Monday, December 23, 2024

ಬೆಂಗಳೂರು – ಧಾರವಾಡ ವಂದೇ ಭಾರತ್‌ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿ ಇಲ್ಲಿದೆ ನೋಡಿ

ಬೆಂಗಳೂರು : ಕರ್ನಾಟಕ್ಕೆ ಎರಡನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌  ರೈಲು ಬೆಂಗಳೂರು ಟು ಧಾರವಾಡದ ನಡುವೆ ಸಂಚರಿಸಲು ದಿನಗಣನೆ ಆರಂಭವಾಗಿದ್ದು, ಇದೇ ಜೂನ್‌ 26ರಂದು ಪ್ರಧಾನಿ ನರೇಂದ್ರ ಮೋದಿಯವರು ವಂದೇ  ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ  ಚಾಲನೆ ನೀಡಲಿದ್ದಾರೆ.

ಹೌದು, ನರೇಂದ್ರ ಮೋದಿಯವರು ಚಾಲನೆ ವಂದೇ ಭಾರತ್‌ ಎಕ್ಸ್‌ಪ್ರೆಸ್​ಗೆ ಚಾಲನೆ ನೀಡಿದ ಎರಡು ದಿನಗಳ ಬಳಿಕ ಅದ್ರೆ ಜೂನ್‌ 28ರಿಂದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರು – ಧಾರವಾಡದ ನಡುವೆ ವಾಣಿಜ್ಯ ಪ್ರಯಾಣವನ್ನು ಆರಂಭವಾಗಲಿದೆ.

ಹೀಗಿದೆ ನೋಡಿ  ಬೆಂಗಳೂರು – ಧಾರವಾಡ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ವೇಳಾ ಪಟ್ಟಿ 

  • ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ರೈಲ್ವೇ ನಿಲ್ದಾಣ – ಬೆಳಗ್ಗೆ 5.45

• ಯಶವಂತಪುರ – 5.55 AM

• ದಾವಣಗೆರೆ – 9.58 AM

• ಹುಬ್ಬಳ್ಳಿ – 12.10 PM

• ಧಾರವಾಡ – ಮಧ್ಯಾಹ್ನ 12.40

ಧಾರವಾಡ – ಬೆಂಗಳೂರು ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು

• ಧಾರವಾಡ – ಮಧ್ಯಾಹ್ನ 1.15

• ಹುಬ್ಬಳ್ಳಿ – 1.35 PM

• ದಾವಣಗೆರೆ – 3.48 PM

• ಯಶವಂತಪುರ – 7.45 PM

• ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ರೈಲ್ವೇ ನಿಲ್ದಾಣ – ರಾತ್ರಿ 8.10

ಇನ್ನೂ ಈ ರೈಲು ವಂದೇ ಭಾರತ್‌ ಎಕ್ಸ್‌ಪ್ರೆಸ್ ನಿಧಾನವಾಗಿಯೇ ಗಂಟೆಗೆ ಸರಾಸರಿ 70.54 ಕಿಮೀ ವೇಗದಲ್ಲಿ ಚಲಿಸಲಿದ್ದು, 487.47 ಕಿಮೀ ಅಂತರ ಕ್ರಮಿಸಲು ಭಾಗಶಃ 7 ಗಂಟೆ ತೆಗೆದುಕೊಳ್ಳಲಿದೆ. ಸದ್ಯ ಯಶವಂತಪುರ ಹಾಗೂ ಹುಬ್ಬಳ್ಳಿ ನಡುವಿನ ಎಕ್ಸ್‌ಪ್ರೆಸ್‌ ರೈಲು 6 ಗಂಟೆ 15 ನಿಮಿಷದಲ್ಲಿ ಅಂತರವನ್ನು ಕ್ರಮಿಸುತ್ತಿದೆ.

 

RELATED ARTICLES

Related Articles

TRENDING ARTICLES