Monday, December 23, 2024

ಮೋದಿ ಸರ್ಕಾರ ಯಾರಿಗೆ ಒಳ್ಳೆಯದು ಮಾಡಲು ಹೊರಟಿದೆ? : ಸುರ್ಜೇವಾಲ ಕಿಡಿ

ನವದೆಹಲಿ : ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಯಾರಿಗೆ ಒಳ್ಳೆಯದು ಮಾಡಲು ಹೊರಟಿದೆ? ಎಂದು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಪ್ರಶ್ನೆ ಮಾಡಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿತ್ತು. 1.28 ಕೋಟಿ ಕುಟುಂಬಕ್ಕೆ ಇದರಿಂದ ಲಾಭ ಆಗುತ್ತದೆ. ಆದರೆ, ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಮೂಲಕ ಕೇಂದ್ರ ಸರ್ಕಾರ ಅಕ್ಕಿ ಪೂರೈಕೆಗೆ ತಡೆ ಹಿಡಿದಿದೆ ಎಂದು ಕಿಡಿಕಾರಿದ್ದಾರೆ.

ನಮಗೆ ಅನ್ನ ಭಾಗ್ಯ ಮೂಲಕ ಬಡವರಿಗೆ ಅಕ್ಕಿ ತಲುಪಿಸಲು ಅಕ್ಕಿ ಕೇಳಿದ್ದೆವು. ಆದರೆ, ಎಫ್​ಸಿಐ(FCI) ಖಾಸಗಿ ಟ್ರೇಡರ್​ಗಳಿಗೆ ಮಾರಾಟ ಮಾಡಲು ಮುಂದಾಗಿದೆ. ಎಸ್ಸಿ, ಎಸ್ಟಿ ಒಬಿಸಿಗಳಿಗೆ ಬಿಜೆಪಿ ಅನ್ಯಾಯ ಮಾಡುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಎಫ್​ಸಿಐ(FCI)ಗೆ ಅವಕಾಶ ನೀಡಿರುವುದು ಏಕೆ? ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ : ‘ಸುಳ್ಳುರಾಮಯ್ಯ’ ಅಲ್ಲ ಅನ್ನೋದಾದ್ರೆ ಕಮಿಟ್ಮೆಂಟ್ ಲೆಟರ್ ತೋರಿಸಲಿ : ಸಿ.ಟಿ ರವಿ

ಸಂಸದರು ಯಾಕೆ ಮೌನವಾಗಿದ್ದಾರೆ?

ಪ್ರಧಾನಿ ಮೋದಿ ಸರ್ಕಾರ ಯಾರಿಗೆ ಒಳ್ಳೇದು ಮಾಡಲು ಹೊರಟಿದೆ? ಕರ್ನಾಟಕದ ಕೇಂದ್ರ ಸಚಿವರು ಮತ್ತು ಸಂಸದರು ಯಾಕೆ ಮೌನವಾಗಿದ್ದಾರೆ? ಅಕ್ಕಿ, ಗೋಧಿಯನ್ನು ಖಾಸಗಿ ಟ್ರೇಡರ್​ಗಳಿಗೆ ಮಾರಾಟ ಮಾಡುವುದಾದ್ರೆ ರಾಜ್ಯ ಸರ್ಕಾರಗಳಿಗೆ ನೇರವಾಗಿ ಏಕೆ ಮಾರಾಟ ಮಾಡುತ್ತಿಲ್ಲ? ಎಂದು ಗುಡುಗಿದ್ದಾರೆ.

ರಾಜ್ಯದ 6.5 ಕೋಟಿ ಜನರು ಮೋದಿಯವರ ಈ ಬಡ ವಿರೋಧಿ, ಎಸ್ಸಿ-ಎಸ್ಟಿ ವಿರೋಧಿ ನೀತಿಯನ್ನ ಖಂಡಿತ ಕ್ಷಮಿಸಲಾರರು. ಬಿಜೆಪಿ ಸರ್ಕಾರ ಎಷ್ಟೇ ಅಡ್ಡಿಪಡಿಸಿದರು ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿ ಮಾಡಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES