Monday, December 23, 2024

ಅಪ್ಪ ನೀಡಿದ 165 ಭರವಸೆಗಳಲ್ಲಿ 159 ಈಡೇರಿಸಿದ್ರು : ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು : ಕಳೆದ ಬಾರಿ ಅಪ್ಪ ನೀಡಿದ 165 ಭರವಸೆಗಳಲ್ಲಿ 159 ಈಡೇರಿಸಿದ್ದರು. ಮೋದಿ ಯಾವುದೇ ಭರವಸೆ ಈಡೇರಿಸಿಲ್ಲ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಮೈಸೂರಿನ ಬಿಳಿಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿರುವ ಅವರು, ಅಪ್ಪನ ಗೆಲುವಿಗೆ ಸಹಕರಿಸಿದ ವರುಣಾ ಜನರಿಗೆ ನಮನಗಳು ಎಂದು ತಿಳಿಸಿದರು.

ಹಗಲಿರುಳು ಶ್ರಮಿಸಿದ ಮತದಾರರಿಗೆ ನಾನು ನಮನ ಸಲ್ಲಿಸುತ್ತೇನೆ. ಕಾಯ, ವಾಚ, ಮನಸ ಸೇವೆ ಸಲ್ಲಿಸಿದ್ದೀರಿ. ತಾವೇ ಅಭ್ಯರ್ಥಿ ಎಂಬಂತೆ ಮನೆ-ಮನೆಗೆ ಹೋಗಿ ಪ್ರಚಾರ ಮಾಡಿದ್ದೀರಿ. ಬಿಜೆಪಿಯ ವೈಫಲ್ಯಗಳನ್ನು ಮನೆ ಮನೆಗೆ ತಲುಪಿಸಿದ್ದೀರಿ. ಕಾಂಗ್ರೆಸ್ ಪಕ್ಷದ ಜನಪರ ಕಾರ್ಯಗಳನ್ನು ಜನರಿಗೆ ತಿಳಿಸಿದ್ದೀರಿ. ನಿಮಗೆ ಸಾಷ್ಟಾಂಗ ನಮಸ್ಕಾರಗಳು ಎಂದ ನುಡಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಮಾಧ್ಯಮದವರನ್ನು ನಿಯಂತ್ರಣ ಮಾಡುತ್ತಿದ್ದರು. ಹಣದ ಪ್ರಭಾವ ಕೂಡ ಬಿಜೆಪಿ ಅವರ ಬಳಿ ಇತ್ತು. ಆದರೆ, ಜನಶಕ್ತಿ ಗೆಲುವು ಸಾಧಿಸಿದೆ. ಪ್ರಪಂಚದಲ್ಲಿ ಜನಶಕ್ತಿ ಮುಂದೆ ದೊಡ್ಡ ಶಕ್ತಿ ಬೇರೊಂದಿಲ್ಲ. ಕಳೆದ ಬಾರಿ ಸಿದ್ದರಾಮಯ್ಯ‌ನವರು ನೀಡಿದ 165 ಭರವಸೆಗಳಲ್ಲಿ 159 ಈಡೇರಿಸಿದ್ದರು. ಚುನಾವಣೆಯಲ್ಲಿ ಈ ಬಾರಿ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ : ಫಸ್ಟ್ ಬಸ್ ಬಿಡಿ.. ಆಮೇಲೆ ಉಚಿತ, ಖಚಿತ ಎಲ್ಲಾ : ಬಿಜೆಪಿ ವ್ಯಂಗ್ಯ

5 ಗ್ಯಾರಂಟಿಗಳನ್ನು ಈಡೇರಿಸುತ್ತೇವೆ

ಸರ್ಕಾರ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ಕಳೆದ 10 ವರ್ಷದ ಅವಧಿಯಲ್ಲಿ ಹಲವು ಭರವಸೆ ಬಿಜೆಪಿ ನೀಡಿದ್ದರು. ಗಡಿ ರಕ್ಷಣೆ, ಬಡವರಬದುಕು ಉದ್ಧಾರ ಸೇರಿ ಹಲವರ ಭರವಸೆ ನೀಡಿದ್ದರು. ಈವರಗೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಭರವಸೆ ಈಡೇರಿಸಿಲ್ಲ. ನಾಳೆಯಿಂದ ಶಕ್ತಿ ಯೋಜನೆ ಜಾರಿಗೆ ಬರಲಿದೆ ಎಂದು ಹೇಳಿದರು.

ಹಿಂದುಳಿದವರ ಪರ ಕೆಲಸ ಮಾಡ್ತೇವೆ

ನಾವು ನೀಡಿದ ಎಲ್ಲಾ ಭರವಸೆ ಈಡೇರಿಸುತ್ತೇವೆ. ನಾವು ಅಧಿಕಾರಕ್ಕೆ ಬಂದ ಒಂದೇ ತಿಂಗಳಿಗೆ ನುಡಿದಂತೆ ನಡೆದಿದ್ದೇವೆ. ಮುಂದಿನ ದಿನಗಳಲ್ಲಿ ಬಡವರು, ದಲಿತರು, ರೈತರು, ಕಾರ್ಮಿಕರು, ಹಿಂದುಳಿದವರ ಪರ ಕೆಲಸ ಮಾಡುತ್ತೇವೆ. ಐದು ವರ್ಷದ ಅವಧಿಯಲ್ಲಿ ಉತ್ತಮ ಆಡಳಿತ ನೀಡುತ್ತೇವೆ ಎಂದು ಮಾಜಿ ಶಾಸಕ ಡಾ.ಯತೀಂದ್ರ ತಿಳಿಸಿದರು.

RELATED ARTICLES

Related Articles

TRENDING ARTICLES