Monday, December 23, 2024

Free Bus : ಮೊದಲ ದಿನವೇ 5.71 ಲಕ್ಷ ಮಹಿಳೆಯರ ಪ್ರಯಾಣ

ಬೆಂಗಳೂರು : 5 ಉಚಿತ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಭಾನುವಾರ (ನಿನ್ನೆ)ದಿಂದ ಜಾರಿಯಾಗಿದ್ದು, ರಾಜ್ಯಾದ್ಯಂತ ಶಕ್ತಿ ಯೋಜನೆಗೆ ಭಾರೀ ರೆಸ್ಪಾನ್ಸ್ ದೊರೆತಿದೆ.

ಹೌದು, ಮೊದಲ ದಿನವೇ ಶಕ್ತಿ ಯೋಜನೆಗೆ ಉತ್ತಮ‌ ಪ್ರತಿಕ್ರಿಯೆ ಲಭಿಸಿದೆ. ನಿನ್ನೆ ಒಂದೇ ದಿನವೇ 5 ಲಕ್ಷ 71 ಸಾವಿರದ 23 ಮಹಿಳಾ ಪ್ರಯಾಣಿಕರು ಉಚಿತವಾಗಿ ಓಡಾಟ ನಡೆಸಿದ್ದಾರೆ.

ಭಾನುವಾರ (ನಿನ್ನೆ) ಮಧ್ಯಾಹ್ನ 1 ಗಂಟೆಯಿಂದ  ಮಧ್ಯರಾತ್ರಿ 12 ಗಂಟೆಯವರಿಗೆ ಓಡಾಟ ನಡೆಸಿರುವ ಮಹಿಳಾ ಪ್ರಯಾಣಿಕರ ಬಗ್ಗೆ ಸಾರಿಗೆ ನಿಗಮಗಳು ರಾಜ್ಯ ಸರ್ಕಾರಕ್ಕೆ ಲೆಕ್ಕ ಕೊಟ್ಟಿವೆ. ಮಹಿಳಾ ಪ್ರಯಾಣಿಕರ ಪ್ರಯಾಣ ಮೌಲ್ಯ 1 ಕೋಟಿ 40 ಲಕ್ಷದ 22 ಸಾವಿರದ 878 ರೂಪಾಯಿ.

ಇದನ್ನೂ ಓದಿ : ಉಚಿತ ಪ್ರಯಾಣದಿಂದ ಬಸ್ ಫುಲ್ ರಶ್, ಆಯತಪ್ಪಿ ಬಿದ್ದು ವಿದ್ಯಾರ್ಥಿನಿ ಸಾವು

ನಿನ್ನೆ ಬಿಎಂಟಿಸಿ ಯಲ್ಲಿ 2 ಲಕ್ಷ 1 ಸಾವಿರದ 215 ಪ್ರಯಾಣಿಕರು ಓಡಾಟ ನಡೆಸಿದ್ದಾರೆ. ಕೆಎಸ್ಆರ್ಟಿಸಿಯಲ್ಲಿ 1,94,831, ವಾಯುವ್ಯ ಸಾರಿಗೆಯಲ್ಲಿ 1,22,354 ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 53 ಸಾವಿರದ 623 ಪ್ರಯಾಣಿಕರು ಓಡಾಟ ನಡೆಸಿದ್ದಾರೆ.

ಮಹಿಳೆಯರಿಗೆ ಉಚಿತ ಸ್ಮಾರ್ಟ್ ಕಾರ್ಡ್​

ಸಿಎಂ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆಯ ಲೋಗೋ ಬಿಡುಗಡೆ ಮಾಡುವ ಮೂಲಕ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿದರು. ಇದೇ ವೇಳೆ ಶಕ್ತಿ ಯೋಜನೆಯ ಲೋಗೋ ಮತ್ತು ಸ್ಮಾರ್ಟ್​​​​ ಕಾರ್ಡ್​​ ಮಾದರಿಯನ್ನು ಅನಾವರಣ ಮಾಡಿದರು. ಸಮಾರಂಭದಲ್ಲಿ ಮಹಿಳೆಯರಿಗೆ ಸಾಂಕೇತಿಕವಾಗಿ ಸ್ಮಾರ್ಟ್ ಕಾರ್ಡ್​ ವಿತರಣೆ ಮಾಡಿದರು. ಮುಂದಿನ ದಿನಗಳಲ್ಲಿ ಉಚಿತವಾಗಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು. ​​

RELATED ARTICLES

Related Articles

TRENDING ARTICLES