Wednesday, January 22, 2025

ಗ್ಯಾರಂಟಿ ಗಿಮಿಕ್ : ‘ಅದು ಜನರಲ್ ಆಗಿ ನೀಡಿದ ಹೇಳಿಕೆ’ ಎಂದ ಚಲುವರಾಯಸ್ವಾಮಿ

ಬೆಂಗಳೂರು : ಕಾಂಗ್ರೆಸ್ ಗ್ಯಾರಂಟಿಗಳು ಚೀಪ್ ಪಾಪ್ಯುಲಾರಿಟಿ ಎಂಬ ಹೇಳಿಕೆ ನೀಡಿ ಮಹಾ ಎಡವಟ್ಟು ಮಾಡಿಕೊಂಡಿದ್ದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಗ್ಯಾರಂಟಿ ಗಿಮಿಕ್ ವಿಡಿಯೋ ವೈರಲ್ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಏನು ಇಲ್ಲವಲ್ಲ, ಗ್ಯಾರಂಟಿ ಆರಂಭ ಆಗಿದೆ ಅಲ್ವಾ ಎಂದು ಹೇಳಿದ್ದಾರೆ.

ಅದು ಬಿಡಪ್ಪ.. ಅದು ಹೇಳಿಕೆ ಅಲ್ಲ.. ಅದು ಜನರಲ್ ಆಗಿ ಚರ್ಚೆ ಮಾಡುವ ವೇಳೆ ಹೇಳಿರುವ ಹೇಳಿಕೆ ಅದು. ಅದು ಬಿಟ್ಟು ಬಿಡಿ. ಜೂನ್ 11ಕ್ಕೆ ಗ್ಯಾರಂಟಿ ಚಾಲನೆ ನೀಡ್ತೀವಿ. ನಿನ್ನ ಹೆಂಡತಿಯನ್ನು ಕರೆದುಕೊಂಡು ಓಡಾಡು. ನಾವು ಓಡಾಟ ಮಾಡ್ತೀವಿ ಎಂದು ಚಲುವರಾಯಸ್ವಾಮಿ ಚಾರಿಕೊಂಡಿದ್ದಾರೆ.

ಇದನ್ನೂ ಓದಿ : ಸಿ.ಟಿ ರವಿ ಮನೆಯವರಿಗೂ ಫ್ರೀ ಅಂದಿದ್ರು, ಈಗ ಇಲ್ಲ ಅಂತಿದ್ದಾರೆ : ಸಿ.ಟಿ ರವಿ 

ಮುಂಗಾರಿಗೆ ಎಲ್ಲಾ ಜಿಲ್ಲೆಗಳಲ್ಲಿ ತಯಾರಿ

ಸರ್ಕಾರ ರಚನೆ ಆದ ಮೇಲೆ ಅಧಿಕೃತ ಕಚೇರಿ ಆರಂಭ ಮಾಡಿದ್ದೀನಿ. ಈಗಾಗಲೇ ಸಭೆ ಮಾಡಿ ಮುಂಗಾರಿಗೆ ತಯಾರಿ ಆಗಬೇಕಾಗಿದೆ. ಎಲ್ಲಾ 31 ಜಿಲ್ಲೆಗಳಲ್ಲಿ ತಯಾರಿ ಆಗಿದೆ. ನಿರಂತರವಾಗಿ ಚರ್ಚೆ ನಡೆಯುತ್ತಿದೆ. ಹೊಸ ಕಾರ್ಯದರ್ಶಿ ನೋಡ್ತಾ ಇದ್ದಾರೆ. ಬೆಳಗಾವಿ ವಿಭಾಗದಲ್ಲಿ ಅಧಿಕಾರಿಗಳ ಸಭೆ ಇದೆ. ಪ್ರಮುಖವಾಗಿ ರೈತರ ಸಮಸ್ಯೆ ಜೆಡಿಗಳ ಜೊತೆ ಕಾರ್ಯದರ್ಶಿ ವಿಡಿಯೋ ಕಾನ್ಫರೆನ್ಸ್ ಮಾಡಿದ್ದಾರೆ. ಏನೆಲ್ಲ ಸಿದ್ದತೆ ಆಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.

ಜಿಲ್ಲಾ ಉಸ್ತುವಾರಿ ಸಮಸ್ಯೆ ಇಲ್ಲ

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಅವರು, ಇಂದು ಅಥವಾ ನಾಳೆ ಆಗುತ್ತೆ. 34 ಮಂದಿ ಸಚಿವರನ್ನು ಒಂದೇ ಬಾರಿ ಮಾಡಿದ್ದೀವಿ. ನಮ್ಮ ಪಕ್ಷ ಎಷ್ಟು ಸಧೃಡವಾಗಿದೆ. ಜಿಲ್ಲಾ ಉಸ್ತುವಾರಿ ಸಮಸ್ಯೆ ಇಲ್ಲ. ಕೆಲ ಜಿಲ್ಲೆಗಳಲ್ಲಿ ಸಚಿವರು ಇಲ್ಲ ಅಲ್ವಾ? ಅದನ್ನೆಲ್ಲ ನೋಡಿ ಹಾಕಬೇಕು ಅಲ್ವಾ? ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES