Sunday, November 3, 2024

ಹಿಂದೆ ಮಹಿಳೆಯರು ಸೀಮಂತ ಕಾರ್ಯಕ್ರಮಕ್ಕೆ ಗಂಡಸರನ್ನೇ ಕಳುಹಿಸುತ್ತಿದ್ದರು : ಪ್ರಿಯಾಂಕ್ ಖರ್ಗೆ

ಕಲಬುರಗಿ : ಈ ಹಿಂದೆ ಮಹಿಳೆಯರು ಸೀಮಂತ ಕಾರ್ಯಕ್ರಮಕ್ಕೆ ಗಂಡಸರನ್ನೇ ಕಳುಹಿಸುತ್ತಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕಲಬುರಗಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಶಕ್ತಿ ಯೋಜನೆ ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಕಲಿದೆ ಎಂದು ತಿಳಿಸಿದ್ದಾರೆ.

ಹಣಕಾಸಿನ ಕೊರತೆಯಿಂದ ಮಹಿಳೆಯರು ಕಾರ್ಯಕ್ರಮಗಳಿಗೆ ಹೋಗುತ್ತಿರಲಿಲ್ಲ. ಸೀಮಂತ ಕಾರ್ಯಕ್ರಮಕ್ಕೆ ಗಂಡಸರನ್ನೆ ಕಳುಹಿಸುತ್ತಿದ್ದರು. ಆದರೆ, ಶಕ್ತಿ ಯೋಜನೆಯಿಂದ ಮಹಿಳೆಯರು ರಾಜ್ಯದ ಮೂಲೆ ಮುಲೆಗಳಿಗೂ ಪ್ರಯಾಣಿಸಬಹುದು. ಕಲಬುರಗಿ ಜಿಲ್ಲೆಯಾದ್ಯಂತ ನಿತ್ಯ 1 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸಲಿದ್ದಾರೆ. ಇಡೀ ರಾಜ್ಯದ ತುಂಬೆಲ್ಲ ಮಹಿಳೆಯರು ಉಚಿತವಾಗಿ ಓಡಾಡಲು ಶಕ್ತಿ ಯೋಜನೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ವಂದಿತಾ ಶರ್ಮಾಗೆ ಮೊದಲ ಟಿಕೆಟ್ ಹರಿದು ಕೊಟ್ಟ ಡಿ.ಕೆ ಶಿವಕುಮಾರ್

ದುಡಿಯೋ ಕೈಗೆ ಶಕ್ತಿ ತುಂಬಲು ಗ್ಯಾರಂಟಿ

ಚುನಾವಣೆ ಮುನ್ನ ಪ್ರಜಾಧ್ವನಿಯಾತ್ರೆ ಮೂಲಕ ಜನರ ಧ್ವನಿಯನ್ನು ತಿಳಿದುಕೊಂಡಿದ್ದೇವೆ. ಪ್ರಮುಖವಾಗಿ ಕಂಡುಬಂದಿದ್ದು ರಾಜ್ಯದಲ್ಲಿ ಆರ್ಥಿಕ ಅಸಮಾನತೆ ಕಂಡು ಬಂದಿದೆ. ಅದಕ್ಕಾಗಿ ಪಕ್ಷದಿಂದ ಜನರಿಗಾಗಿ ಐದು ಉಚಿತ ಗ್ಯಾರಂಟಿಗಳನ್ನು ನೀಡಿದ್ದೆವು. ಹಸಿವು ಮುಕ್ತ ಕರ್ನಾಟಕ ಮಾಡಲು, ದುಡಿಯೋ ಕೈಗೆ ಶಕ್ತಿ ತುಂಬಲು ಗ್ಯಾರಂಟಿ ಯೋಜನೆ ಸಹಕಾರಿ. ಗೃಹಜ್ಯೋತಿ ಯೋಜನೆ ಬಹಳ ಉಪಯುಕ್ತವಾದ ಯೋಜನೆ. ಗೃಹಲಕ್ಷ್ಮೀ ಯೋಜನೆಯಿಂದ ಅನೇಕ ಮಹಿಳೆಯರು ಸಂತಸಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಸಿಎಂಗೆ ಆರ್ಥಿಕ ಹೊರೆ ಹೊರುವ ಶಕ್ತಿಯಿದೆ

ವಿರೋಧ ಪಕ್ಷಗಳಿಗೆ ಇಂದು ಮಾಡೋಕೆ ಕೆಲಸವಿಲ್ಲ. ಮತದಾರರು ನಮಗೆ ಯಾವಾಗ ಗ್ಯಾರಂಟಿ ಕೊಡ್ತಿರಿ ಅಂತಾ ಕೇಳ್ತಿಲ್ಲ, ಆದರೆ ವಿಪಕ್ಷಗಳು ಕೇಳ್ತಿವೆ. ಪ್ರತಿವರ್ಷ ಗ್ಯಾರಂಟಿ ಸ್ಕಿಂಗಳಿಗೆ 50 ಸಾವಿರ ಕೋಟಿ ರೂ. ವೆಚ್ಚ ತಗಲುತ್ತದೆ. ಆರ್ಥಿಕವಾಗಿ ಹೊರೆಯಾಗುತ್ತೆ ಅಂತಾ ಬಿಜೆಪಿಯವರು ಬೊಬ್ಬೆ ಹೊಡೆಯುತ್ತಿದ್ದಾರೆ. ಆರ್ಥಿಕ ಹೊರೆ ಹೊರುವ ಶಕ್ತಿ, ಸಾಮರ್ಥ್ಯ ಸಿಎಂ ಸಿದ್ದರಾಮಯ್ಯನವರಿಗೆ ಇದೆ ಎಂದು ಟಾಂಗ್ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES