ಬೆಂಗಳೂರು: ಗ್ಯಾರಂಟಿಗಳು ಜಾರಿಯ ಹಿನ್ನಲೇಯಲ್ಲಿ ಇದೀಗ ಗ್ರಾಹರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಹೌದು, ನಮ್ಮ ದಿನನಿತ್ಯದ ಅವಶ್ಯಕತೆಗೆ ಬೇಕಾದ ತರಕಾರಿ ಸೊಪ್ಪುಗಳ ಬೆಲೆ ಇಂದು ಮಾರುಕಟ್ಟೆಗಳಲ್ಲಿ ಏರಿಕೆ ಕಂಡಿದೆ(Vegetable Price Hike)
ನಾವು ಮಾರ್ಕೆಟ್ಗೆ ತರಕಾರಿ ಕೊಳ್ಳು ಹೋದಂತೆ ಬೀನ್ಸ್, ನುಗ್ಗೆಕಾಯಿ, ಬದನೆಕಾಯಿ, ಕ್ಯಾರೆಟ್ ಸೇರಿದಂತೆ ಹಲವು ತರಕಾರಿಗಳ ಬೆಲೆ ಹೆಚ್ಚಾಗಿದ್ದು, ಯಾವ ತರಕಾರಿ ಕೇಳಿದ್ರೂ ಎಲ್ಲವೂ 50 ರಿಂದ 100ರೂಪಾಯಿ ಮುಟ್ಟಿದೆ.
ಯಾವ ತರಕಾರಿಗೆ ಎಷ್ಷು ಬೆಲೆ ಏರಿಕೆ ಆಗಿದೆ..?
- 1ಕೆಜಿ ಬೀನ್ಸ್‌ಗೆ 40- 50 ರೂಪಾಯಿ – ಸದ್ಯ 100 ರ ಗಡಿದಾಟಿದೆ.
- ಮೈಸೂರು ಬದನೆಕಾಯಿ 30 ರೂಪಾಯಿ- ಈಗ 60 ರಿಂದ 80 ರೂಪಾಯಿ ಆಗಿದೆ
- ಕ್ಯಾರೆಟ್ 30 ರಿಂದ 60 ಕ್ಕೆ ಜಿಗಿದಿದೆ.
- ನುಗ್ಗಿಕಾಯಿಯಂತೂ 40 ರೂಪಾಯಿ ಇದ್ದಿದ್ದು 100 ರೂಪಾಯಿ ತಲುಪಿದೆ.
- ತರಕಾರಿ ಮಾತ್ರವಲ್ಲ ಕೊತ್ತಂಬರಿ, ಮೆಂತ್ಯೆ, ಪಾಲಕ್ ಸೇರಿದಂತೆ ಸೊಪ್ಪಿನ ದರಗಳು ಕೂಡಾ ಹೆಚ್ಚಾಗಿವೆ.
ಇನ್ನೂ ಕಳೆದ ವಾರಕ್ಕೆ ಹೋಲಿಸಿದ್ರೆ, ಈ ವಾರ ಶೇಕಡಾ 10 ರಿಂದ 25 ರಷ್ಟು ತರಕಾರಿಗಳ ದರ ದುಪ್ಪಟ್ಟು ಆಗಿದೆ.