Wednesday, January 22, 2025

ಪ್ರತಾಪ್ ಸಿಂಹ ಎಳಸು, ಆತನಿಗೆ ರಾಜಕೀಯದ ಪಕ್ವತೆ ಇಲ್ಲ : ಸಿದ್ದರಾಮಯ್ಯ

ಬೆಂಗಳೂರು : ಪ್ರತಾಪ್ ಸಿಂಹ ಎಳಸು, ಆತನಿಗೆ ರಾಜಕೀಯದ ಪಕ್ವತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಾಪ್ ಸಿಂಹಗೆ ಟಕ್ಕರ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಾರು ಹೊಂದಾಣಿಕೆ ರಾಜಕೀಯ ಮಾಡ್ತಿರೋರು ಅಂತ ಪ್ರತಾಪ್ ಸಿಂಹ ಹೇಳಲಿ. ಯಾರು ಅವರು ಹೊಂದಾಣಿಕೆ ರಾಜಕೀಯ ಮಾಡ್ತಿರೋರು?ತನಿಖೆ ಮಾಡಿಸಿ ಅಂತ ಈ ಪ್ರತಾಪ್ ಸಿಂಹ ಹೇಳಿದ್ನಾ? ಎಂದು ಗರಂ ಆಗಿದ್ದಾರೆ.

ಪ್ರತಾಪ್ ಸಿಂಹ ಹೇಳಿದ ತಕ್ಷಣ ತನಿಖೆ ಮಾಡಿಸುವುದಕ್ಕೆ ಆಗುತ್ತಾ? ಪ್ರತಾಪ್ ಸಿಂಹ ತನಿಖೆ ಮಾಡಿ ಅಂತ ಆಗ ಹೇಳಿದ್ನಾ? ನಾವು ಯಾವಾಗ ತನಿಖೆ ಮಾಡಿಸಬೇಕು, ಯಾರಿಂದ ತನಿಖೆ ಮಾಡಿಸಬೇಕು ಅಂತ ನಮಗೆ ಗೊತ್ತು. ಅವನಿಗೆ ಗೊತ್ತಿಲ್ಲ. ಬಿಜೆಪಿಯಲ್ಲಿ ಯಾರು ಹೊಂದಾಣಿಕೆ ರಾಜಕೀಯ ಮಾಡೋರು ಅಂತ ಹೇಳಲಿ ಅವನು. ಅವನಿಗೆ ಗೊತ್ತಿರಬೇಕಲ್ಲ, ಬಿಜೆಪಿಯಲ್ಲಿ ಯಾರು ಅಂತ. ಪ್ರತಾಪ್ ಸಿಂಹ ಅವರ ಹೆಸರು ಹೇಳಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಪ್ರತಾಪ್ ಸಿಂಹ ಅವರ ಮಾತಿಗೆ ಮೌಲ್ಯವಿಲ್ಲ ; ಸಚಿವ ಹೆಚ್.ಸಿ.ಮಹದೇವಪ್ಪ

ದಶಪಥ ರಸ್ತೆ ನಾನೇ ಮಾಡಿಸಿದೆ ಅಂತಾನೆ

ನಾನು ನನ್ನ ರಾಜಕೀಯ ಜೀವನದಲ್ಲಿ ವಿಪಕ್ಷ ನಾಯಕರ ಜತೆ ಮಾತೇ ಆಡಲ್ಲ. ಪ್ರತಾಪ್ ಸಿಂಹಗೆ ಗೊತ್ತಿದ್ರೆ ಅವರ ಹೆಸರು ಹೇಳಲಿ. ಪ್ರತಾಪ್ ಸಿಂಹ ಎಳಸು, ಆತನಿಗೆ ರಾಜಕೀಯದ ಪಕ್ವತೆ ಇಲ್ಲ. ಅವನು ಬಾಯಿಗೆ ಬಂದಂತೆ ಏನೇನೋ ಮಾತನಾಡುತ್ತಾನೆ. ದಶಪಥ ರಸ್ತೆ ನಾನೇ ಮಾಡಿಸಿದೆ ಅಂತಾನೆ ಅವನು ಅವನು ಅಲ್ಲಿಗೆ ಎಂಪಿನಾ? ಎಂದು ಪ್ರಶ್ನೆ ಮಾಡಿದ್ದಾರೆ.

ನಾನಾಗಿ ನಾನು ಯಾರಿಗೂ ಕರೆ ಮಾಡಲ್ಲ

ನಾನು ಅಧಿಕಾರದಲ್ಲಿರುವಾಗ ವಿಪಕ್ಷದವರ ಜೊತೆ ಮಾತಾಡಲ್ಲ, ಅವರ ಮನೆಗೂ ಹೋಗಲ್ಲ. ನಾನು ಅವರೇ ಏನಾದರೂ ಬಂದರೆ ಸೌಜನ್ಯಕ್ಕೆ ಮಾತಾಡ್ತೀನಿ ಹೊರತು, ರಾಜಕೀಯ ಮಾತಾಡಲ್ಲ. ನಾನಾಗಿ ನಾನು ವಿರೋಧ ಪಕ್ಷದವರಿಗೆ ಕರೆ ಕೂಡ ಮಾಡಲ್ಲ, ಗೊತ್ತಾಯ್ತಾ? ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

RELATED ARTICLES

Related Articles

TRENDING ARTICLES