಿ ಮಾಡಿದ್ರೆ, ಥೈರಾಯ್ಡ್ ಸಮಸ್ಯೆ ಮಾಯವಾಗುತ್ತೆ.
- ಈರುಳ್ಳಿಯನ್ನು ಅರ್ಧ ಭಾಗ ಮಾಡಿ ಗಂಟಲಿನ ಭಾಗಕ್ಕೆ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದಲೂ ಥೈರಾಯ್ಡ್ ಸಮಸ್ಯೆ ಕಡಿಮೆಯಾಗಲಿದೆ.
ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ. ಸುಲಭ ಹಾಗೂ ಸರಳವಾಗಿರುವ ಮನೆಮದ್ದು ಬಳಸಿ, ಆರೋಗ್ಯ ಕಾಪಾಡಿಕೊಳ್ಳಿ.
ಇದನ್ನೂ ಓದಿ : ಹಲ್ಲುಗಳ ಆರೈಕೆ ಇಲ್ಲಿವೆ ಕೆಲವು ಟಿಪ್ಸ್
ಥೈರಾಯ್ಡ್ ಲಕ್ಷಣಗಳು
- ಪದೇ ಪದೇ ಆಯಾಸವಾಗುವುದು
- ಕೂದಲು ಉದುರುವುದು
- ನಡುಕ, ಬೆವರುವಿಕೆ ಜಾಸ್ತಿ ಇರುವುದು
- ಅನಿರೀಕ್ಷಿತವಾಗಿ ತೂಕ ಏರಿಕೆ ಆಗುವುದು
- ಸಣ್ಣ ಸಣ್ಣ ವಿಷಯಕ್ಕೂ ಕೋಪ ಬರುವುದು
ಈ ರೀತಿಯ ಲಕ್ಷಣಗಳು ಅಥವಾ ಸಮಸ್ಯೆಗಳು ಇದ್ದರೆ, ಕೂಡಲೇ ವೈದ್ಯರ ಬಳಿ ಹೋಗಬೇಕು. ವೈದ್ಯರ ಸಲಹೆಗಳನ್ನು ಪಡೆದು ಚಿಕಿತ್ಸೆ ಪಡೆಯುವುದು ಒಳ್ಳೆಯದು.
- ರಜನಿ ಎ.ಕೆ, ಪವರ್ ಟಿವಿ