Monday, December 23, 2024

ಈ ಐದೂ ಕೇಸ್‌ಗಳಲ್ಲೂ ಸಿದ್ದರಾಮಯ್ಯ ಅವರೇ ಆರೋಪಿ : ಬಸವರಾಜ ಬೊಮ್ಮಾಯಿ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಾವುದೇ ಪ್ರಕರಣದಲ್ಲಿ ತನಿಖೆ ಮಾಡಿಲ್ಲ ಎಂಬ ಸಂಸದ ಪ್ರತಾಪ್ ಸಿಂಹ ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಐದೂ ಕೇಸ್‌ಗಳಲ್ಲೂ ಸಿದ್ದರಾಮಯ್ಯ ಅವರೇ ಆರೋಪಿ ಎಂದು ಹೇಳಿದ್ದಾರೆ.

ಪ್ರತಾಪ್ ಸಿಂಹ ಅವರಿಗೆ ಸಂಪೂರ್ಣ ಮಾಹಿತಿ ಇದ್ದಂಗಿಲ್ಲ. ಸಿದ್ದರಾಮಯ್ಯ ವಿರುದ್ಧ ಐದು ಕೇಸ್‌ಗಳನ್ನು ಫೈಲ್ ಮಾಡಿ ದೂರು ದಾಖಲಿಸಿದ್ದೆವು. ಈ ಐದೂ ಕೇಸ್‌ಗಳಲ್ಲೂ ಅವರೇ ಆರೋಪಿ. 60 ಕೇಸ್‌ಗಳನ್ನು ಎಸಿಬಿಯಿಂದ ಲೋಕಾಯುಕ್ತಕ್ಕೆ ವರ್ಗಾಯಿಸಿದ್ದೆವು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಇದನ್ನೂ ಓದಿ : ಅಡ್ಜಸ್ಟ್ ಮೆಂಟ್ ಇಲ್ಲದಿದ್ರೆ ಪರಮೇಶ್ವರ್, ಖರ್ಗೆ ಸೋತಿದ್ದೇಕೆ? : ಜೆಡಿಎಸ್ ಪ್ರಶ್ನೆ

ರಾಜಕೀಯದಲ್ಲಿ ಸರ್ವೇ ಸಾಮಾನ್ಯ

ಹೊಂದಾಣಿಕೆ ರಾಜಕಾರಣದ ಪ್ರತಾಪ್ ಸಿಂಹ ಆರೋಪ ವಿಚಾರ ಸ್ಪಷ್ಟೀಕರಣ ಕೊಟ್ಟ ಬೊಮ್ಮಾಯಿ, ನಾನು ನನ್ನ ಬದುಕಿನಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಲ್ಲ, ಮಾಡಲ್ಲ. ನನಗೆ ಹೊಂದಾಣಿಕೆ ರಾಜಕಾರಣದ ಅವಶ್ಯಕತೆಯೂ‌ ಇಲ್ಲ. ಬೇರೆ ಪಕ್ಷಗಳ ನಾಯಕರ ಭೇಟಿ ಮಾಡೋದು ರಾಜಕೀಯದಲ್ಲಿ ಸರ್ವೇ ಸಾಮಾನ್ಯ. ಎಲ್ಲ ಪಕ್ಷಗಳಲ್ಲೂ ಎಲ್ಲರಿಗೂ ಸ್ನೇಹಿತರಿದ್ದಾರೆ ಎಂದು ಹೇಳಿದ್ದಾರೆ.

ವಿಪಕ್ಷ ನಾಯಕನ ಆಯ್ಕೆ ವಿಳಂಬ ವಿಚಾರ ಪ್ರತಿಕ್ರಿಯಿಸಿರುವ ಅವರು, ಯಾವುದೇ ಗೊಂದಲ ಇಲ್ಲ, ವಿಳಂಬ ಆಗಿಲ್ಲ. ಹೈಕಮಾಂಡ್ ಮಟ್ಟದಲ್ಲಿ ಇನ್ನೂ ಚರ್ಚೆಗೆ ಬಂದಿಲ್ಲ ಅಷ್ಟೇ. ಜುಲೈ 3ರಿಂದ ಅಧಿವೇಶನ ಇದೆ, ಅದಕ್ಕೂ ಮೊದಲು ವಿಪಕ್ಷ ನಾಯಕನ ಆಯ್ಕೆ ಮಾಡ್ತೀವಿ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES