ಬೆಂಗಳೂರು : ಕರ್ನಾಟಕ ದೇಶದಲ್ಲಿ ನಂಬರ್ ಒನ್ ಆಗಬೇಕು ಎಂಬುದು ಕಾಂಗ್ರೆಸ್ ಸರ್ಕಾರದ ಗುರಿ ಎಂದು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಮಾತನಾಡಿದ ಅವರು, ಯಾವುದೇ ಹಗರಣ ರಹಿತ ಆಡಳಿತ ನೀಡಬೇಕು. ಅದರಂತೆ ಆಡಳಿತ ನಡೆಸಲಾಗುವುದು ಎಂದು ಹೇಳಿದ್ದಾರೆ.
ಅರಣ್ಯ ಇಲಾಖೆಯಲ್ಲಿ ಸವಾಲು ಇದೆ. ಅವುಗಳನ್ನು ಮೆಟ್ಟಿ ನಿಂತು ಉತ್ತಮ ಕೆಲಸ ಮಾಡುತ್ತೇನೆ. ಮುಂದಿನ ಪೀಳಿಗೆಗಾಗಿ ಪ್ರಕೃತಿ ಮತ್ತು ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಆಗಿದೆ. ರಾಮನಗರ, ಚಿತ್ರದುರ್ಗ, ತುಮಕೂರಿಗೆ ಭೇಟಿ ನೀಡಿದ್ದೆ. ಅರಣ್ಯ ಮತ್ತು ಜನರ ಸಮಸ್ಯೆ ತಿಳಿದುಕೊಂಡು ಕೆಲಸ ಮಾಡಬೇಕಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಇದನ್ನೂ ಓದಿ : ನನಗೆ ರಾಜಕಾರಣ ಬೇಕೋ, ಬೇಡ್ವೋ ಅನ್ನಿಸಿಬಿಟ್ಟಿದೆ : ಡಿ.ಕೆ ಸುರೇಶ್
ಎಲ್ಲಿ ಅಕ್ರಮ ಇದೆ ಅದಕ್ಕೆ ತಡೆ
ಅರಣ್ಯ ಉಳಿಸಬೇಕು, ಅರಣ್ಯ ರಕ್ಷಣೆ ಮಾಡಬೇಕು. ಎಲ್ಲಿ ಅಕ್ರಮ ಇದೆ ಅದನ್ನು ತಡೆಯಬೇಕು. ಐದು ಕೋಟಿ ಸಸಿ, ಪ್ಲಾಸ್ಟಿಕ್ ಮುಕ್ತ ಮಾಡಲಿಕ್ಕೆ ಆಯ್ಕೆ ಮಾಡಲಾಗುವುದು. ಮಾನವ ಹಾಗೂ ಪ್ರಾಣಿ ಸಂಘರ್ಷ ಇದೆ. ಅದನ್ನು ತಡೆಯವ ಕ್ರಮ ಕೈಗೊಳ್ಳಬೇಕಿದೆ. ರಾಜಕೀಯ ಅಂದ್ರೆ ಸಮಾಜ ಸೇವೆ ಅಂತ ಬಂದಿದ್ದೇನೆ. ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಸೇವೆ ಮಾಡುವುದು ನನ್ನ ಧ್ಯೇಯ ಆಗಿದೆ ಎಂದು ಹೇಳಿದ್ದಾರೆ.
ಇನ್ನೂ ಜಾತಿ ಗಣತಿ ವರದಿ ಪಡೆಯುತ್ತೇವೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಈಶ್ವರ್ ಖಂಡ್ರೆ, ಸಚಿವ ಸಂಪುಟ ಸಭೆ ಆಗುತ್ತೆ. ಅಲ್ಲಿ ನಮ್ಮ ಅಭಿಪ್ರಾಯ ತಿಳಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಜನರ ಕೆಲಸ ದೇವರ ಕೆಲಸ
ನನ್ನ ಕಚೇರಿ ಪೂಜೆ ಮಾಡಿ ನನ್ನ ಇಲಾಖೆಯ (ಅರಣ್ಯ ಮತ್ತು ಪರಿಸರ) ಕೆಲಸ ಪ್ರಾರಂಭ ಮಾಡಿದ್ದೇನೆ. ಜನರ ಕೆಲಸ ದೇವರ ಕೆಲಸ. ಆ ರೀತಿಯಲ್ಲಿ ಪ್ರಾಮಾಣಿಕ ನಿಷ್ಠೆಯಿಂದ ದಕ್ಷತೆಯಿಂದ ಕೆಲಸ ಮಾಡುತ್ತೇನೆ ಎಂದಿದ್ದಾರೆ.