Thursday, October 31, 2024

ನಾವು ಕೇಳ್ತಿರೋದು ಹೊಟ್ಟೆಗೆ ಅನ್ನ ಹೊರತು, ಬೇರೆ ಏನೂ ಬುಸಿನೆಸ್ ಮಾಡ್ತಿಲ್ಲ : ಮಧು ಬಂಗಾರಪ್ಪ

ಶಿವಮೊಗ್ಗ : ನಾವು ಕೇಳುತ್ತಿರೋದು ಹೊಟ್ಟೆಗೆ ಅನ್ನ ಹೊರತು, ಬೇರೆ ಏನೂ ಕೇಳುತ್ತಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದ ಜನರು ಅವರಿಗೆ 66 ಸೀಟು ಕೊಟ್ಟಿದ್ದಾರೆ. ಅದನ್ನು ಅವರು ಲೆಕ್ಕ ಮಾಡಿಕೊಳ್ಳಲಿ ಎಂದು ಕುಟುಕಿದ್ದಾರೆ.

ಕೇಂದ್ರಕ್ಕೆ ಇಷ್ಟು ಜಿಎಸ್ಟಿ ಕೊಡುವಾಗ ಅವರಿಗೂ ಮಾನವೀಯತೆ ಇರಬೇಕಲ್ವಾ? ಗೆದ್ದಿರುವ 25 ಜನ ಸಂಸದರು ಏನು ಮಾಡ್ತಿದ್ದಾರೆ? ರಾಜ್ಯದ ಪಾಲು ಹೋಗಿ ಯಾವಾಗಾದ್ರೂ ಕೇಳಿದ್ದಾರಾ? ಇಲ್ಲಿ ಬಂದು ಅಕ್ಕಿ ವಿಚಾರವಾಗಿ ಮಾತಾಡ್ತಾರೆ, ಲೆಕ್ಕ ಕೇಳ್ತಾರೆ. ಅಕ್ಕಿಗೂ ಮೋಸ ಮಾಡಿ, ಜನರನ್ನು ಹಾದಿ ತಪ್ಪಿಸುವ ವ್ಯವಸ್ಥೆ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮಾನವೀಯತೆಯನ್ನೇ ಮರೆತಿದೆ

ಕೇಂದ್ರ, ರಾಜ್ಯದ ನಡುವೆ ಹೊಂದಾಣಿಕೆ ಇರಬೇಕು. ಆದರೆ, ಕೇಂದ್ರ ಸರ್ಕಾರ ಮಾನವೀಯತೆಯನ್ನೇ ಮರೆತಿದೆ. ನಾವು ಇಷ್ಟು ಕೊಟ್ಟಿದ್ದೇವೆ ಎಂದು ಮೋದಿ ಕೇಳಲಿ. ಜನ ಗೌರವ ಕೊಡ್ತಾರೆ. ಇಲ್ಲಿ ಬಂದು ಪ್ರತಿಭಟನೆಮಾಡ್ತಾರೆ. ಮೋದಿ ಮನೆ ಮುಂದೆ ಯಾವಾಗಾದ್ರೂ ಮಾಡಿದ್ದಾರಾ? ಕೆಟ್ಟ ಬುದ್ದಿ ನಿಲ್ಲಿಸಿ, ಇನ್ನಾದರೂ ಬಿಜೆಪಿಯವರು ಅರ್ಥ ಮಾಡಿಕೊಳ್ಳಲಿ ಎಂದು ಛೇಡಿಸಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರಕ್ಕೆ ಶುಭ ಶಕುನವೇಕೋ ‘ಕೈ’ ಹಿಡಿದಿಲ್ಲ : ಬಿ.ವೈ ವಿಜಯೇಂದ್ರ

ದ್ವೇಷದ ರಾಜಕಾರಣ ಕಾಣಿಸುತ್ತೆ

ನಾವು ಕೇಳುತ್ತಿರೋದು ಹೊಟ್ಟೆಗೆ ಅನ್ನ ಹೊರತು, ಬೇರೆ ಏನೂ ಕೇಳುತ್ತಿಲ್ಲ. ನಾವು ಬೇರೆ ಏನೂ ಬುಸಿನೆಸ್ ಮಾಡುತ್ತಿಲ್ಲ. 12ನೇ ತಾರೀಖು ಅಕ್ಕಿ ಕೊಡ್ತೇವೆ ಅನ್ನೋದು. ಬಳಿಕ ಮೂರು ದಿನ ಬಿಟ್ಟು ಕೊಡಲ್ಲ ಅನ್ನೋದು. ಈಗ ನೋಡಿದ್ರೆ 15 ಕಿಲೋ ಕೊಡಿ ಅಂತಿದ್ದಾರೆ. ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಸೋತಾಗ ಸಹಜವಾಗಿ ಎಲ್ರೂ ಇದನ್ನೇ ಮಾಡ್ತಾರೆ. ಜನರು ಕೂಡ ಇದನ್ನು ಗಮನಿಸ್ತಾರೆ. ಇದನ್ನೆಲ್ಲ ಗಮನಿಸಿದ್ರೆ ಪ್ರತಿ ಯೋಜನೆಯಲ್ಲೂ ದ್ವೇಷದ ರಾಜಕಾರಣ ಕಾಣಿಸುತ್ತೆ ಎಂದು ಆಕ್ರೋಶ ಹೊರಹಾಕಿದ್ದಾರೆ.

10 ಕಿಲೋ ಕೊಟ್ಟೇ ಕೊಡುತ್ತೇವೆ

ಕೇಂದ್ರಕ್ಕೆ ಅತಿ ಹೆಚ್ಚು 3 ಲಕ್ಷ ಕೋಟಿಯಷ್ಟು ಜಿಎಸ್ಟಿ ತೆರಿಗೆ ರಾಜ್ಯದಿಂದಲೇ ಹೋಗುತ್ತೆ. ಆದ್ರೆ, ಅವರು ನಮಗೆ 50ರಿಂದ 60 ಸಾವಿರ ಕೋಟಿ ಕೊಡ್ತಾರೆ ಅಷ್ಟೇ. ಇದನ್ನೆಲ್ಲ ನಾವು ಹೇಳ್ಬೇಕು ಅಲ್ವಾ? ಬಹುಪಾಲು ತೆರಿಗೆ ತಗೋಳ್ತಾರಲ್ವಾ? ಗ್ಯಾರಂಟಿ ನೀಡೋದ್ರ ಬಗ್ಗೆ ಸಿಎಂ ಈಗಾಗಲೇ ಹೇಳಿದ್ದಾರೆ. 10 ಕಿಲೋ ಕೊಟ್ಟೇ ಕೊಡುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

RELATED ARTICLES

Related Articles

TRENDING ARTICLES