Thursday, December 19, 2024

ನಾಗದೇವತೆಯ ಖ್ಯಾತ ಖಳನಾಯಕ ಕಜಾನ್​ ಖಾನ್​ ಇನ್ನಿಲ್ಲ

ಬೆಂಗಳೂರು: ದಕ್ಷಣ ಭಾರತದ ಅನೇಕ ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸಿದ್ದ ಮಲಯಾಲಂ ನಟ ಕಜಾನ್​ ಖಾನ್​  ನಿಧನರಾಗಿದ್ದಾರೆ. 

ಒಂದು ಸಿನಿಮಾಗೆ ಹೀರೋ ಅಷ್ಟೇ ವಿಲನ್ ಸಹ ಮುಖ್ಯವಾಗಿರುತ್ತಾರೆ. ಅಂತಹ ವಿಲನ್ ಪಾತ್ರ ಮಾಡ್ತಿದ್ದ ಕಜಾನ್ ಖಾನ್ ಖಾನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕಜಾನ್ ಖಾನ್ 1993 ರಲ್ಲಿ ಮೋಹನ್ ಲಾಲ್ ಅವರ ಗಂಧರ್ವಂ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗವನ್ನು ಪ್ರವೇಶಿಸಿದರು. ಮಲಯಾಳಂ ನಟ ದಿಲೀಪ್ ಅಭಿನಯದ ಸಿಐಡಿ ಮೂಸಾ ಚಿತ್ರದಲ್ಲಿನ ವಿಲನ್ ಪಾತ್ರಕ್ಕಾಗಿ ಮೆಚ್ಚುಗೆಯನ್ನು ಪಡೆದರು.

ಕಜಾನ್ ಖಾನ್ ಅವರು ಮಲಯಾಳಂ, ತಮಿಳು, ಕನ್ನಡ ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಕನ್ನಡದ ‘ಹಬ್ಬ’, ‘ಚೆಲುವ’, ‘ನಾಗದೇವತೆ’ ಸಿನಿಮಾಗಳಲ್ಲಿ ಅವರು ಖಳನಟರಾಗಿ ಕಾಣಿಸಿಕೊಂಡಿದ್ದರು.

RELATED ARTICLES

Related Articles

TRENDING ARTICLES