Saturday, November 2, 2024

ಕೇಂದ್ರಕ್ಕೆ ಅಕ್ಕಿ ಕೊಡಿ ಅಂತ ನಾವು ಪುಕ್ಸಟ್ಟೆ ಕೇಳಿಲ್ಲ : ಡಿಕೆ ಶಿವಕುಮಾರ್

ಮೈಸೂರು: ಕೇಂದ್ರಕ್ಕೆ ಅಕ್ಕಿ ಕೊಡುವಂತೆ ನಾವು ಪುಕ್ಸಟ್ಟೆ ಕೇಳಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಾಗ್ದಾಳಿ ಮಾಡಿದ್ದಾರೆ. 

ಹೌದು, ಕೇಂದ್ರದಿಂದ ಅಕ್ಕಿ ತರುವ ವಿಚಾರದ ಬಗ್ಗೆ ಉಪಮುಖ್ಯಮಂತ್ರಿ ಡಿಕೆಶಿವಕುಮಾರ್​ ಮಾತನಾಡಿ ಕೇಂದ್ರಕ್ಕೆ ಅಕ್ಕಿ ಕೊಡುವಂತೆ ನಾವು ಪುಕ್ಸಟ್ಟೆ ಕೇಳಿಲ್ಲ, ಜುಲೈ 1 ರಿಂದ ಅನ್ನ ಭಾಗ್ಯ ಯೋಜನೆಯಡಿ ಕೆಜಿ ಅಕ್ಕಿ ಕೊಡಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

 

ಇದನ್ನೂ ಓದಿ: ಸಾವರ್ಕರ್ ಹೇಡಿ ಅಲ್ಲ, ಕಾಂಗ್ರೆಸ್ಸ್‌ನೋರು ರಣಹೇಡಿಗಳು ; ರವಿಕುಮಾರ್ ವಾಗ್ದಾಳಿ

ಇನ್ನೂ  ಕಾಂಗ್ರೆಸ್​ ಸರ್ಕಾರ ನೀಡಿದ 5 ಭರವಸೆಗಳನ್ನೂ ಜನರಿಗೆ ನೀಡಲು ಸಜ್ಜು ಆಗಿರುವ ರಾಜ್ಯಸರ್ಕಾರ ಇದೀಗ ಅನ್ನಭಾಗ್ಯ ಯೋಜನೆಯನ್ನೂ ಜಾರಿ ಮಾಡಲು ಕಸರತ್ತು ನಡೆಸುತ್ತಿದೆ.

ಈಗಾಗಲೇ ಸಿಎಂ ಛತ್ತಿಸ್‌ಗಡ್, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯದ ಜೊತೆ ಮಾತನಾಡಿ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ಕೊಡದಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ನಮಗೆ ಕೊಡಬೇಕಾಗುತ್ತೆ ಎನ್ನುವ ಕಾರಣಕ್ಕೆ ಎಲ್ಲಾ ರಾಜ್ಯಗಳಿಗೂ ಅಕ್ಕಿ ಕೊಡುವುದಿಲ್ಲ ಎಂದು ವಿತ್ ಡ್ರಾ ಮಾಡಿದ್ದಾರೆ. ಈ ಬಗ್ಗೆ ದೊಡ್ಡ ಹೋರಾಟ ಮಾಡುತ್ತೇವೆ. ರೂಪುರೇಷೆಯ ಬಗ್ಗೆ ನಾಳೆ ಮಾತನಾಡುತ್ತೇನೆ ಎಂದರು.

RELATED ARTICLES

Related Articles

TRENDING ARTICLES