Sunday, November 3, 2024

ಮತ್ತೆ ಟಿಪ್ಪು ಯುಗ ಪ್ರಾರಂಭಿಸಲು ಕಾಂಗ್ರೆಸ್ ಹೊರಟಿದೆ : ಆರ್. ಅಶೋಕ್ ಕಿಡಿ

ಬೆಂಗಳೂರು : ಕಾಂಗ್ರೆಸ್ ಸರ್ಕಾರ ಬಂದ ನಂತರ ಕರ್ನಾಟಕದಲ್ಲಿ ಮತ್ತೆ ಟಿಪ್ಪು ಯುಗ ಪ್ರಾರಂಭಿಸಲು ಶಂಕುಸ್ಥಾಪನೆ ಮಾಡಲು ಹೊರಟಿದೆ ಎಂದು ಮಾಜಿ ಸಚಿವ ಆರ್. ಅಶೋಕ್ ಕಿಡಿಕಾರಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠೀಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮತಾಂತರದ ಬ್ರಾಂಡ್ ಅಂಬಾಸಿಡರ್ ಆಗಲು ಹೊರಟಿದೆ ಎಂದು ಕುಟುಕಿದ್ದಾರೆ.

ಮತಾಂತರ ಕಾಯ್ದೆ ತೆಗೆಯಬೇಕು ಅಂತ ಅನೇಕರು ಹೇಳಿದ್ದಾರೆ. ಸ್ವಾಮೀಜಿಗಳೂ ಕೂಡ ಮತಾಂತರ ಆಗೋದನ್ನು ತಡೆಯಬೇಕು ಅಂತ‌ ಹೇಳಿದ್ದಾರೆ. 40 ಲಕ್ಷ ಜನ ಹಿಂದೂಗಳು ಮತಾಂತರ ಆಗಿದ್ದಾರೆ. ಲವ್, ಆಸ್ಪತ್ರೆ, ಹಣದ ಆಮಿಷಕ್ಕೆ ಹಿಂದೂಗಳು ಮತಾಂತ ಆಗಿದ್ದಾರೆ. ನಾವು ಮಾಡಿದ ಕಾಯ್ದೆ ಬಲವಂತವಾಗಿ ಮತಾಂತರ ಆಗಬಾರದು ಅಂತ ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಂಬೇಡ್ಕರ್ ಸಂವಿಧಾನದಲ್ಲಿ ಬರೆದಿದ್ದಾರೆ

ಡಾ.ಬಿ.ಆರ್ ಅಂಬೇಡ್ಕರ್ ಕೂಡ ಸಂವಿಧಾನದಲ್ಲಿ ಮತಾಂತರ ಬಗ್ಗೆ ಬರೆದಿದ್ದಾರೆ. ಬಲವಂತವಾಗಿ, ಉದ್ಯೋಗ, ಆಮಿಷಗಳಿಗೆ ಮತಾಂತರ ಆಗಬಾರದು ಅಂತ ಹೇಳಿದ್ದೇವೆ ತಪ್ಪೇನು? ಮತಾಂತರ ಆಗಬೇಕಾದವರು ಅರ್ಜಿ ಹಾಕಿ ಕಾನೂನು ಪ್ರಕಾರ ಆಗಬೇಕು. ಬಾಬರ್ ಹಿಂದೆ ಮತಾಂತರ ಮಾಡಲು ಹೊರಟಿದ್ದ. ಟಿಪ್ಪು ಕೊಡಗಿನಲ್ಲಿ‌ 50ರಿಂದ 60 ಸಾವಿರ ಜನರನ್ನು ಮತಾಂತರ ಮಾಡಿದ್ದ ಎಂದು ಆರ್. ಅಶೋಕ್ ಛೇಡಿಸಿದ್ದಾರೆ.

ಇದನ್ನೂ ಓದಿ : ಜೆ.ಪಿ ನಡ್ಡಾ ಅವ್ರಿಗೆ ಥ್ಯಾಕ್ಸ್, ಅವ್ರು ನುಡಿದಂತೆ ನಡೆದಿದ್ದಾರೆ : ಡಿ.ಕೆ ಶಿವಕುಮಾರ್

ಮಿನಿ ಪಾಕಿಸ್ತಾನ ಮಾಡಲು ಹೊರಟಿದೆ

ಕಾಂಗ್ರೆಸ್ ಕರ್ನಾಟಕವನ್ನ ಮಿನಿ ಪಾಕಿಸ್ತಾನ ಮಾಡಲು ಹೊರಟಂತೆ ಇದೆ. ಮತಾಂತರ ಕಾಯ್ದೆಯನ್ನು ಯಾರಾದರೂ ವಿರೋಧ ಮಾಡಿದ್ರಾ? ಯಾರು ವಿರೋಧ ಮಾಡಿರಲಿಲ್ಲ. ಬಲವಂತವಾಗಿ ಮತಾಂತರ ಆಗಬರದು ಅಂತ ನಾವು ಕಾಯ್ದೆ ತಂದ್ವಿ. ಮತಾಂತರ ಕಾಯ್ದೆ ವಾಪಸ್ ಪಡಿಬಾರದು ಅಂತ ಬಿಜೆಪಿ ಆಗ್ರಹ ಪಡಿಸುತ್ತದೆ. ಮತಾಂತರ ಕಾಯ್ದೆ ವಾಪಸ್ ತೆಗೆದಹಾಕಿದದ್ರೆ ಬಿಜೆಪಿ ಹೋರಾಟ ನಡೆಸಲಿದೆ ಎಂದು ಆರ್. ಅಶೊಕ್ ಎಚ್ಚರಿಕೆ ಸಂದೇಶ ರವಾನಿಸದ್ದಾರೆ.

ಕಾಂಗ್ರೆಸ್ ದಲ್ಲಾಳಿಗಳ ಪರವಾಗಿ ನಿಂತಿದೆ

ಎಪಿಎಂಸಿ ಕಾಯ್ದೆಯಲ್ಲಿ ಏನ್ ತಪ್ಪು ಇದೆ. ನಾವು ತಂದ ಕಾಯ್ದೆಯಿಂದ ರೈತರು ನೇರವಾಗಿ ಮಾರಾಟ ಮಾಡ್ತಾರೆ. ಆನ್ ಲೈನ್ ಮೂಲಕ ವ್ಯಾಪಾರ ಮಾಡಬಹುದಾಗಿತ್ತು. ರೈತರಿಗೆ ಆದಾಯ ಬರೋದು ಮುಖ್ಯನಾ? ಅಥವಾ ಎಂಪಿಎಂಸಿ ಬರೊದಾ ಮುಖ್ಯನಾ? ಎಪಿಎಂಸಿಯಲ್ಲಿ ಯಾವ ತೂಕ ಮಾಡ್ತಾರೆ ಅಂತ ಗೊತ್ತಿದೆ. ದಲ್ಲಾಳಿಗಳ ಪರವಾಗಿ ಕಾಂಗ್ರೆಸ್ ನಿಂತಿದೆ ಎಂದು ಛೇಡಿಸಿದ್ದಾರೆ.

RELATED ARTICLES

Related Articles

TRENDING ARTICLES