Sunday, December 22, 2024

ನನ್ನ ಬಗ್ಗೆ ಲಘುವಾಗಿ ಮಾತಾನಾಡೋದನ್ನು ನಿಲ್ಲಿಸಿ : ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು : ನನ್ನ ಬಗ್ಗೆ ಲಘುವಾಗಿ ಮಾತಾನಾಡುವುದನ್ನು ಮೊದಲು ನಿಲ್ಲಿಸಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಖಡಕ್ ಎಚ್ಚರಿಕೆ ನೀಡಿದರು.

ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿರುವ ಅವರು, ನಾನು ಸಿಎಂ ಆದಾಗ ವರ್ಗಾವಣೆಗೆ ಹಣ ಕೊಟ್ಟಿದ್ದೆ ಅಂತ ಒಬ್ಬ ಅಧಿಕಾರಿ ಹೇಳಲಿ, ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಗುಡುಗಿದರು.

ಕಾಂಗ್ರೆಸ್ ಜೊತೆ ಸರ್ಕಾರ ಇದ್ದಾಗ.. ಇವರು ಹೇಳಿದ ಮೇಲೆ ವರ್ಗಾವಣೆ ಮಾಡಬೇಕಿತ್ತು. ಅಂತಾ ಪರಿಸ್ಥಿತಿ ಇತ್ತು. ನಾನು ಅಮೇರಿಕಾದಲ್ಲಿ ಇದ್ದಾಗ ಒಂದಿಷ್ಟು ಜನ ಮುನಿಸಿಕೊಂಡ್ರಲಾ? ಆಗ ಏನಾಯ್ತು? ಕಾಂಗ್ರೆಸ್ ನ ಒಬ್ಬ ಮಂತ್ರಿ ಸೋಪ್ ಅಂಡ್ ಡಿಟರ್ಜಂಟ್ ಮಂಡಳಿಗೆ ಅಧಿಕಾರಿ ಒಬ್ಬರನ್ನು ಹಾಕಿದ್ರು. ಅಲ್ಲಿ ಅಸಮಾಧಾನ ಆಯ್ತು. ಆಗಲೇ ತಾನೆ ಸರ್ಕಾರ ಬಿದ್ದಿದ್ದು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ : ಸಿದ್ದರಾಮಯ್ಯ ಕಾಲ್ಗುಣದಿಂದ ಮುಂಗಾರು ಓಡಿಹೋಯಿತೇ? : ಬಿಜೆಪಿ ಲೇವಡಿ

ಅಧಿಕಾರಿ ಎಷ್ಟು ದುಡ್ಡು ಕೊಟ್ಟು ಬಂದ್ರು?

ಸಿಎಂ ಅವರೇ ಒಬ್ಬ ಅಧಿಕಾರಿ ವರ್ಗಾವಣೆ ಮಾಡಿದ್ದಾರೆ. ಅದಕ್ಕೆ ಸಂಬಂಧಪಟ್ಟ ಮಂತ್ರಿ ವಿದೇಶದಲ್ಲಿ ಇದ್ದಾರೆ. ಸಿಎಂ ಆದೇಶ ಮಾಡಿದರೂ, ಮಂತ್ರಿ ಹೇಳಿದ್ದಾರಂತೆ ಅಧಿಕಾರ ತೆಗೆದುಕೊಳ್ಳಬೇಡಿ ಅಂತ. ಹಾಗಾದ್ರೆ, ಎಷ್ಟು ಹಣ ಕೊಟ್ಟು ಬಂದ್ರು ಈ ಅಧಿಕಾರಿ? ಈಗ ಜ್ಯೋತಿ ಕಾರ್ಯಕ್ರಮ ನಡೆಯುತ್ತಿದೆ. ಈ ದಂಧೆ ಬಗ್ಗೆ ಏನು ಹೇಳ್ತಾರೆ ಇವರು. ಇನ್ನೊಬ್ಬ ಅಧಿಕಾರಿಯನ್ನು ಸಿಎಂ ಕಚೇರಿಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಛೇಡಿಸಿದರು.

ಇದು ತನಿಖೆ ಮಾಡುವ ಸರ್ಕಾರ

ಹಿಂದಿನ ಸರ್ಕಾರದ ಹಗರಣ ತನಿಖೆ ವಿಚಾರ ಮಾತನಾಡಿದ ಕುಮಾರಣ್ಣ, ತನಿಖೆ ಮಾಡಲಿ ಯಾರು ಬೇಡ ಅಂದ್ರು.. ಜನರ ಸಮಸ್ಯೆ ಬಗ್ಗೆ ಚಿಂತನೆ ಮಾಡಿ, ಜನಪರ ಕೆಲಸ ಮಾಡಬೇಕು. ಆದರೆ, ಈ ಸರ್ಕಾರ ಅದನ್ನು ಮಾಡ್ತಾ ಇಲ್ಲ. ಹಿಂದಿನ ಅಕ್ರಮಗಳನ್ನು ತನಿಖೆ ಮಾಡುವ ಸರ್ಕಾರ ಇದು. ಅವರಿಗೆ ಲ್ಯಾಂಡ್ ಕೊಟ್ರು ಅಂತರಲ್ಲಾ.. ಇವರ ಅಧಿಕಾರ ಇದ್ದಾಗ ಯಾರಿಗೆ ಲ್ಯಾಂಡ್ ಕೊಟ್ರು? ಎಂದು ಪ್ರಶ್ನಿಸಿದರು.

ಯಾರ ಜೊತೆ ಮೈತ್ರಿ ಮಾಡ್ಕೊಂಡ್ರಿ?

ಹಿಂದೆ ಜೆಡಿಎಸ್ ಬಿಜೆಪಿ ‘ಬಿ ಟೀಂ’ ಅಂದ್ರಲ್ಲಾ.. ಈಗ ಯಾರು ಯಾವ ಟೀಂ ಅಂತ ಹೇಳಿ. 135 ಸ್ಥಾನ ಗೆಲ್ಲೋಕೆ ಯಾರು? ಯಾರ ಜೊತೆ ಮೈತ್ರಿ ಮಾಡ್ಕೊಂಡ್ರಿ? ಜೆಡಿಎಸ್ ಗೆ ಮತ ಹಾಕಿದ್ರೆ ಎಟಿಎಂ ಅಂದ್ರಲ್ಲಾ.. ಈ ಎರಡು ಪಕ್ಷಗಳು ನಮ್ಮ ರಾಜ್ಯದ ಸಂಪತ್ತು ಲೂಟಿ ಮಾಡುವ ಎಟಿಎಂಗಳು ಎಂದು ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES