Wednesday, January 22, 2025

ಫ್ರೀ ವಿದ್ಯುತ್​ ಪಡೆಯಲು ‘ಆಧಾರ್’ ಸಾಕು

ಬೆಂಗಳೂರು: ಕಾಂಗ್ರೆಸ್​ ಗ್ಯಾರಂಟಿಯಲ್ಲಿವೊಂದು ಆದ ಗೃಹ ಜ್ಯೋತಿ ಯೋಜನೆಯ ಸೌಲಭ್ಯವನ್ನು ಪಡೆಯಲು ಬಾಡಿಗೆದಾರರು ಹಾಗೂ ಇತರೆ ಗ್ರಾಹಕರು ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು ನಮ್ಮ ಬಳಿ ಇರುವ ದಾಖಲೆಗಳೇನು ಎಂಬುವುದಕ್ಕೆ ಇಲ್ಲಿದೆ ಉತ್ತರ ನೋಡಿ…

ಹೌದು, ನಾವು ಉಚಿತವಾಗಿ 200 ಯೂನಿಟ್​ ವಿದ್ಯುತ್​ ಪಡೆಯಲು ನಮ್ಮ ಬಳಿ ಆಧಾರ್​ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ಜೋಡಣೆ ಮಾಡಿದರೆ ಸಾಕು ಎಂದು ಇಂಧನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಆಡಳಿತ ಯಂತ್ರಕ್ಕೆ ಸರ್ಜರಿ : ಐದು ಮಂದಿಗೆ ಜಿಲ್ಲಾಧಿಕಾರಿ ಭಾಗ್ಯ

ಈ ಯೋಜನೆಯು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವವರಿಗೆ ಗೃಹ ವಿದ್ಯುತ್ ಬಳಕೆದಾರಿಗೂ ಅನ್ವಯವಾಗಲಿದೆ ಎನ್ನುವ ಪ್ರಶ್ನೆಗೆ ಈ ವಿವರ ನೀಡಲಾಗಿದೆ. ಗೃಹ ವಿದ್ಯುತ್‌ ಬಳಕೆದಾರರು ಬಾಡಿಗೆದಾರರಾಗಿದ್ದಲ್ಲಿ, ವಾಸದ ಮನೆಯ ವಿಳಾಸಕ್ಕೆ ಸಂಬಂಧಿಸಿದಂತೆ ಆಧಾರ್ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ಜೋಡಣೆ ಮಾಡಿ ನೋಂದಾಯಿಸುವ ಮೂಲಕ ಈ ಸೌಲಭ್ಯ ಪಡೆಯಬಹುದಾಗಿದೆ.

ಗೃಹ ಜ್ಯೋತಿ ಯೋಜನೆಯನ್ನು ಕೆಲವು ಷರತ್ತುಗಳೊಂದಿಗೆ ಜುಲೈ 1ರಿಂದ ಜಾರಿಗೊಳಿಸಲು ಅನುಮೋದನೆ ನೀಡಲಾಗಿದೆ. ಈ ಯೋಜನೆಯ ನೋಂದಣಿ ಇದೇ 18ರಿಂದ ಆರಂಭವಾಗಲಿದೆ.

 

RELATED ARTICLES

Related Articles

TRENDING ARTICLES