Monday, December 23, 2024

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮಿಳುನಾಡು ಸಚಿವ ಸೆಂಥಿಲ್‌ ಬಾಲಾಜಿ ಬಂಧನ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮಿಳುನಾಡು ವಿದ್ಯುತ್ ಸಚಿವ ವಿ.ಸೆಂಥಿಲ್ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಹೌದು, ಚೆನ್ನೈನಲ್ಲಿರುವ ಸಚಿವರ ಮನೆಯಲ್ಲಿ 18 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಅವರನ್ನು ಬಂಧಿಸಲಾಗಿದೆ.ಇನ್ನೂ  ಹಣವನ್ನು ವರ್ಗಾವಣೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ್ದ ಇಡಿ ಸೇಂಥಿಲ್‌ ಬಾಲಾಜಿ ಅವರ ನಿವಾಸ, ಕಚೇರಿ ಮೇಲೆ ದಾಳಿ ಮಾಡಿತ್ತು.ದಿನವಿಡೀ ವಿಚಾರಣೆ ನಡೆಸಿದ್ದ ಇಡಿ ಬುಧವಾರ ಬೆಳಗ್ಗೆ ಅವರನ್ನು ಬಂಧಿಸಿದೆ.

ಇದನ್ನೂ ಓದಿ: ಇಂದಿನಿಂದ ಇಲಾಖಾವಾರು ಬಜೆಟ್‌ ಪೂರ್ವಭಾವಿ ಸಭೆ

ಸೇಂಥಿಲ್‌ ಬಾಲಾಜಿಯವರ ಬೆಂಬಲಿಗರಿಂದ ಹೈಡ್ರಾಮ

ಸೇಂಥಿಲ್‌ ಬಾಲಾಜಿಯವರನ್ನು ಬಂಧಿಸಿದ ಬಳಿಕ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಬಾಲಾಜಿ ಅಲ್ಲಿಯೇ ಕುಸಿದುಬಿದ್ದರು. ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಚೆನ್ನೈನ ಒಮಂಡುರಾರ್‌ ಆಸ್ಪತ್ರೆಗೆ ಕರೆ ತರಲಾಯಿತು. ಈ ವೇಳೆ ಬಾಲಾಜಿ ಕಣ್ಣೀರಿಡುತ್ತಿರುವುದು, ಅವರ ಬೆಂಬಲಿಗರು ಆಸ್ಪತ್ರೆ ಹೊರಾವರಣದಲ್ಲಿ ಘೋಷಣೆ ಕೂಗುತ್ತಿದ್ದು ಹೈಡ್ರಾಮ ಸೃಷ್ಟಿಸಿದ್ದಾರೆ.

ಮಂಗಳವಾರ ರಾತ್ರಿಯೇ ಬಾಲಾಜಿ ಅವರನ್ನು ವಶಕ್ಕೆ ಪಡೆಯಲಾಗಿತ್ತಾದರೂ ಬಂಧನ ಮಾಡಿರುವುದನ್ನು ಇಡಿ ಅಧಿಕೃತವಾಗಿ ತಿಳಿಸಿರಲಿಲ್ಲ. ಈಗ ಆಸ್ಪತ್ರೆಗೆ ಬಾಲಾಜಿ ಅವರನ್ನು ಕರೆದುಕೊಂಡು ಹೋಗಿರುವುದು ಗೊತ್ತಾಗಿದೆ. ಬಂಧನಕ್ಕೆ ಸೂಕ್ತ ಮಾನದಂಡಗಳನ್ನು ಪಾಲಿಸಿದಂತೆ ಕಾಣುತ್ತಿಲ್ಲ. ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಡಿಎಂಕೆ ಸಂಸದ ಹಾಗೂ ಹಿರಿಯ ನ್ಯಾಯವಾದಿ ಎನ್‌ ಆರ್‌ ಇಳಂಗೋ ತಿಳಿಸಿದ್ದಾರೆ.

ಸೇಂಥಿಲ್‌ ಬಾಲಾಜಿ ಪರವಾಗಿ ನಾವಿದ್ದೇವೆ ; ಸಚಿವ ಉದಯನಿಧಿ ಸ್ಟಾಲಿನ್‌

ಬಿಜೆಪಿ ಉದ್ದೇಶಪೂರ್ವವಾಗಿಯೇ ಕೇಂದ್ರದ ಸಂಸ್ಥೆಗಳನ್ನು ಬಳಸಿಕೊಂಡು ಡಿಎಂಕೆ ಸರ್ಕಾರದ ಮೇಲೆ ದಾಳಿ ಮಾಡುತ್ತಿದೆ. ಇದನ್ನು ನಾವು ಎದುರಿಸುತ್ತೇವೆ. ಕಾನೂನಾತ್ಮಕವಾಗಿಯೇ ಹೋರಾಟ ಮಾಡುತ್ತೇವೆ. ಸೇಂಥಿಲ್‌ ಬಾಲಾಜಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರೊಂದಿಗೆ ನಾವಿದ್ದೇವೆ ಎಂದು ಡಿಎಂಕೆ ಸರ್ಕಾರದ ಸಚಿವ ಉದಯನಿಧಿ ಸ್ಟಾಲಿನ್‌ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಆದಾಯ ತೆರಿಗೆ ಇಲಾಖೆ ಸೇಂಥಿಲ್‌ ಬಾಲಾಜಿ ಅವರ ಆಸ್ತಿಗಳ ತಪಾಸಣೆ ನಡೆಸಿತ್ತು. ಅಲ್ಲದೇ ಅವರ ಹಲವು ಬೆಂಬಲಿಗರ ಮೇಲೂ ದಾಳಿ ಮಾಡಿತ್ತು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಸೇಂಥಿಲ್‌ ಕಡೆಯವರು ಪ್ರಶ್ನಿಸಿದ್ದರೂ ಇಡಿ ತನಿಖೆಗೆ ಸುಪ್ರೀಂಕೋರ್ಟ್‌ ಅನುಮತಿ ನೀಡಿತ್ತು. ಜಯಲಲಿತಾ ಅವಧಿಯಲ್ಲಿ ಸಚಿವರಾಗಿದ್ದ ಬಾಲಾಜಿ ಉದ್ಯೋಗ ನೀಡುವಾಗ ಹಣ ಪಡೆದಿದ್ದ ಗಂಭೀರ ಆರೋಪಗಳು ಇವರ

 

RELATED ARTICLES

Related Articles

TRENDING ARTICLES