Wednesday, January 22, 2025

ಮಹದೇವಪ್ಪನಿಗೂ ಟೋಪಿ, ಕಾಕಪಾಟಿಲನಿಗೂ ಟೋಪಿ! : ಶಾಸಕ ಯತ್ನಾಳ್ ಲೇವಡಿ

ಬೆಂಗಳೂರು : ಯಾವುದೇ ಕಾರಣಕ್ಕೂ ವಿದ್ಯುತ್ ದರ ಕಡಿಮೆ ಆಗಲ್ಲ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ಕೊಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಯತ್ನಾಳ್, ಮಹದೇವಪ್ಪನಿಗೂ ಶಾಕ್! ಕಾಕಪಾಟಿಲನಿಗೂ ಶಾಕ್! ಎಂದು ಕಾಲೆಳೆದಿದ್ದಾರೆ.

ವ್ಯಾರಂಟಿ ಇಲ್ಲದ ಗ್ಯಾರಂಟಿಗಳಿಂದ ಕರ್ನಾಟಕದ ಮಹಾಜನತೆಗೆ ಕಾಂಗ್ರೆಸ್ ಸರ್ಕಾರ ಮೋಸ ಮಾಡಿದೆ. ಈಗ ಕಾಂಗ್ರೆಸ್ ತನ್ನ ನಿಜ ಬಣ್ಣ ತೋರಿಸಲಾರಂಭಿಸಿದೆ. ವಿದ್ಯುತ್ ಬೆಲೆ ಏರಿಕೆಗೆ ಬಿಜೆಪಿ ಕಾರಣ ಅಂದವರು, 200 ಯುನಿಟ್ ಉಚಿತ ಕೊಡದೇ ಇದ್ದರೂ ದರ ಕಡಿಮೆ ಮಾಡಬೇಕಲ್ಲವೇ? ಎಂದು ಛೇಡಿಸಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ಜೊತೆ ಮುಸ್ಲಿಂ ಮುಖಂಡರ ಮಾತುಕತೆ

ಪುಕ್ಕಟ್ಟೆ ಕರೆಂಟ್ ಅಂತ ಭಾಷಣ ಮಾಡಿ, ಈಗ ಮಂದಿಗೆ ಬಿಲ್ ನೋಡಿದ್ರ ಶಾಕ್ ಹೊಡಿಬೇಕ್. ಮಂದಿಗೂ ಶಾಕ್, ಕಾರ್ಖಾನೆಗಳಿಗೂ ಶಾಕ್. ಇಷ್ಟು ದಿವಸ ವಿದ್ಯುತ್ ಬಿಲ್ ಏರಿಕೆಗೆ ಬಿಜೆಪಿ ಕಾರಣ ಅಂತ ಭಾಷಣ ಹೊಡದೇ ಹೊಡೆದಿದ್ದು. ಈಗ ಸತ್ಯ ಬಯಲಾಯ್ತೋ ಇಲ್ಲೋ? ಎಂದು ಕುಟುಕಿದ್ದಾರೆ.

ಹಂಪಿ ವಿವಿಗೆ ಬಾಕಿ ಉಳಿಸಿಕೊಂಡಿರು ಬಾಕಿ ಬಿಲ್ ಸೇರಿ 85ಲಕ್ಷ ರೂ. ಬಿಲ್ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಯತ್ನಾಳ್, ಮಹದೇವಪ್ಪನಿಗೂ ಟೋಪಿ. ಕಾಕಪಾಟಿಲನಿಗೂ ಟೋಪಿ. ಸಾರ್ವಜನಿಕರಿಗೂ ಟೋಪಿ ಹಾಕುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

RELATED ARTICLES

Related Articles

TRENDING ARTICLES