Sunday, January 19, 2025

ಸಿಎಂ ನವರಂಗಿ ನಾಟಕ ಮಾಡ್ತಿದ್ದಾರೆ : ಬಿಜೆಪಿ ಟ್ವೀಟ್

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಬಿಜೆಪಿ ತನ್ನ ಟ್ವೀಟ್​ ನಲ್ಲಿ ಈ ರೀತಿ ಉತ್ತರಿಸಿದೆ ಪುಕ್ಕಟೆ ವಿದ್ಯುತ್ ಅಂತ ವಿದ್ಯುತ್ ದರ ಏರಿಸಿದಿರಿ. ಗೃಹಜ್ಯೋತಿ ಅರ್ಜಿ ದಿನಾಂಕ ಮುಂದಕ್ಕೆ ತಳ್ಳಿದ್ದೀರಿ. ಈಗ ಅಕ್ಕಿಯ ವಿಚಾರದಲ್ಲಿ ಕೇಂದ್ರದ ಕಡೆ ಬೊಟ್ಟು ಮಾಡುತ್ತಾ ನವರಂಗಿ ನಾಟಕ ಮಾಡುತ್ತಿದ್ದೀರಿ. ಎಂದು ಬಿಜೆಪಿ ಟ್ವೀಟ್​ ಮಾಡಿದೆ.

ಹೌದು, 7 ಲಕ್ಷ ಟನ್ ಅಕ್ಕಿ ಸರ್ಕಾರದ ಬಳಿ ಇದ್ದರೂ, ನಮ್ಮ ಯೋಜನೆ ಹಾಳು ಮಾಡಲು ಕೇಂದ್ರ ಪ್ರಯತ್ನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ ಇದಕ್ಕೆ ಬಿಜೆಪಿ ಟ್ವೀಟ್ ಮಾಡಿ ಉತ್ತರಿಸಿದೆ.

ಇದನ್ನೂ ಓದಿ: ನಮ್ಮ ಅನ್ನಭಾಗ್ಯ ಯೋಜನೆ ಹಾಳು ಮಾಡಲು ಕೇಂದ್ರ ಪ್ರಯತ್ನಿಸಿದೆ : ಸಿದ್ದರಾಮಯ್ಯ

ನೀವು ಮೊದಲು ಕೊಟ್ಟ ಗ್ಯಾರಂಟಿಗಳನ್ನು ಜಾರಿ ಮಾಡುವಲ್ಲಿ ಪತರುಗುಟ್ಟುತ್ತಿರುವೀರಿ ನಿಮ್ಮ ಚಿಂತಾಜನಕ ಸ್ಥಿತಿಗೆ ನಮ್ಮ ವಿಷಾದವವಿದೆ. ಅಕ್ಕಿ ಕೊಡುವ ಮೊದಲೇ ಕೇಂದ್ರದ ಕಡೆ ‘ಕೈ’ ತೋರಿಸಿ ನಿರೀಕ್ಷಣಾ ಜಾಮೀನು ಪಡೆಯುವ ನಿಮ್ಮ ‘ಗ್ಯಾರಂಟಿ’ ಹುನ್ನಾರ ನಾಡಿನ ಸಮಸ್ತ ಜನರಿಗೆ ಅರ್ಥವಾಗಿದೆ ಸ್ವಾಮಿ ಎಂದು ಟ್ವೀಟ್​ ಮಾಡಿ ಟೀಕಿಸಿದ್ದಾರೆ.

RELATED ARTICLES

Related Articles

TRENDING ARTICLES