Wednesday, January 22, 2025

ಸಿಲ್ಕ್ ಸಿಟಿಯಲ್ಲಿ ಬಿಜೆಪಿಗೆ ‘ರಾಮ’ ಬಲ : ಸೀಕಲ್ ರಾಮಚಂದ್ರಗೌಡ ಮಾಡಿದ್ರು ಕಮಾಲ್

ಬೆಂಗಳೂರು : ಸಿಲ್ಕ್ ಖ್ಯಾತಿಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯ ಹುರಿಯಾಳು ಸೀಕಲ್ ರಾಮಚಂದ್ರಗೌಡ ಬಿರುಗಾಳಿ ಎಬ್ಬಿಸಿ ಅಖಾಡದಲ್ಲಿದ್ದ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದರು.

ಹೌದು, ನೆಲೆ ಇಲ್ಲದ ಬಿಜೆಪಿಗೆ ಕೇವಲ 22 ದಿನಗಳಲ್ಲಿ ಮಿಂಚಿನ ಸಂಚಲನ ನಡೆಸಿ 15 ಸಾವಿರಕ್ಕೂ ಹೆಚ್ಚು ಮತಗಳಿಸಿ ಬಿಜೆಪಿಗೆ ಶಕ್ತಿ ತುಂಬುವ ಕೆಲಸವನ್ನು ಸೀಕಲ್ ರಾಮಚಂದ್ರಗೌಡರು ಮಾಡಿದ್ದರು.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಇಂಟಿರಿಯರ್ ಡೆಕೋರೇಟರ್ ಆಗಿದ್ದ ಇಂಜಿನಿಯರ್ ಸೀಕಲ್ ರಾಮಚಂದ್ರಗೌಡರು ಮಾಜಿ ಸಚಿವ ಜಿ.ಟಿ.ದೇವೇಗೌಡರ ಬೀಗರು, ಸಿಎಂ ಸಿದ್ದರಾಮಯ್ಯ 2018ರಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಾಗ ಒಳ ಏಟು ನೀಡಿ, ಸೋಲಿಗೆ ಕಾರಣರಾಗಿದ್ದು, ಇದೇ ಸೀಕಲ್ ರಾಮಚಂದ್ರಗೌಡರು.

ಇಂತಹ ರಾಮಚಂದ್ರಗೌಡರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಆಶಯಗಳೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ನಿಂತು ಭರವಸೆಯ ನಾಯಕರಾಗಿ ಹೊರಹೊಮ್ಮಿದರು. ಬಿಜೆಪಿಗೆ ನೆಲೆ ಇಲ್ಲದ ಊರಲ್ಲಿ ಶಕ್ತಿ ತುಂಬುವ ಪ್ರಾಮಾಣಿಕ ಪ್ರಯತ್ನ ಮಾಡಿ ಪಕ್ಷದ ಹಿರಿಯರ ಮೆಚ್ಚುಗೆ ಪಾತ್ರರಾಗಿದ್ದಾರೆ. ಕ್ಷೇತ್ರದಲ್ಲಿ ಚುನಾವಣೆ ವೇಳೆ ಇವರ ನಾಯಕತ್ವ ಮೆಚ್ಚಿ ಅನೇಕ ಮುಖಂಡರು ಬಿಜೆಪಿ ಸೇರ್ಪಡೆಯಾಗಿದ್ದರು.

ಇದನ್ನೂ ಓದಿ : ನಾವು ಮತ್ತೆ ‘ರಾಜ್ಯದಲ್ಲಿ ಪುಟಿದೇಳುತ್ತೇವೆ’ : ಬಸವರಾಜ ಬೊಮ್ಮಾಯಿ

ಜನಸೇವೆಯಲ್ಲಿ ತೊಡಗುವ ಗುರಿ

ಕಾಂಗ್ರೆಸ್, ಜೆಡಿಎಸ್ ಪಕ್ಷದ ಭದ್ರಕೋಟೆಯಂತಿರುವ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಮುಂದೊಂದು ದಿನ ಬಿಜೆಪಿಯ ಬಾವುಟ ಹಾರಿಸುವ ದೃಢ ಸಂಕಲ್ಪದೊಂದಿಗೆ ಸಂಘಟನೆಯಲ್ಲಿ ತೊಡಗಿರುವ ಸೀಕಲ್ ರಾಮಚಂದ್ರಗೌಡರು, ಆಸ್ಪತ್ರೆ ನಿರ್ಮಾಣ ಮಾಡಿ‌ ಜನಸೇವೆಯಲ್ಲಿ ತೊಡಗುವ ಗುರಿ ಹೊಂದಿದ್ದಾರೆ. ಸಂಘಟನಾ ಚತುರರಾಗಿ ಯುವಕರ ಮನಗೆದ್ದಿರುವ ಸೀಕಲ್ ರಾಮಚಂದ್ರಗೌಡರು ಶಿಡ್ಲಘಟ್ಟ ತಾಲ್ಲೂಕನ್ನ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಗುರಿ ಹೊಂದಿದ್ದಾರೆ.

45 ದಿನಕ್ಕೆ 16 ಸಾವಿರ ಮತ 

ಪಕ್ಷೇತರ ಇರಬಹುದು, ಕಾಂಗ್ರೆಸ್‌ ಇರಬಹುದು, ಜೆಡಿಎಸ್‌ ಇರಬಹುದು ಅಥವಾ ಬಿಜೆಪಿಗೆ ಮತಬಾಂಧವರು ಆಶೀರ್ವಾದ ಮಾಡಿದ್ದಾರೆ. ತಾಳೆ ಹಾಕಿ ನೋಡಿದರೆ, 5ರಿಂದ 10 ವರ್ಷಗಳಿಂದ ಮಾಡ್ತಾ ಇರುವ ಸೇವೆಗೆ 50ರಿಂದ 60 ಸಾವಿರ ಮತ ನೀಡಿದ್ದಾರೆ. ಕೇವಲ 45 ದಿನಗಳಲ್ಲಿ ಮಾಡಿದ ಸೇವೆಗೆ ಕೊಟ್ಟಿರುವ ಮತ ನಮಗೆ ತೃಪ್ತಿ ನೀಡಿದೆ. 10 ವರ್ಷ ಸೇವೆಗೆ 60 ಸಾವಿರ ಮತ, 45 ದಿನಕ್ಕೆ 16 ಸಾವಿರ ಮತ ನಮಗೆ ಸಂತೋಷ ನೀಡಿದೆ ಎಂದು ಸೀಕಲ್ ರಾಮಚಂದ್ರಗೌಡ ಸಂತಸ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES