Friday, May 17, 2024

ಈ ಮುದ್ದು ಕಂದಮನಿಗೆ ಕಣ್ಣಿನ ಕ್ಯಾನ್ಸರ್ : ಬಾಲಕಿಗೆ ಬೇಕಿದೆ ನೆರವಿನ ಹಸ್ತ

ಶಿವಮೊಗ್ಗ : ಕಣ್ಣಿನ ಕ್ಯಾನ್ಸರ್ ಖಾಯಿಲೆಗೆ ಹುಟ್ಟಿನಿಂದ ನರುಳುತ್ತಿರುವ ಬಡ ರೈತ ಕುಟುಂಬದ ಮಗು ಮನ್ವಿತಾ ಚಿಕಿತ್ಸೆಗೆ ಪೋಷಕರು ಆರ್ಥಿಕ ಸಹಾಯಕ್ಕಾಗಿ ದಾನಿಗಳ ಮೊರೆ ಹೋಗಿದ್ದಾರೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಯಡೇಹಳ್ಳಿ ಗ್ರಾಮದ  ಘಂಟಿನಕೊಪ್ಪ ನಿವಾಸಿಗಳಾದ ರೈತ ನಾಗರಾಜ್  ಹಾಗೂ ವಿದ್ಯಾರ 4 ವರ್ಷದ ಮಗು ಮನ್ವಿತಾಗೆ ಈ ಅಪರೂಪದ ಖಾಯಿಲೆ ಆವರಿಸಿಕೊಂಡಿದ್ದು, ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಈ ಮುದ್ದು ಮಗು ಮನ್ವಿತಾಗೆ ಹುಟ್ಟಿನಿಂದಲೇ ಸಮಸ್ಯೆ ಆವರಿಸಿಕೊಂಡುಬಿಟ್ಟಿದೆ. ಕಣ್ಣಿನ ಕ್ಯಾನ್ಸರ್ ಬಂದಿದೆ. ಕೇವಲ 4 ತಿಂಗಳಿಗೆ ಕಣ್ಣಿನ ತೊಂದರೆಯನ್ನು ಗುರುತಿಸಿದ ಪೋಷಕರು, ಮಣಿಪಾಲ್ ಆಸ್ಪತ್ರೆಯಲ್ಲಿ ತೋರಿಸಿ ಡಾಕ್ಟರ್ ಸೂಚನೆಯಂತೆ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಶಂಕರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ : ದೊಡ್ಮನೆ ಜೊತೆ ನೇತ್ರದಾನದ ಹರಿಕಾರ ಭುಜಂಗ ಶೆಟ್ಟಿ ನಂಟು ಹೇಗಿತ್ತು ಗೊತ್ತಾ?

ಕಣ್ಣು ತೆಗೆಯುವ ಪರಿಸ್ಥಿತಿ ಬರುತ್ತೆ

ತಪಾಸಣೆ ಬಳಿಕ ಈ ಮಗುವಿಗೆ ಕಣ್ಣಿನಲ್ಲಿ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಇದು ಮಗುವಿನ ಪೋಷಕರಲ್ಲಿ ಆತಂಕ ಮನೆ ಮಾಡಿದ್ದು, ಕ್ಯಾನ್ಸರ್ ನಿಂದಾಗಿ, ಮಗು ಪೋಷಕರು ಜರ್ಜರಿತರಾಗಿದ್ದಾರೆ. ಕಣ್ಣು ತೆಗೆಯುವ ಪರಿಸ್ಥಿತಿ ಬರುತ್ತೆ ಎನ್ನಲಾಗಿದೆ. ಅಲ್ಲದೆ, ಇದು ಪಕ್ಕದ ಕಣ್ಣಿಗೂ ಹರಡದಂತೆ ಚಿಕಿತ್ಸೆ ನೀಡಲಾಗುತ್ತಿದೆ.

ಹಣಕಾಸು ಸೌಲಭ್ಯವಿಲ್ಲದೇ ನಲುಗಿದ ಕುಟುಂಬ

ಚಿಕಿತ್ಸೆ ಹಾಗೂ ಬೆಂಗಳೂರಿಗೆ ಹೋಗಿ ಬರಲು ಈ ಬಡ ಕುಟುಂಬಕ್ಕೆ ಯಾವುದೇ ಹಣಕಾಸಿನ ಸೌಲಭ್ಯಗಳಿಲ್ಲದೇ ನಲುಗಿ ಹೋಗಿದೆ. ತೊಂದರೆಯಿಂದ ಮಗುವಿಗೆ ಪ್ರತಿ ತಿಂಗಳು ತೋರಿಸಲು ಹಾಗೂ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಣಕಾಸಿನ ಸಮಸ್ಯೆಯಾಗುತ್ತಿದೆ.

ಈ ಸಂಬಂಧ ಆ ಮಗುವಿಗೆ ದಾನಿಗಳ ಸಹಕಾರದಿಂದ ಚಿಕಿತ್ಸೆ ಮುಂದುವರಿಸಲು ಆ ಬಡ ರೈತ ಕುಟುಂಬ ದಾನಿಗಳ ನಿರೀಕ್ಷೆಯಲ್ಲಿದೆ. ಮಗುವಿನ ಜೀವ ರಕ್ಷಣೆಗೆ ದಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES