Wednesday, January 22, 2025

ಜೂ.22ಕ್ಕೆ ವಿದ್ಯುತ್ ದರ ಏರಿಕೆ ಖಂಡಿಸಿ ಕರ್ನಾಟಕ ಬಂದ್‌ಗೆ ಕರೆ 

ಬೆಂಗಳೂರು : ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಕೆಲವೇ ತಿಂಗಳು ಮಾತ್ರ ಆಗಿದ್ದು, ರಾಜ್ಯದಲ್ಲಿ ರಾಜ್ಯಸರ್ಕಾರಕ್ಕೆ ಪ್ರತಿಭಟನೆ ಕಾವು ಜೂನ್ 22ಕ್ಕೆ ತಟ್ಟಲಿದೆ.

ಹೌದು, ರಾಜ್ಯದಲ್ಲಿ ಈಗಾಗಲೇ ವಿದ್ಯತ್‌ ದರವನ್ನು ರಾಜ್ಯಸರ್ಕಾರ ಹೆಚ್ಚಳ ಮಾಡಲಾಗಿದ್ದು, ಎರಡು ತಿಂಗಳ ಬಿಲ್‌ ಅನ್ನು ಒಟ್ಟಿಗೆ ನೀಡಿದ್ದರಿಂದ ಸಮಸ್ಯೆಯಾಗಿದೆ. ಮುಂದಿನ ತಿಂಗಳಿಂದ ಸರಿಹೋಗಲಿದೆ. ಆದರೆ, ವಿದ್ಯುತ್‌ ದರವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿಕೆ ನೀಡಿದ್ದರು. ಕಾಂಗ್ರೆಸ್​ ತನ್ನ ಭರವಸೆಯ ಗ್ಯಾರಂಟಿಗಳನ್ನು ನೀಡಲು ಹೋಗಿ ಬೆಲೆ ಏರಿಕೆ ಮಾಡಿದೆ. ಎಂದು ಜನರು ಆಕ್ರೋಶ್​ ವ್ಯಕ್ತಪಡಿಸಿದ್ದಾರೆ.

ಇನ್ನೂ ಗ್ಯಾರಂಟಿ ಯೋಜನೆಯಲ್ಲೊಂದು ಫ್ರೀ ವಿದ್ಯುತ್​ ಇದನ್ನೂ ನೀಡಲು ಹೋಗಿ ಕಳೆದ ಎರಡು ತಿಂಗಳ ವಿದ್ಯುತ್​ ದರವನ್ನು ಹೆಚ್ಚಳ ಮಾಡಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಖಂಡಿಸಿ ಜೂನ್ 22ಕ್ಕೆ ಕರ್ನಾಟಕ ಬಂದ್‌ಗೆ (Karnataka Bandh) ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೊ (KCC&I) ಕರೆ ನೀಡಿದೆ. ಜೂನ್ 22ರಂದು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೈಗಾರಿಕೆಗಳು ಬಂದ್ ಇರಲಿವೆ.

ಇದನ್ನೂ ಓದಿ: ನನ್ನ ಹೆಂಡ್ತಿ, ಎರಡು ಸೀರೆ ತಗೊಂಡು ರಾತ್ರಿ ಹೋಗಿ ಬೆಳಗ್ಗೆ ಬರ್ತೀನಿ ಅಂದ್ಲು, ಇನ್ನೂ ಬಂದೇ…

ಇನ್ನೂ ಕೆಸಿಸಿ&ಐ ಹಾಗೂ ಇತರ ಎಲ್ಲಾ ಜಿಲ್ಲಾ ವಾಣಿಜ್ಯ ಮಂಡಳಿಯಿಂದ ಬಂದ್‌ಗೆ ಕರೆ ನೀಡಿಲಾಗಿದೆ. ಹೀಗಾಗಿ ಎಲ್ಲಾ ವ್ಯಾಪಾರ ಹಾಗೂ ಕೈಗಾರಿಕೆಗಳನ್ನು ಇಂಡಸ್ಟ್ರಿಗಳು ಸ್ತಬ್ಧಗೊಳಿಸಲಿವೆ. ಈ ಬಂದ್‌ಗೆ 25ಕ್ಕೂ ಹೆಚ್ಚು ಜಿಲ್ಲಾ ಚೇಂಬರ್‌ಗಳಿಂದ ಬೆಂಬಲ ದೊರಕಿದೆ.

ವಿದ್ಯುತ್ ದರ ಅಸಹಜ ಬೆಲೆ ಏರಿಕೆಯನ್ನು ವಿರೋಧಿಸಿ ಬಂದ್‌ಗೆ ಕರೆ

ಈ ಬಗ್ಗೆ ಮಾಹಿತಿ ನೀಡಿರುವ ಕೆಸಿಸಿ&ಐ, ಎಸ್ಕಾಂನ ವಿದ್ಯುತ್ ದರ ಅಸಹಜ ಬೆಲೆ ಏರಿಕೆಯನ್ನು ವಿರೋಧಿಸಿ ಬಂದ್‌ಗೆ ಕರೆ ನೀಡಲಾಗಿದೆ. ಕಳೆದ 8 ದಿನಗಳಿಂದ ವಿದ್ಯುತ್ ಶುಲ್ಕ ಹೆಚ್ಚಳದ ಪರಿಣಾಮದ ಗಂಭೀರತೆಯನ್ನು ಸರ್ಕಾರಕ್ಕೆ ತಿಳಿಸುವ ಪ್ರಯತ್ನ ಮಾಡಿದ್ದೇವೆ. ಆದರೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಈ ಬಂದ್‌ಗೆ ಕರೆ ನೀಡಿದ್ದೇವೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES