Friday, November 22, 2024

ಯುಪಿಎ ಸರ್ಕಾರ ಇದ್ದಾಗ ಯಾವುದೇ ರಾಜ್ಯಕ್ಕೆ ತಾರತಮ್ಯ ಮಾಡಿರಲಿಲ್ಲ : ಕೆ.ಎಚ್ ಮುನಿಯಪ್ಪ

ಬೆಂಗಳೂರು : ಯುಪಿಎ ಸರ್ಕಾರ ಇದ್ದಾಗ ಯಾವುದೇ ರಾಜ್ಯಕ್ಕೆ ತಾರತಮ್ಯ ಮಾಡಿರಲಿಲ್ಲ ಎಂದು ಸಚಿವ ಕೆ.ಎಚ್ ಮುನಿಯಪ್ಪ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಾವ ಕಾಲದಲ್ಲೂ ಕೇಂದ್ರ ಸರ್ಕಾರ ಇಂಥ ತೀರ್ಮಾನ ತೆಗೆದುಕೊಂಡಿರಲಿಲ್ಲ. ಯುಪಿಎ ಸರ್ಕಾರ ಇದ್ದಾಗ ಯಾವುದೇ ರಾಜ್ಯಕ್ಕೆ ತಾರತಮ್ಯ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

ಪ್ರಾಣಾಳಿಕೆಯಲ್ಲಿ 10 ಕಿಲೋ ಅಕ್ಕಿ ಕೊಡ್ತೀವಿ ಅಂತಾ ಮಾತು ಕೊಟ್ಟಿದ್ವಿ. ಪಕ್ಕದ ರಾಜ್ಯಗಳಿಂದ ಅಕ್ಕಿ ಖರೀದಿಸಿ ನಮ್ಮ ಮಾತು ಉಳಿಸಿಕೊಳ್ತೀವಿ. ಬರ್ಡನ್ ಆಗದಂತೆ ಖರೀದಿಸಲು ತೀರ್ಮಾನ ಮಾಡಿದ್ವಿ. ತೆಲಂಗಾಣ ಸಿಎಂ ಜೊತೆ ಮಾತಾಡಿದ್ದಾರೆ. ನಾನೂ ಕೂಡ ಮಾತಾಡಿದ್ದೇನೆ. ಪ್ರಾಮಾಣಿಕ ಪ್ರಯತ್ನ ಮಾಡ್ತೀವಿ. ಆದಷ್ಟು ಬೇಗ ಅಕ್ಕಿ ಖರೀದಿಸಿ ಕೊಡ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ‘ಸುಳ್ಳುರಾಮಯ್ಯ’ ಅಲ್ಲ ಅನ್ನೋದಾದ್ರೆ ಕಮಿಟ್ಮೆಂಟ್ ಲೆಟರ್ ತೋರಿಸಲಿ : ಸಿ.ಟಿ ರವಿ

ಖರೀದಿಸಲು ನಾವು ತಯಾರಿದ್ರೂ ಕೊಡ್ತಿಲ್ಲ

10 ಕಿಲೋ ಅಕ್ಕಿ ಕೊಡಲು ನಿರ್ಣಯ ಮಾಡಿದ್ವಿ. ಕೇಂದ್ರ ಸರ್ಕಾರ, ಎಫ್​ಸಿಐ ಪತ್ರ ಬರೆದಿದ್ದಾರೆ. ಅಕ್ಕಿ ಕೊಡಲು ಆಗಲ್ಲ ಪತ್ರ ಬರೆದಿದ್ದಾರೆ. ಆಂಧ್ರ, ತೆಲಂಗಾಣ, ಚತ್ತೀಸ್ ಗಢ ಸಿಎಂಗಳ ಜೊತೆ ಸಂಪರ್ಕದಲ್ಲಿದ್ದಾರೆ. ಅಧಿಕಾರಿಗಳು ತೆಲಂಗಾಣಕ್ಕೆ ಹೋಗ್ತಿದ್ದಾರೆ. ರಾಜ್ಯ ಸರ್ಕಾರದಿಂದ 5 ಕಿಲೋ ಅಕ್ಕಿ ಕೊಡಲು ಹೇಳಿದ್ವಿ. ದರ ನಿಗಧಿಯಂತೆ ಖರೀದಿಸಲು ನಾವು ತಯಾರಿದ್ರೂ ಕೊಡ್ತಿಲ್ಲ ಎಂದು ಕೆ.ಎಚ್ ಮುನಿಯಪ್ಪ ಹೇಳಿದ್ದಾರೆ.

ಅಕ್ಕಿ ವಿಚಾರದಲ್ಲಿ ಬಿಜೆಪಿ ಸರ್ಕಾರ ರಾಜಕೀಯ ಮಾಡ್ತಿದ್ದಾರೆ. 15 ಲಕ್ಷ ಟನ್ ಅಕ್ಕಿ ಇದೆ, ಟೆಂಡರ್ ಮೂಲಕ ಕೊಡಲು ಕೇಂದ್ರ ಹೊರಟಿದೆ. ಅದೇನು ಹಣ ಇದ್ಯೋ ಅದನ್ನ ನಾವು ಕೊಡಲು ರೆಡಿ. ಬಡವರ ಅನ್ನದ ವಿಚಾರದಲ್ಲಿ ರಾಜಕೀಯ ಮಾಡೋದನ್ನ ನಾನು ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES