ಬೆಂಗಳೂರು : ಈ ಹಿಂದೆ ಬಿಜೆಪಿ ಸರ್ಕಾರ ಬಿಬಿಎಂಪಿ ವಾರ್ಡ್ ವಿಂಗಡಿಸಿತ್ತು. ಇದೀಗ, ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವೂ ಸಹ ಮತ್ತೆ ಬಿಬಿಎಂಪಿ ವಾರ್ಡ್ ಮರು ವಿಂಗಡಣೆಗೆ ಸಿದ್ದತೆ ನಡೆಸಿದೆ ಎನ್ನಲಾಗಿದೆ.
ಹೌದು, ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ಗಳನ್ನು ಅನಕ್ಕೂಲಕ್ಕೆ ತಕ್ಕಂತೆ ವಿಗಂಡಿಸಿ, 198 ವಾರ್ಡ್ಗಳನ್ನು 243ಕ್ಕೆ ಏರಿಸಿತ್ತು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಮರುವಿಂಗಡಣೆಗೆ ಯೋಜನೆ ರೂಪಿಸಿದೆ.
ಬಿಬಿಎಂಪಿ ವಾರ್ಡ್ಗಳ ಸಂಖ್ಯೆಯನ್ನು 250ಕ್ಕೆ ಏರಿಸಲು ಕಾಂಗ್ರೆಸ್ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ. ಈ ಸಂಬಂಧ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದ ಸಮಿತಿ ರಚನೆಯಾಗಿದ್ದು, ನಾಳೆ (ಜೂ.10) ಅಥವಾ ಸೋಮವಾರ ವಾರ್ಡ್ ಮರುವಿಂಗಡಣೆ ವರದಿ ಸಲ್ಲಿಕೆಯಾಗಲಿದೆ.
ಇದನ್ನೂ ಓದಿ : ಮತದಾರರ ಖಾಸಗಿ ಮಾಹಿತಿ ಕಲೆ ಹಾಕುವಂತೆ BBMPಯಿಂದಲೇ ಆದೇಶ
ಮೂರು ತಿಂಗಳಲ್ಲಿಯೇ ಚುನಾವಣೆ?
ಈ ವರದಿಯನ್ನು ಸರ್ಕಾರ ಒಪ್ಪಿದರೇ ಮುಂದಿನ ಮೂರು ತಿಂಗಳಲ್ಲಿಯೇ ಪಾಲಿಕೆ ಚುನಾವಣೆ ನಡೆಯುವುದು ಪಕ್ಕಾ ಎನ್ನಲಾಗುತ್ತಿದೆ. ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದ ಪೂರ್ವ ಚುನಾವಣಾ ಸಮಿತಿ ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಕುರಿತು ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಿದೆ.
ಸಮಿತಿಯು ಬೆಂಗಳೂರಿನ ಸಚಿವರು, ಶಾಸಕರು, ಕಾಂಗ್ರೆಸ್ ಮಾಜಿ ಮೇಯರ್ ಹಾಗೂ ಸದಸ್ಯರಿಂದ ಅಭಿಪ್ರಾಯ ಸಂಗ್ರಹಿಸಿ ರಾಜ್ಯ ಸರ್ಕಾರ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ವರದಿ ಸಲ್ಲಿಸಲಾಗುತ್ತದೆ.