Monday, December 23, 2024

ಜೆಡಿಎಸ್ ಮಾಜಿ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ಕಣ್ಣೀರು!

ಚಿಕ್ಕಬಳ್ಳಾಪುರ : ಆತ್ಮಾವಲೋಕನ ಸಭೆಯಲ್ಲಿ ಜೆಡಿಎಸ್ ಮಾಜಿ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ಅವರು ಕಾರ್ಯಕರ್ತರ ಎದುರಲ್ಲೇ ಕಣ್ಣೀರು ಹಾಕಿದ್ದಾರೆ.

ಚಿಂತಾಮಣಿ‌ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಸೋತ ಹಿನ್ನಲೆಯಲ್ಲಿ  ಜೆ.ಕೆ ಭವನದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಆತ್ಮಾವಲೋಕನ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ತನಗೆ ಮತ ನೀಡಿದ ಮತದಾರರಿಗೆ ಕೃತ್ನಜತೆಗಳನ್ನು‌ ಸಲ್ಲಿಸಿ ಅವರು ಭಾವುಕರಾಗಿದ್ದಾರೆ.

ನನ್ನ‌ ಸೋಲಿನಿಂದ ಜೆಡಿಎಸ್ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು. ನಾನು‌ ಎಲ್ಲೂ ಓಡಿ ಹೋಗಲ್ಲ. ಚಿಂತಾಮಣಿಯಲ್ಲಿಯೇ ಇದ್ದು ಸದಾಕಾಲ ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೆನೆ ಎಂದು‌‌ ಕಣ್ಣೀರು ಹಾಕುತ್ತಲೇ ಕಾರ್ಯಕರ್ತರಿಗೆ ಮಾಜಿ‌ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಗ್ಯಾರಂಟಿಗಳು ಚೀಪ್ ಪಾಪ್ಯುಲಾರಿಟಿ : ಚಲುವರಾಯಸ್ವಾಮಿ ವಿಡಿಯೋ ವೈರಲ್

ಕಾಂಗ್ರೆಸ್ ಸುಳ್ಳು ಭರವಸೆಗೆ ಮಾರು ಹೋದರು

ಬಿಜೆಪಿ ಪಕ್ಷದ ವಿರೋಧಿ ಅಲೆ, ಕಾಂಗ್ರೆಸ್ ಪಕ್ಷದ ಸುಳ್ಳು ಭರವಸೆಗಳಿಗೆ ಜನತೆ‌ ಮಾರು ಹೋಗಿದ್ದಾರೆ. ಅಲ್ಲದೆ, ಕೆಲ ಕಾರಣಾಂತರಗಳಿಂದ ನಮಗೆ ಸೋಲಾಗಿದೆ. ನನ್ನ ಸೋಲಿನಿಂದ ನಮ್ಮ ಪಕ್ಷದ ಯಾವುದೇ ಕಾರ್ಯಕರ್ತರು ಧೃತಿಗೇಡಬಾರದು. ನಮ್ಮ ವಿರೋಧಿಗಳು ಹೇಳಿಕೊಳ್ಳವ ಹಾಗೇ ಚಿಂತಾಮಣಿ ಬಿಟ್ಟು ಎಲ್ಲೂ ಓಡಿಹೋಗಲ್ಲ. ಸದಾಕಾಲ ಕ್ಷೇತ್ರದಲ್ಲಿಯೇ ಇದ್ದುಕೊಂಡು, ಎಂದಿನಂತೆ ನಿಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗಿ,‌ ಮುಂಬರುವ ಎಲ್ಲಾ ಚುನಾವಣೆಗಳನ್ನು ಎದುರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವ ವೇಳೆ ದುಃಖಿತರಾಗಿ ಕಣ್ಣೀರು ಹಾಕಿದಾಗ,‌ ಕಾರ್ಯಕರ್ತರು ಕೂಡ ಕಣ್ಣೀರು ಹಾಕಿ ಸದಾ ಕಾಲ ನಿಮ್ಮೊಂದಿಗೆ ನಾವು‌ ಇರುತ್ತೆವೆ ಎಂದು‌ ಧೈರ್ಯ ತುಂಬಿದ್ದಾರೆ.

RELATED ARTICLES

Related Articles

TRENDING ARTICLES