Wednesday, January 22, 2025

ನನ್ಗೆ ಗೊತ್ತಿರೋದು ಗಂಡು, ಹೆಣ್ಣು ಅಂತ ಮಾತ್ರ : ಹೆಚ್.ಡಿ ಕುಮಾರಸ್ವಾಮಿ

ರಾಮನಗರ : ನಾನು ಮನಸ್ಪೃತಿ, ಮನಸ್ಥತಿ ಬಗ್ಗೆ ಟೀಕೆ ಮಾಡುವುದಿಲ್ಲ. ನನಗೆ ಗೊತ್ತಿರುವುದು ಗಂಡು, ಹೆಣ್ಣು ಅಂತ ಮಾತ್ರ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಬಗ್ಗೆ ಟೀಕೆ ಮಾಡಿದ್ರೆ ವಿರೋಧ ಪಕ್ಷದವರನ್ನು ಟೀಕೆ ಮಾಡಿದಾಗೆ ಆಗುತ್ತದೆ ಎಂದು ತಿಳಿಸಿದ್ದಾರೆ.

ಶಕ್ತಿ ಯೋಜನೆಯಿಂದ ಕೆ‌ಎಸ್‌ಆರ್‌ಟಿಸಿ ಗೆ ನಷ್ಟದ ವಿಚಾರವಾಗಿ ಮಾತನಾಡಿ, ಯೋಜನೆಗಳು ಎಷ್ಟು ಜನರಿಗೆ ತಲುಪಿದೆ ಎಂಬುದರ ಬಗ್ಗೆ ಮಾತನಾಡುತ್ತೇನೆ ಅಷ್ಟೇ. ನಷ್ಟದ ಬಗ್ಗೆ ಗೊತ್ತಿದ್ದೇ ಈ ಗ್ಯಾರಂಟಿಯನ್ನು ಜಾರಿಗೊಳಿಸಿದ್ದಾರೆ. ಕಾರ್ಯಕರ್ತರ ಜೊತೆ ಬಣ್ಣದ ಹೋಕಳಿ ಹಾಡಿಕೊಂಡು ಪ್ರಾರಂಭ ಮಾಡಿದ್ದಾರೆ. ಇದರ ಆರ್ಥಿಕ ಹೊರೆ ಬಗ್ಗೆ ತಿಳಿದೇ ಚಾಲನೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ನನಗೆ ಯಾರ ಹೆಸರು ಗೊತ್ತಿಲ್ಲ, ಯಾರೂ ಪರಿಚಯ ಇಲ್ಲ : ಸಚಿವ ಕೆ.ಎನ್ ರಾಜಣ್ಣ

ಸಿಎಂ ಮನಸ್ಸು ಮಾಡಿದ್ರೆ ಕಷ್ಟ ಆಗಲ್ಲ

ನಾನು ಯೋಜನೆ ಬಗ್ಗೆ ಟೀಕೆ ಮಾಡುವುದಿಲ್ಲ. ಯೋಜನೆಗಳನ್ನು ಚುನಾವಣೆಗೂ ಮೊದಲೇ ಘೋಷಣೆ ಮಾಡಿಕೊಂಡಿದ್ರು. ಅದಕ್ಕೆ ಈಗ ರೂಲ್ಸ್ ಗಳನ್ನ ಮಾಡಿದ್ದೀರಿ. ಆಗ ಏನು ಹೇಳಿದ್ರೋ ಈಗಲೂ ಅದನ್ನೇ ಮಾಡಿ ಅಂತಾ ಸಿದ್ದರಾಮಯ್ಯ ಅವರಿಗೆ ಹೇಳುತ್ತೇನೆ. ಗ್ಯಾರಂಟಿಗೆ ಹಣ ಒದಸಲಿಕ್ಕೆ ಆಗಲ್ಲ ಅಂತ ನಾನು ಹೇಳುವುದಿಲ್ಲ. ಸರ್ಕಾರ ಮನಸ್ಸು ಮಾಡಿದ್ರೆ ಹಣ ಹೊಂದಿಸುವುದು ಕಷ್ಟ ಆಗಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ನಾನು ಸ್ವಲ್ಪ ದಿನ ಸರ್ಕಾರ ನಡೆಸಿದ್ದೇನೆ

ನಾನು ಸ್ವಲ್ಪ ದಿನ ಸರ್ಕಾರ ನಡೆಸಿದ್ದೇನೆ. ಹಣವನ್ನು ಹೊಂದಿಸಲು ಸರ್ಕಾರಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಯಾವುದೇ ಕಾರ್ಯಕ್ರಮ ತಂದರೂ ಅದಕ್ಕೆ ಹಣ ಹೊಂಚುವ ರೆಮಿಡೀಸ್ ಇದೆ. ಆದ್ರೆ, ಬಿಜೆಪಿ ಅವರ ಹೇಳಿಕೆ ಬಾಲೀಷ ಮಾತು. ಸರ್ಕಾರ ಸರಿಯಾದ ರೀತಿ ವ್ಯವಸ್ಥೆ ಮಾಡಿಕೊಂಡ್ರೆ ಗ್ಯಾರಂಟಿ ಗಳಿಗೆ ಹಣ ಹೊಂದಿಸಬಹುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES