Wednesday, January 22, 2025

ಪಠ್ಯ ಪುಸ್ತಕ ತಿದ್ದುಪಡಿ ಮಾಡಿ ಸರ್ಕಾರ ಆದೇಶ : ಹೆಡ್ಗೇವಾರ್, ಸೂಲಿಬೆಲೆ ಪಾಠಕ್ಕೆ ಕೊಕ್

ಬೆಂಗಳೂರು : ಪಠ್ಯ ಪುಸ್ತಕ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪಠ್ಯದಲ್ಲಿ ಕೈಬಿಡುವ ಪಾಠದ ಬಗ್ಗೆ ಅಧಿಕೃತ ಸುತ್ತೋಲೆ ಹೊರಡಿಸಿದೆ.

ಸಮಾಜ ವಿಜ್ಞಾನ ವಿಷಯದಲ್ಲಿ 9 ಬದಲಾವಣೆ ಮಾಡಲಾಗಿದ್ದು, ಕನ್ನಡ ಭಾಷಾ ಪುಸ್ತಕದಲ್ಲೂ 9 ಪಾಠಕ್ಕೆ ಕತ್ತರಿ ಹಾಕಲಾಗಿದೆ. ಸಮಾಜ ವಿಜ್ಞಾನದಲ್ಲಿ 9 ಪಾಠಕ್ಕೆ ಕೊಕ್ ನೀಡಲಾಗಿದೆ. ಕೇಶವ್ ಹೆಡ್ಗೇವಾರ್ ಬರೆದಿದ್ದ ಗದ್ಯ, ಚಕ್ರವರ್ತಿ ಸೂಲಿಬೆಲೆಯ ‘ತಾಯಿ ಭಾರತಿಯ ಅಮರ ಪುತ್ರರು’ ಪಾಠಕ್ಕೆ ಕೊಕ್ ನೀಡಲಾಗಿದೆ.

ಸೇರ್ಪಡೆಯಾದ ಪಾಠಗಳು

ಸಾವಿತ್ರಿ ಪುಲೆ, ಜವಹರಲಾಲ್ ನೆಹರು, ಅಂಬೇಡ್ಕರ್ ಪಠ್ಯ ಸೇರ್ಪಡೆ ಮಾಡಲಾಗಿದೆ. ಸುಕುಮಾರಸ್ವಾಮಿ ಕುರಿತ ಪಠ್ಯಕ್ಕೆ ಅವಕಾಶ ನೀಡಲಾಗಿದೆ. ಸಾರಾ ಅಬೂಬ್ಕರ್, ವಿಜಯಮಾಲಾ ರಂಗನಾಥ್ ಪಾಠ ಸೇರ್ಪಡೆ ಮಾಡಲಾಗಿದೆ. ವಾಲ್ಮೀಕಿ ಮಹರ್ಷಿ, ಉರುಸ್​ಗಳಲ್ಲಿ ಭಾವೈಕ್ಯತೆ ಪಾಠ ಜೋಡಣೆ, ಸಮಾಜ ವಿಜ್ಞಾನ ಪಠ್ಯದಲ್ಲೂ ಹಲವು ಅಧ್ಯಾಯ, ವೇದ ಕಾಲದ ಸಂಸ್ಕೃತಿ, ಹೊಸ ಧರ್ಮಗಳ ಉದಯ ಕುರಿತ ಅಧ್ಯಾಯ, ಮಿರ್ಜಾ ಇಸ್ಮಾಯಿಲ್, ವಿಶ್ವೇಶ್ವರಯ್ಯ ಹಾಗೂ ಒಡೆಯರ್ ಕುರಿತ ಪಾಠ ಸೇರ್ಪಡೆ ಮಾಡಲಾಗಿದೆ.

ಇದನ್ನೂ ಓದಿ : ಸಾವಿತ್ರಿ ಬಾ ಫುಲೆ ವಿಷಯ ಪಠ್ಯದಲ್ಲಿ ಸೇರಿಸಿದ್ದೇವೆ : ಮಧು ಬಂಗಾರಪ್ಪ 

 

ಯಾವ ಪಾಠಗಳಿಗೆ ಕೊಕ್

ಕನ್ನಡ ಭಾಷಾ ಪುಸ್ತಕದಲ್ಲಿ 9 ಹಾಗೂ ಸಮಾಜ ವಿಜ್ಞಾನದಲ್ಲಿ 9 ಪಾಠಕ್ಕೆ ಕೊಕ್ ನೀಡಲಾಗಿದೆ. ನಿಜವಾದ ಆದರ್ಶಪುರುಷ ಯಾರಾಗಬೇಕು, ಕೇಶವ್ ಹೆಡ್ಗೇವಾರ್ ಬರೆದಿದ್ದ ಗದ್ಯ, ಚಕ್ರವರ್ತಿ ಸೂಲಿಬೆಲೆಯ ತಾಯಿ ಭಾರತಿಯ ಅಮರ ಪುತ್ರರು, ಶತಾವಧಾನಿ ಆರ್ ಗಣೇಶ್ ಗದ್ಯ, ಶ್ರೇಷ್ಠ ಭಾರತೀಯ ಚಿಂತನೆಗಳು, ನಿರ್ಮಲಾ ಸುರತ್ಕಲ್, ರಮಾನಂದ ಆಚಾರ್ಯರ ಪಾಠ, ಪಾರಂಪಳ್ಳಿ ನರಸಿಂಹ ಐತಾಳ, ಲಕ್ಷ್ಮೀಶ, ಕೆ.ಟಿ ಗಟ್ಟಿ ಪಾಠ, ಪಿ. ಸತ್ಯನಾರಾಯಣ ಭಟ್ಟರ ಗದ್ಯವನ್ನು ಪಠ್ಯದಿಂದ ಕೈಬಿಡಲಾಗಿದೆ.

RELATED ARTICLES

Related Articles

TRENDING ARTICLES