ದಾವಣಗೆರೆ : ಯದ್ವಾ-ತದ್ವಾ ಬಿಲ್ ಬಿಲ್ ಬಂದಿದೆ, ಯಾರು ಕರೆಂಟ್ ಬಿಲ್ ಕಟ್ಟ ಬೇಡಿ! ಎಂದು ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನೇ ಜನರಿಗೆ ಹೇಳ್ತಾ ಇದ್ದೀನಿ, ಯಾರು ಬಿಲ್ ಕಟ್ಟಬೇಡಿ. ಪೊಲೀಸ್ ರನ್ನ ಕರೆ ತಂದ್ರೆ ನನಗೆ ಫೋನ್ ಮಾಡಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ ಅಂತ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ರು. ಆದರೆ, ಅದೃಷ್ಟ ಚೆನ್ನಾಗಿತ್ತು ಅಧಿಕಾರಕ್ಕೆ ಬಂದ್ರು. ನಮ್ಮ ಅವಧಿಯ 20 ಸಾವಿರ ರೂಪಾಯಿ ಕೋಟಿ ಕಾಮಗಾರಿ ಹಣ ವಾಪಾಸ್ ತೆಗೆದುಕೊಳ್ಳೋಕೆ ಬರುತ್ತೆ. ವಿದ್ಯುತ್ ಬೆಲೆ ಏರಿಕೆ ಆದೇಶ ವಾಪಾಸ್ ಪಡೆಯೋಕೆ ಬರಲ್ವಾ? ದಿನಕ್ಕೊಂದು ಕಂಡಿಷನ್ ಹಾಕುತ್ತಾ ಇದ್ದಾರೆ ಎಂದು ಕಿಡಿಕಾರಿದ್ದಾರೆ.
ಖರ್ಗೆ ಸೂಪರ್ ಸಿಎಂ ಆಗಿದ್ದಾರೆ
ಕಾಂಗ್ರೆಸ್ ಸರ್ಕಾರದ ಒಬ್ಬೊಬ್ಬ ಮಂತ್ರಿ ಒಂದೊಂದು ತರ ಹೇಳುತ್ತಿದ್ದಾರೆ. ಪ್ರಿಯಾಂಕಾ ಖರ್ಗೆ ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ದಿನಕ್ಕೊಂದು ಹೇಳಿಕೆ ನೀಡುತ್ತಾ ಹೋಗುತ್ತಿದ್ದಾರೆ. ಕರೆಂಟ್ ಬಿಲ್ ಜಾಸ್ತಿ ಮಾಡಿ ಬಡವರಿಗೆ ಹೊರೆ ಮಾಡಿದ್ದಾರೆ. ಬಿಜೆಪಿಯವರು ಮಾಡಿದ್ದಾರೆ ಅಂತ ಈಗ ಆರೋಪ ಮಾಡುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಇದನ್ನೂ ಓದಿ : ಸರ್ಕಾರದ ಆರ್ಥಿಕ ತಲೆನೋವು ನಿಮಗ್ಯಾಕೆ? : ಸಿದ್ದರಾಮಯ್ಯ ಗರಂ
ಹಳ್ಳಿಗಾಡುಗಳಲ್ಲಿ ಈವರೆಗೆ ಬಸ್ಸೇ ಇಲ್ಲ
ನಮ್ಮ ಸರ್ಕಾರ ಇದ್ದಾಗ 20 ಸಾವಿರ ಕೋಟಿ ಅನುದಾನ ವಾಪಸ್ಸು ಪಡೆದ್ರಲ್ಲಾ.. ಅದರಂತೆ ವಿದ್ಯುತ್ ಬಿಲ್ ಏರಿಕೆ ಗಳನ್ನು ಕೂಡ ವಾಪಸ್ಸು ಪಡೆಯಬೇಕಿತ್ತು. ಶಕ್ತಿ ಯೋಜನೆಗೆ ಚಾಲನೆ ನೀಡಿದ್ದೀರಿ. ಆದರೆ, ಹಳ್ಳಿಗಾಡುಗಳಲ್ಲಿ ಇದುವರೆಗೆ ಬಸ್ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಗಳನ್ನು ಬಿಟ್ಟಾಗ ಮಾತ್ರ ಮಹಿಳಾ ಸಬಲೀಕರಣವಾಗಲಿದೆ ಎಂದು ಹೇಳಿದ್ದಾರೆ.
ಅತ್ತೆ, ಸೊಸೆ ಮಧ್ಯೆ ಜಗಳ ತಂದಿಟ್ಟಿದ್ದೀರಿ
ಎಲ್ಲಾ ಗ್ಯಾರಂಟಿಗಳಿಗೆ ಒಳ್ಳೆಯ ಹೆಸರು ಇಟ್ಟಿದ್ದೀರಿ. ನಮ್ಮ ಸಹೋದರಿ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ಅಣ್ಣಂದಿರಾ ಸಮಾಧಾನ ಮಾಡಿಕೊಳ್ಳಿ ಅಂತ ಹೇಳ್ತಾ ಇದಾರೆ. ಅತ್ತೆ-ಸೊಸೆ ನಡುವೆ ಜಗಳ ತಂದಿಟ್ಟಿದ್ದು ಯಾರಮ್ಮ ಸಹೋದರಿ? ಎಂದು ಟಾಂಗ್ ಕೊಟ್ಟಿದ್ದಾರೆ.