Monday, December 23, 2024

ಅವಿವಾ ಮುದ್ದೆ ತಿನ್ನೋದು ಡೌಟು, ಬಿರಿಯಾನಿ ತಿಂತಾರೆ ; ನಟ ಅಭಿಷೇಕ್‌

ಮಂಡ್ಯ: ಅಭಿಷೇಕ್ ಅಂಬರೀಶ್ ಮತ್ತು ಅವಿವಾ ವಿವಾಹವು ಜೂನ್ 5ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಅದ್ರೆ ಇದೀಗ ಮಂಡ್ಯದ ಜನತೆಗಾಗಿ ಮಂಡ್ಯದಲ್ಲಿ ಬೀಗರ ಔತಣಕೂಟವನ್ನು ಏರ್ಪಡಿಸಲಾಗಿದೆ. ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿಯ 15 ಎಕರೆ ಪ್ರದೇಶದಲ್ಲಿ ಬೀಗರ ಔತಣ ಕೂಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಹೌದು, ಇಂದು ಔತಣಕೂಟದ ಸ್ಥಳಕ್ಕೆ ಆಗಮಿಸಿದ ನಟ ಅಭಿಷೇಕ್‌ ಅಂಬರೀಶ್‌ ಮಾಧ್ಯಮಗಳೊಂದಿಗೆ ಮಾತನಾಡಿ, ಈಗಾಗಲೇ ತುಂಬಾ ಜನ ಆಗಮಿಸಿದ್ದಾರೆ. ಇಷ್ಟು ಜನರನ್ನು ಅವಿವಾ ಜೀವನದಲ್ಲಿ ನೋಡಿರಲಿಲ್ಲ. ಅವರು ಹೆದರಿಕೊಂಡಿದ್ದಾರೆ. ಮೆನು ಕಾರ್ಡ್‌ನಲ್ಲಿ ಅಂಬರೀಷ್‌ ಅವರಿಗೆ ಇಷ್ಟವಾದದನ್ನೇ ಸೇರಿಸಲಾಗಿದೆ. ಅವಿವಾ ಮುದ್ದೆ ತಿನ್ನೋದು ಡೌಟು, ಬಿರಿಯಾನಿ ಸಖತ್​ ಆಗಿ ತಿಂತಾರೆ ಎಂದರು  ಇಂದು ನಾನು ರಾಜಕೀಯ ವಿಚಾರವನ್ನು ಮಾತನಾಡುವುದಿಲ್ಲ ಎಂದು ನಟ ಅಭಿಷೇಕ್ ಅಂಬರೀಶ್‌ ಹೇಳಿದರು.

ಮಾಧ್ಯಮದವರ ಮೂಲಕ ಎಲ್ಲಾರಿಗೂ ಬೀಗರ ಔತಣಕೂಟಕ್ಕೆ ಸ್ವಾಗತವನ್ನು ಕೋರುತ್ತೇನೆ. ಎಲ್ಲಾರು ಬಂದು ಊಟ ಮಾಡಿ ಎಂದರು

RELATED ARTICLES

Related Articles

TRENDING ARTICLES