Tuesday, January 21, 2025

ಐಷಾರಾಮಿ ಕಾರು ಖರೀದಿಸಿದ ರಾಕಿ ಬಾಯ್​ ​ ; ಎಷ್ಟಿದರ ಬೆಲೆ..? ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್

ಬೆಂಗಳೂರು: ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ರಾಯಭಾರಿ ಹಾಗೂ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವ ಪ್ಯಾನ್​ ಇಂಡಿಯಾ ಸ್ಟಾರ್​ ಯಶ್ ಇದೀಗ ಬರೋಬ್ಬರಿ 4 ಕೋಟಿ ರೂಪಾಯಿ ಕಾರು ಖರೀದಿ ಮಾಡಿ ಎಲ್ಲಾರ ಗಮನಸಲೆದಿದ್ದಾರೆ.

ಹೌದು, ಯಶ್​ ಮನೆಗೆ ಹೊಸ ಅತಿಥಿಯಾಗಿ ಐಷಾರಾಮಿ ಕಾರು ಬಂದಿದೆ.  ರೇಂಜ್​ ರೋವರ್​ (Range Rover) ಕಾರನ್ನು ರಾಕಿಂಗ್ ಸ್ಟಾರ್​ ಯಶ್​ ಖರೀದಿಸಿದ್ದಾರೆ.

ಕಪ್ಪು ಬಣ್ಣದ ಕಾರಿನಲ್ಲಿ ಅವರು ಪತ್ನಿ ರಾಧಿಕಾ ಪಂಡಿತ್​ ಜೊತೆ ಸುತ್ತಾಡಿದ್ದಾರೆ. ಈ ಖುಷಿಯ ಸಂದರ್ಭದಲ್ಲಿ ಯಶ್​ ಅವರ ಮಕ್ಕಳಾದ ಯಥರ್ವ್​ ಮತ್ತು ಆಯ್ರಾ ಕೂಡ ಪೋಸ್​ ನೀಡಿದ್ದಾರೆ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್​ನಲ್ಲಿ ಇನ್ಮುಂದೆ ಮೊಟ್ಟೆ ಕೂಡ ಸಿಗುತ್ತೆ

ಹೊಸ ಕಾರಿನಲ್ಲಿ ಸುತ್ತಾಡಿದ ವಿಡಿಯೋ (Yash New Car Video) ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದರ ಬೆಲೆ ಎಷ್ಟು ಎಂದು ಕೂಡ ಅಭಿಮಾನಿಗಳು ಗೂಗಲ್​ನಲ್ಲಿ ಹುಡುಕಾಡುತ್ತಿದ್ದಾರೆ. ಸದ್ಯ ಯಶ್ ದುಬಾರಿ ಬೆಲೆಯ ಕಾರನ್ನು ಖರೀದಿಸಿ ಸುದ್ದಿಯಾಗಿದ್ದಾರೆ.

 

 

 

RELATED ARTICLES

Related Articles

TRENDING ARTICLES