ಬೆಂಗಳೂರು : ಸಚಿವರ ಕಚೇರಿಯಲ್ಲಿ ಸಹೋದರ ದರ್ಬಾರ್ ನಡೆಸಿರುವ ಘಟನೆ ವಿಧಾನಸೌಧದಲ್ಲಿ ಇಂದು ನಡೆದಿದೆ. ಚೆನ್ನರಾಜ್ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರ ಚೆನ್ನರಾಜ್ ಹಟ್ಟಿಹೋಳಿ ಅವರೇ ಅಂಧ ದರ್ಬಾರ್ ಮಾಡಿರುವ ವ್ಯಕ್ತಿ. ಸಹೋದರನ ವರ್ತನೆಗೆ ಸ್ವತಃ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಮಾಧ್ಯಮದವರ ಬಳಿ ಕ್ಷಮೆ ಕೇಳಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಚೇರಿಯಲ್ಲಿ ಸಚಿವರು, ಅಧಿಕಾರಿಗಳನ್ನು ಬಿಟ್ಟು ಸಹೋದರ ಚೆನ್ನರಾಜ್ ಹಟ್ಟಿಹೊಳಿ ದರ್ಬಾರ್ ನಡೆಸಿದ್ದಾರೆ. ವಿಧಾನಸೌಧದ ಸಚಿವರ ಕಚೇರಿಯಲ್ಲಿ ಕುಳಿತು ತಾನೇ ಸಚಿವ ಎಂಬ ರೀತಿ ವರ್ತಿಸಿದ್ದಾರೆ. ತಾನು ಒಬ್ಬ ಎಂಎಲ್ ಸಿ ಎಂಬುದನ್ನು ಮರೆತು ಚೆನ್ನರಾಜ್ ಹಟ್ಟಿಹೋಳಿ ದರ್ಪ ಪ್ರದರ್ಶಿಸಿದ್ದಾರೆ.
ಇದನ್ನೂ ಓದಿ : ಸಿ.ಟಿ ರವಿ ಮನೆಯವರಿಗೂ ಫ್ರೀ ಅಂದಿದ್ರು, ಈಗ ಇಲ್ಲ ಅಂತಿದ್ದಾರೆ : ಸಿ.ಟಿ ರವಿ
ಮಾಧ್ಯಮಗಳ ಮೇಲೂ ಚೆನ್ನರಾಜ್ ಹಟ್ಟಿಹೊಳಿ ದರ್ಪದ ಮಾತುಗಳನ್ನಾಡಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಸ್ಕೀಂ ಅನುಮಾನಗಳ ಬಗ್ಗೆ ಪ್ರಶ್ನೆ ಮಾಡಲು ತೆರಳಿದ್ದ ಮಾಧ್ಯಮಗಳು. ಈ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸುಮ್ಮನಿದ್ದರೂ ಎಂಎಲ್ಸಿ ಚೆನ್ನರಾಜ್ ದರ್ಪ ಪ್ರದರ್ಶಿಸಿದ್ದಾರೆ.
ಗ್ಯಾರಂಟಿ ಸ್ಕೀಂ ಅರ್ಜಿ ನಕಲಿಯೋ? ಅಸಲಿಯೋ? ಎಂಬ ಬಗ್ಗೆ ಪ್ರಶ್ನಿಸಲು ಮಾಧ್ಯಮ ಪ್ರತಿನಿಧಿಗಳು ತೆರಳಿದ್ದರು. ಈ ವೇಳೆ ಹೊರಗೆ ನಡೆಯಿರಿ.. ಏನೂ ಉತ್ತರ ಕೊಡಲ್ಲ.. ಅಂತಾ ಮಾಧ್ಯಮ ಪ್ರತಿನಿಧಿಗಳಿಗೆ ಗದರಿದ್ದಾರೆ. ಅಲ್ಲದೆ, ಜನರ ಪತ್ರಗಳಿಗೂ ತಾವೇ ಸಚಿವರ ಕೊಠಡಿಯಲ್ಲಿ ಕುಳಿತು ಸಹಿ ಹಾಕುತ್ತಿದ್ದರು ಎಂದು ತಿಳಿದುಬಂದಿದೆ.