ಬೆಂಗಳೂರು: UPSC ಸಿವಿಲ್ ಸರ್ವೀಸಸ್ ಪ್ರಿಲಿಮ್ಸ್ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ.
ಹೌದು, ಮೇ 28, 2023 ರಂದು ನಡೆದ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶಗಳನ್ನು UPSC ಆಯೋಗ ಪ್ರಕಟಿಸಿದ್ದು, ತನ್ನ ಅಧಿಕೃತ ವೆಬ್ ಸೈಟ್ www.upsc.gov.in ನಲ್ಲಿ ನೋಡಬಹುದು.
ಇನ್ನೂ 2023 ರ ಭಾರತೀಯ ಅರಣ್ಯ ಸೇವೆ (ಮುಖ್ಯ) ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ರೋಲ್ ಸಂಖ್ಯೆಯನ್ನು ಆಯೋಗವು ಪ್ರತ್ಯೇಕವಾಗಿ ಪ್ರಕಟಿಸಿದೆ.
ಒಟ್ಟು 14,624 ಅಭ್ಯರ್ಥಿಗಳು CSE ಮೇನ್ಸ್ ಪರೀಕ್ಷೆಗೆ ತಾತ್ಕಾಲಿಕವಾಗಿ ಅರ್ಹತೆ ಪಡೆದಿದ್ದಾರೆ ಮತ್ತು 1,958 ಅಭ್ಯರ್ಥಿಗಳ ಹೆಸರನ್ನು IFoS ಮುಖ್ಯ ಪರೀಕ್ಷೆಯ ಮೆರಿಟ್ ಪಟ್ಟಿಯಲ್ಲಿ ತಿಳಿಸಲಾಗಿದೆ.
UPSC ನಾಗರಿಕ ಸೇವಾ ಪರೀಕ್ಷೆ ಫಲಿತಾಂಶವನ್ನು ಡೌನ್‌ಲೋಡ್ ಮಾಡಲು ಈ ಹಂತಗಳನ್ನೂ ಫೋಲೋ ಮಾಡಿ
1. ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್ ನೋಡಲು upsc.gov.in ಗೆ ಭೇಟಿ ನೀಡಿ.
2. ಹೊಸದೇನಿದೆ ಪುಟಕ್ಕೆ ಭೇಟಿ ನೀಡಿ.
3. ಫಲಿತಾಂಶ: ನಾಗರಿಕ ಸೇವೆಗಳ (ಪೂರ್ವಭಾವಿ) ಪರೀಕ್ಷೆ, 2023 ಓದುವ ಲಿಂಕ್ ಅನ್ನು ಆಯ್ಕೆ ಮಾಡಿ.
4. ಪರದೆಯ ಮೇಲೆ, ಹೊಸ ವೆಬ್‌ಪುಟವು ಕಾಣಿಸಿಕೊಳ್ಳುತ್ತದೆ.
5. ಪರದೆಯ ಮೇಲೆ, ನಿಮ್ಮ UPSC ಪ್ರಿಲಿಮ್ಸ್ 2023 ಫಲಿತಾಂಶವು ತೋರಿಸುತ್ತದೆ.
6. ನಿಮ್ಮ ದಾಖಲೆಗಳಿಗಾಗಿ ಡೌನ್‌ಲೋಡ್ ಮಾಡಿದ ನಂತರ ಫಲಿತಾಂಶದ ದಾಖಲೆಗಾಗಿ ಪ್ರಿಂಟ್ ತೆಗೆಯಬಹುದು.