Thursday, December 19, 2024

ಯಾವ ಬ್ರಾಹ್ಮಣರು ಕೂಡ ಒಂದು ರೂಪಾಯಿ ಕೊಟ್ಟು ಊದಿನಕಡ್ಡಿ ತರಲ್ಲ : ಕೆ.ಎನ್ ರಾಜಣ್ಣ

ದಾವಣಗೆರೆ : ಯಾವ ಬ್ರಾಹ್ಮಣರು ಕೂಡ ಒಂದು ರೂಪಾಯಿ ಕೊಟ್ಟು ಊದಿನಕಡ್ಡಿ ತರೋದಿಲ್ಲ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆ ಹರಿಹರದ ರಾಜನಹಳ್ಳಿ‌ ವಾಲ್ಮೀಕಿ ಪೀಠದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ.

ಬ್ರಾಹ್ಮಣರು ಈಗ ಹೋಮ ಹವನ ಕಡಿಮೆ ಮಾಡಿದ್ದಾರೆ. ಆದರೆ, ನಾವೇ ಶೂದ್ರರೇ ಹೆಚ್ಚು ಮಾಡುತ್ತಿದ್ದೇವೆ. ಯಾವ ಬ್ರಾಹ್ಮಣರು ಕೂಡ ಒಂದು ರೂಪಾಯಿ ಕೊಟ್ಟು ಊದಿನಕಡ್ಡಿ ತರೋದಿಲ್ಲ. ಹೀಗೆ ಹೇಳ್ದೆ ಅಂತ ನಾನು ಬ್ರಾಹ್ಮಣ ವಿರೋಧಿ ಅಂತ ಅಲ್ಲ. ಮಾಧ್ಯಮಗಳು ನಾಳೆ ಬೆಳಗ್ಗೆ ಬ್ರೇಕಿಂಗ್ ನ್ಯೂಸ್ ಅಂತ ಹಾಕಬೇಡಿ. ಅದು ನಾನು ಹೇಳಿದ್ದಲ್ಲ, ನನ್ನ ಸ್ನೇಹಿತ ಹೇಳಿದ್ದು ಅಂತ ಕೆ.ಎನ್ ರಾಜಣ್ಣ ತಿಳಿಸಿದ್ದಾರೆ.

ನಾವು ಯಾವತ್ತೂ ಕೆಳವರ್ಗದವರಲ್ಲ

ಮೇಲ್ವರ್ಗ ಅಂತ ಯಾರೂ ಬಳಸಬೇಡಿ. ಅವರನ್ನು ಮುಂದುವರಿದ ವರ್ಗ ಅಂತ ಬಳಸಿ. ಅವರನ್ನು ಮೇಲ್ವರ್ಗ ಅಂತ ಕರೆದ್ರೆ, ನಾವೇ‌ನು ಕೆಳವರ್ಗದವರಾ? ನಾವು ಯಾವುದರಲ್ಲಿ ಕಡಿಮೆ‌ ಇದ್ದೇವೆ. ನಾವು ಯಾವತ್ತೂ ಕೆಳವರ್ಗದವರಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಒಬ್ಬ ಕಳ್ಳ, ಮತ್ತೊಬ್ಬ ಮಳ್ಳ.. ಇಂಥವರನ್ನು ಹಿಂದೆ ನೋಡಿರಲಿಲ್ಲ : ಕೆ.ಎಸ್ ಈಶ್ವರಪ್ಪ

ಮೇಲ್ವರ್ಗದವರು ನಮ್ಮಂಗೆ ಬಂದವರು. ಅವರೇನು ಮೇಲಿಂದ ಬಂದಿಲ್ಲ. ಇನ್ನುಮುಂದೆ ಅವರನ್ನು ಮುಂದುವರಿದವರು, ಹಿಂದುಳಿದವರು ಅಂತ ಮಾತ್ರ ಕರೆಯಬೇಕು. ಮೇಲ್ವರ್ಗದಿಂದ ಅನ್ಯಾಯ ಎನ್ನಬಾರದು. ಮುಂದುವರಿದ ವರ್ಗದಿಂದ ಅನ್ಯಾಯ ಎನ್ನಬೇಕು ಎಂದು ಕೆ.ಎನ್ ರಾಜಣ್ಣ ಸಲಹೆ ನೀಡಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ವಾಪಸ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‌ಜನರ ನಿರೀಕ್ಷೆಗೆ ಸ್ಪಂದಿಸಿ ಕೆಲಸ ಮಾಡುತ್ತೇವೆ. ಹೀಗಾಗಿ, ಕೆಲವೊಂದು ಬದಲಾವಣೆ ಆಗುತ್ತವೆ. ಅದನ್ನು ಸರಿ ಎಂದು ಜನರು ಒಪ್ಪುತ್ತಾರೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES