Monday, December 23, 2024

300 ರೂ. ಬರುತ್ತಿದ್ದ ಕರೆಂಟ್ ಬಿಲ್ 1,590 ರೂ. ಬಂದಿದೆ : ಮಹಿಳೆಯರ ಆಕ್ರೋಶ

ದಾವಣಗೆರೆ : ಕರೆಂಟ್​ ಬಿಲ್​ ಏರಿಕೆಯಾಗಿರುವ ವಿರುದ್ಧ ಹೊನ್ನಾಳಿ ತಾಲೂಕಿನ ತಕ್ಕನಹಳ್ಳಿ ಗ್ರಾಮದ ಮಹಿಳೆಯರು ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಎದರು ಬೇಸರ ಹೊರಹಾಕಿದ್ದಾರೆ.

ಎಲ್ಲಾ ಗ್ಯಾರಂಟಿಗಳಿಗೂ ಕಂಡಿಷನ್ ಹಾಕುತ್ತಿದ್ದಾರೆ. ಅಕ್ಕಿ ಕೊಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿಲ್ಲ. ಪಕ್ಕದ ರಾಜ್ಯದಲ್ಲಿ ಖರೀದಿ ಮಾಡಿ ಕೊಡಿ ಎಂದು ಹೇಳಿದ್ದಾರೆ.

200 ಯುನಿಟ್ ಫ್ರೀ ಅಂತೇಳಿ ಈಗ ಕಂಡಿಷನ್ ಹಾಕಿದ್ದಾರೆ. ವಿದ್ಯುತ್ ಬಿಲ್ ಮೂರು ಪಟ್ಟು ಹೆಚ್ಚು ಬರುತ್ತಿದೆ. 300 ರೂ. ಬರುತ್ತಿದ್ದ ಕರೆಂಟ್ ಬಿಲ್ ಈಗ 1,590 ರೂ. ಬಿಲ್ ಬಂದಿದೆ. ವಿದ್ಯಾನಿಧಿ ಪಾಸ್ ಆಗಿ ಎರಡು ವರ್ಷ ಮಾತ್ರ ಎನ್ನುತ್ತಿದ್ದಾರೆ ಎಂದು ಮಹಿಳೆಯರು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ : ‘ಸುಳ್ಳುರಾಮಯ್ಯ’ ಅಲ್ಲ ಅನ್ನೋದಾದ್ರೆ ಕಮಿಟ್ಮೆಂಟ್ ಲೆಟರ್ ತೋರಿಸಲಿ : ಸಿ.ಟಿ ರವಿ

ಯಾರೂ ಕರೆಂಟ್ ಬಿಲ್ ಕಟ್ಟಬೇಡಿ

ಈ ವೇಳೆ ಮಾತನಾಡಿರುವ ಎಂ.ಪಿ ರೇಣುಕಾಚಾರ್ಯ ಅವರು, ಯಾರೂ ಕೂಡ ಕರೆಂಟ್ ಬಿಲ್ ಕಟ್ಟಬೇಡಿ. 10 ಕಿಲೋ ಅಕ್ಕಿ ಕೊಡುತ್ತೇವೆ ಎಂದು ಹೇಳಿ ಈಗ ಕೇಂದ್ರದ ಮೇಲೆ ಆರೋಪ  ಮಾಡುವುದು ಸರಿಯಲ್ಲ. ಕೇಂದ್ರ 5 ಕಿಲೋ ಬಿಟ್ಟು ಕೊಟ್ಟ ಮಾತಿನಂತೆ 10 ಕಿಲೋ ಅಕ್ಕಿ ಕೊಡಬೇಕು ಎಂದು ಹೇಳಿದ್ದಾರೆ.

ಯಾರಾದರೂ ಕರೆಂಟ್ ಬಿಲ್ ಕೇಳಿದರೆ ತಮಗೆ ಪೋನ್ ಮಾಡುವಂತೆ ಸೂಚಿಸಿದರು. ರಾಜ್ಯ ಸರ್ಕಾರ ಕೊಟ್ಟ ಭರವಸೆ ಷರತ್ತಿಲ್ಲದೇ ಈಡೇರಿಸಬೇಕು ಎಂದು ರಾಜ್ಯ ಸರ್ಕಾರದ ಭರವಸೆಗಳ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES