ಚಾಮರಾಜನಗರ : ಊಟುಮಲೈ ಗ್ರಾಮಸ್ಥರು ಮಾರಿಯಮ್ಮನ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ತೆಪ್ಪಗಳ ರೇಸ್ ನಲ್ಲಿ ಗೆದ್ದವರಿಗೆ 4 ಗ್ರಾಂ ಚಿನ್ನ ಬಹುಮಾನವಾಗಿ ನೀಡಲಾಗಿದೆ.
ಭಾರತದ ನಯಾಗರ ಎಂದೇ ಪ್ರಸಿದ್ಧವಾಗಿರುವ ಕರ್ನಾಟಕ ಹಾಗೂ ತಮಿಳುನಾಡಿನ ಎರಡೂ ಗಡಿ ಹಂಚಿಕೊಂಡಿರುವ ಚಾಮರಾಜನಗರ ಜಿಲ್ಲೆಯ ಹೊಗೆನಕಲ್ ಜಲಪಾತದ ಹಿನ್ನೀರಿನಲ್ಲಿ ತೆಪ್ಪಗಳ ರೇಸ್ ನಡೆದಿದೆ.
ಮಾರಿಯಮ್ಮನ ಹಬ್ಬದ ಪ್ರಯುಕ್ತ ಊಟುಮಲೈ ಎಂಬ ಗ್ರಾಮಸ್ಥರು ತೆಪ್ಪಗಳ ರೇಸ್ ಆಯೋಜಿಸಿದ್ದರುಇ. ರೇಸ್ ನಲ್ಲಿ 8ರಿಂದ10 ತೆಪ್ಪಗಳು ಭಾಗಿಯಾಗಿದ್ದವು. ಒಂದು ತೆಪ್ಪದಲ್ಲಿ ಇಬ್ಬರು ಕುಳಿತು 100 ಮೀಟರ್ ರೇಸ್ ನಡೆದಿತ್ತು. ರೇಸ್ ನಲ್ಲಿ ಗೆದ್ದವರಿಗೆ ಚಿನ್ನಾಭರಣವನ್ನು ಬಹುಮಾನವಾಗಿ ನೀಡಲಾಗಿದೆ.
ಇದನ್ನೂ ಓದಿ : 45 ರೂ. ಬದಲಿಗೆ 202 ರೂ. ಟಿಕೆಟ್ ಹರಿದ ಕಂಡಕ್ಟರ್ : ಪ್ರಯಾಣಿಕರು ಕಕ್ಕಾಬಿಕ್ಕಿ!
ಮೊದಲ ಬಹುಮಾನ : ಪೆರುಮಾಳ್ ಹಾಗೂ ಮಯಿಲ್ (4 ಗ್ರಾಂ ಚಿನ್ನ)
ಎರಡನೇ ಬಹುಮಾನ : ಶ್ರೀನಿ ಹಾಗೂ ಪೆರುಮಾಳ್ (2 ಗ್ರಾಂ ಚಿನ್ನ)
ಮೂರನೇ ಬಹುಮಾನ : ಸತೀಶ್ ಹಾಗೂ ಕರುಪ್ಪನ್ (8 ಸಾವಿರ ನಗದು)
ಹೊಗೆನಕಲ್ ಜಲಪಾತದ ಹಿನ್ನೀರಿನಲ್ಲಿ ಭೋರ್ಗರೆದು ಹರಿಯುವ ಕಾವೇರಿಯಲ್ಲಿ ಈ ರೋಮಾಂಚಕ ತೆಪ್ಪಗಳ ರೇಸ್ ನಡೆದಿದೆ.