Saturday, November 2, 2024

ಶಕ್ತಿ ಯೋಜನೆಯಲ್ಲಿ ಗೋಲ್ ಮಾಲ್! : ಮಹಿಳಾ ಪ್ರಯಾಣಿಕರಿಂದ 5 ರೂ. ಕಮಿಷನ್?

ಬೆಂಗಳೂರು : ಐದು ಉಚಿತ ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಗೆ ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದರು. ಈ ಶಕ್ತಿ ಯೋಜನೆ ಜಾರಿಯಾಗಿ ಒಂದೇ ದಿನದಲ್ಲಿ ಗೋಲ್ ಮಾಲ್ ನಡೆದಿದೆ.  

ಹೌದು, ಉಚಿತ ಪ್ರಯಾಣ ಅಂತ ಬಸ್​ ಹತ್ತಿದ ಕೆಲವರಿಗೆ ಕಂಡಕ್ಟರ್ ಗಳಿಂದ ಶಾಕ್! ಆಧಾರ್ ಕಾರ್ಡ್​ ಇಲ್ವಾ.. ವೋಟರ್ ಐಡಿ ಇಲ್ವಾ.. ಯಾವ ಗುರುತಿನ ಚೀಟಿನೂ ಇಲ್ವಾ.. ಹಾಗಾದ್ರೆ ಕೊಡಿ 5 ರೂಪಾಯಿ ಕೊಡಿ ಅಂತಾ ಹಣ ಪೀಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಉಚಿತ ಬಸ್​ ಪ್ರಯಾಣದ ಖುಷಿಯಲ್ಲಿದ್ದ ಪ್ರಯಾಣಿಕರಿಂದ ಕೆಲವು ಕಂಡಕ್ಟರ್ ​ಕಲೆಕ್ಷನ್ ಗೆ ಇಳಿದಿದ್ದಾರೆ. ಆಧಾರ್, ವೋಟರ್ ಐಡಿ ಇಲ್ಲದೆ ಬಸ್ ಹತ್ತಿದವರ ಬಳಿ 5 ರೂಪಾಯಿ ಕಮಿಷನ್ ಪಡೆದಿದ್ದಾರೆ. ಒಂದೇ ದಿನದಲ್ಲಿ ಕೆಲವು ಕಂಡಕ್ಟರ್​ ಗಳು ಹಗಲು ದರೋಡೆಗೆ ಇಳಿದಿದ್ದಾರೆ. ಕೆಲವು ಸಿಬ್ಬಂದಿಯ ನಡವಳಿಕೆಯಿಂದ ಸರ್ಕಾರಕ್ಕೆ ಮುಜುಗರ ತರಿಸಿದೆ.

ರಾಜ್ಯ ಸರ್ಕಾರ, ಇದಕ್ಕೆ ಬ್ರೇಕ್​ ಹಾಕುತ್ತಾ? ಸಾರಿಗೆ ಇಲಾಖೆ ಬಸ್ ​ಗಳ ಚೆಕಿಂಗ್ ಹೆಚ್ಚಿಸುತ್ತಾ? ಪ್ರಯಾಣಿಕರಿಂದ ಕಮಿಷನ್ ಪಡೆಯುತ್ತಿರುವ ಕೆಲವು ಸಿಬ್ಬಂದಿಯ ಕಳ್ಳಾಟಗಳಿಗೆ ಇತಿಶ್ರೀ ಯಾವಾಗ? ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುವುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : ನೋಡಿದ ತಕ್ಷಣ ಗಂಡಸ್ರು, ಹೆಂಗಸ್ರು ಅಂತಾ ಗೊತ್ತಾಗಲ್ವಾ? : ಬಿಜೆಪಿ ಲೇವಡಿ

ಶೇ.50ರಷ್ಟು ಮೀರಿದ ಮಹಿಳಾ ಪ್ರಯಾಣಿಕರು

ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಸ ಯೋಜನೆ ಜಾರಿ ಹಿನ್ನೆಲೆ ಇದೀಗ ರಾಜ್ಯಾದ್ಯಂತ ಮಹಿಳೆಯರು ಬಸ್ ಪ್ರಯಾಣಕ್ಕೆ ಮುಂದಾಗಿದ್ದಾರೆ. ಶೇ.50 ರಷ್ಟು ಮೀರಿಯೂ ಮಹಿಳೆಯರು ಬಸ್ ಪ್ರಯಾಣದಲ್ಲಿದ್ದಾರೆ. ಇದಕ್ಕೆ ಗದಗ ಜಿಲ್ಲೆ ಕೂಡಾ ಹೊರತಾಗಿಲ್ಲ.

ಗದಗ ಕೇಂದ್ರಸ್ಥಾನದಲ್ಲಿನ‌ ಎರಡು ಬಸ್ ನಿಲ್ದಾಣಗಳಲ್ಲೂ ಮಹಿಳೆಯರೇ ತುಂಬಿಕೊಂಡಿದ್ದಾರೆ. ಬಸ್ ಪ್ರಯಾಣ ಫ್ರೀ ಬಿಡೋದಷ್ಟೇ ಅಲ್ಲ, ಸರಿಯಾಗಿ ಬಸ್ ಬಿಡ್ರಿ. ರೈತರ ಸಾಲ ಮನ್ನಾ ಮಾಡ್ರಿ ಅಂತಾ ಸರ್ಕಾರದ ವಿರುದ್ಧ ಮಹಿಳೆಯರು ಆಕ್ರೋಶಗೊಂಡಿದ್ದಾರೆ.

RELATED ARTICLES

Related Articles

TRENDING ARTICLES