Sunday, December 22, 2024

ಮುರುಡೇಶ್ವರ ಕಡಲತೀರಕ್ಕೆ ಇಂದಿನಿಂದ ಪ್ರವಾಸಿಗರಿಗೆ ನೋ ಎಂಟ್ರಿ

ಬೆಂಗಳೂರು: ಮುಂಗಾರು ಈಗಲೇ ಆರಂಭವವಾಗಿದ್ದು ಕಡಲಿನಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಕಡಲಿನಲ್ಲಿ ಆಳ ಕೂಡ ಹೆಚ್ಚಿರುವುದರಿಂದ ಇಲ್ಲಿ ಮಳೆಗಾಲದಲ್ಲಿ ಸಮುದ್ರಕ್ಕೆ ಇಳಿಯುವುದು ಡೇಂಜರ್ ಎಂದು ಜಿಲ್ಲಾಡಳಿತ ಪ್ರವಾಸಿಗರಿಗೆ ಇಂದಿನಿಂದ ನಿಷೇಧ ಹೇರಿದೆ.

ಹೌದು, ಉತ್ತರ ಕನ್ನಡ ಜಲ್ಲೆಯಲ್ಲಿ ಮಳೆಗಾಲ ಆರಂಭವಾದಂತಾಗಿದೆ. ಮಳೆಗಾಲವಿದ್ದರೂ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಿದ್ದರು ಹಲವು ಕಡಲತೀರಗಳಲ್ಲಿ ಲೈಫ್ ಗಾರ್ಡ್ಸ್‌ಗಳು ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ನೀರಿಗೆ ಇಳಿಯದಂತೆ ಬೀಚ್‌ಗಳ ಪ್ರವೇಶ ದ್ವಾರದಲ್ಲಿ ಸೂಚನಾ ಫಲಕಗಳನ್ನ ಅಳವಡಿಸಲಾಗಿದೆ. ಆದರೂ ಇಲ್ಲಿಗೆ ಬರುವ ಪ್ರವಾಸಿಗರು ಮಾತ್ರ ಇದ್ಯಾವುದನ್ನೂ ಲೆಕ್ಕಿಸದೇ ಕಡಲಿಗೆ ಇಳಿಯುತ್ತಿದ್ದರೂ ಇದನ್ನೂ ತಪ್ಪಿಸಲೆಂದು ಜಿಲ್ಲಾಡಳಿತ ಪ್ರವಾಸಿಗರಿಗೆ ನೋ ಎಂಟ್ರಿ ನೀಡಿದೆ.

ಸತತ ಎರಡು ಪ್ರವಾಸಿಗರ ಸಾವಿನ ಬಳಿಕ ಎಚ್ಚೆತ್ತ ಪ್ರವಾಸೋದ್ಯಮ ಇಲಾಖೆ

ಕಳೆದ 2 ದಿನದ ಹಿಂದೆ ಅಲೆಗೆ ಸಿಕ್ಕು ಇಬ್ಬರು ಪ್ರವಾಸಿಗರು ಸಮುದ್ರಪಾಲಾದ ಬಳಿಕ ಉತ್ತರ ಕನ್ನಡ ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತುಕೊಂಡಿದ್ದು, ಪ್ರವಾಸಿಗರಿಗೆ ಕಡಲತೀರದಲ್ಲಿ ಸಂಪೂರ್ಣ ನಿಷೇಧ ಹೇರಲಾಗಿದೆ.

 

RELATED ARTICLES

Related Articles

TRENDING ARTICLES