Saturday, November 2, 2024

ಮದ್ಯ ಪ್ರಿಯರಿಗೆ ಶಾಕ್ ನೀಡಿದ ಸರ್ಕಾರ, ರೇಟ್ ನೋಡಿದ್ರೆ ಇಳಿಯುತ್ತೆ ಕಿಕ್!

ಬೆಂಗಳೂರು : ರಾಜ್ಯದಲ್ಲಿ 5 ಉಚಿತ ಗ್ಯಾರಂಟಿಗಳ ಅನುಷ್ಠಾನದ ಬೆನ್ನಲ್ಲೇ ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೆ ಬಿಗ್ ಶಾಕ್ ನೀಡಿದೆ. ಮದ್ಯದ ದರದಲ್ಲಿ ಪ್ರತಿ ಬಾಟಲ್ ಗೆ ರೂ.10 ರಿಂದ 20ರವರೆಗೆ ಹೆಚ್ಚಳ ಮಾಡಿದೆ.

ಗ್ಯಾರಂಟಿ ಜಾರಿ ಹೊರೆಯಿಂದ ಸಿದ್ದರಾಮಯ್ಯ ಸರ್ಕಾರ ಎಣ್ಣೆ ಪ್ರಿಯರ ಕಿಕ್ ಇಳಿಸಿದೆ. ಮದ್ಯ ಪ್ರಿಯರಿಗೆ ಶಾಕ್ ಎನ್ನುವಂತೆ ಬಿಯರ್ ಸೇರಿದಂತೆ ಹಾರ್ಡ್ ಡ್ರಿಂಕ್ಸ್ ಗಳ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ. ಸರ್ಕಾರದ ಸದ್ದಿಲ್ಲದ ನಿರ್ಧಾರದಿಂದ ಮದ್ಯ ಪ್ರಿಯರ ಜೇಬಿಗೆ ಕತ್ತರಿ ಬಿದ್ದಿದೆ.

ಹೀಗಿದೆ ಮದ್ಯದ ದರ

ಬಡ್ ವೈಸರ್ ಬಿಯರ್ ದರ 198 ರೂ. ನಿಂದ 220 ರೂ.ಗೆ ಹೆಚ್ಚಳ ಮಾಡಲಾಗಿದೆ. ಕಿಂಗ್ ಫಿಶರ್ ಬಿಯರ್ ದರವನ್ನು 160 ರೂ. ನಿಂದ 170 ರೂ.ಗೆ ಏರಿಕೆ ಮಾಡಲಾಗಿದೆ. ಯುಬಿ ಪ್ರೀಮಿಯಂ ದರ 125 ರೂ. ನಿಂದ 135 ರೂ., ಸ್ಟ್ರಾಂಗ್ ದರ 130 ರೂ. ನಿಂದ 135 ರೂ.ಗೆ ಹೆಚ್ಚಳ ಮಾಡಲಾಗಿದೆ.

ಇದನ್ನೂ ಓದಿ : ಗೃಹಜ್ಯೋತಿ ಯೋಜನೆ ಯಾರಿಗೆಲ್ಲಾ ಸಿಗಲಿದೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ!

ಹಾರ್ಡ್ ಡ್ರಿಂಕ್ಸ್ ದರವೂ ಹೆಚ್ಚಳ

ಇನ್ನೂ ಬಿಯರ್ ಅಷ್ಟೇ ಅಲ್ಲದೇ ಪುಲ್ ಬಾಟೆಲ್ ಹಾರ್ಡ್ ಡ್ರಿಂಕ್ಸ್ ಗಳಾದಂತ ಆಫೀಸರ್ ಚಾಯಿಸ್ ಪುಲ್ ಕ್ವಾಟರ್ ಬಾಟಲ್ ದರ 440 ರೂ. ನಿಂದ 568 ರೂ.ಗೆ ಹೆಚ್ಚಳ ಮಾಡಲಾಗಿದೆ. ಬಿಪಿ ದರ ರೂ.ನಿಂದ 568 ರೂ.ಗೆ ಹೆಚ್ಚಳವಾಗಿದೆ.

ಅಲ್ಲದೇ ಇತರೆ ಬಿಯರ್ ಸೇರಿದಂತೆ ಮದ್ಯದ ದರವನ್ನು ಪ್ರತಿ ಬಾಟಲ್ ಗೆ 10 ರೂ. ನಿಂದ 20 ರೂ.ವರೆಗೆ ಹೆಚ್ಚಳ ಮಾಡಲಾಗಿದೆ. ಮದ್ಯಪ್ರಿಯರಿಗೆ ಎಂಎಸ್ಎಐಎಲ್ ನಲ್ಲಿ ಎಂ.ಆರ್ ಪಿ ದರದಂತೆ ಸಿಕ್ಕರೇ, ಬಾರ್, ರೆಸ್ಟೋರೆಂಟ್ ಗಳಲ್ಲಿ 10 ರೂ. ನಿಂದ 20 ರೂ. ಹೆಚ್ಚಳ ಮಾಡಿ ಮಾರಾಟ ಮಾಡಲಾಗುತ್ತಿದೆ.

RELATED ARTICLES

Related Articles

TRENDING ARTICLES